ಅವಳಿ ನಗರದಲ್ಲಿ ವಿವಿಧ ಬೈಕ್ ಗಳನ್ನು ಕಳ್ಳತನ ಮಾಡಿ ರಾಜಾರೋಷವಾಗಿ ಓಡಾಡುತ್ತಿದ್ದ ಖದೀಮ ಕಳ್ಳನನ್ನು ಬಂಧಿಸುವಲ್ಲಿ ಹುಬ್ಬಳ್ಳಿಯ ಶಹರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಅಮರಗೋಳ ನಿವಾಸಿಯಾದ ಬಾಬಾಜಾನ ಧಾರವಾಡ ಎಂಬಾತನೆ ಬೈಕ್ ಕಳ್ಳತನದ ಆರೋಪಿಯಾಗಿದ್ದಾನೆ. ಕಳೆದ 24 ರಂದು ನಗರದ ಹರ್ಷ ಕಾಂಪ್ಲೆಕ್ಸ್ ಹತ್ತಿರ ಬೈಕ್ ಕಳ್ಳತನದ ಪ್ರಕರಣ ಶಹರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಶಹರ ಠಾಣೆ ಇನ್ಸೆಕ್ಟರ್ ಮುಸ್ತಾಕ್ ಅಹ್ಮದ್ ಅಲಿ ಶೇಕ್ ಅವರ ನೇತೃತ್ವದಲ್ಲಿ ತಂಡ ರಚಿಸಿ ಆರೋಪಿ ಬಾಬಾಜಾನ ಬಂಧಿಸಿ ಠಾಣೆಗೆ ಕರೆತಂದು ವಿಚಾರಿಸಿದಾಗ ಬರೋಬ್ಬರಿ 3,65,000/- ಕಿಮ್ಮತ್ತಿನ 5 ಬೈಕ್ ಗಳನ್ನು ಕಳ್ಳತನ ಮಾಡಿದ್ದು ಬೆಳಕಿಗೆ ಬಂದಿದೆ. ಇದರಲ್ಲಿ 1ಹೋಂಡಾ ಆಕ್ಟಿವಾ, 1ಹೋಂಡಾ ಡಿಯೋ, 1ಟೀವಿಸ್ , 1ಟೀವಿಸ್ ಜುಪಿಟರ್, 1ಸುಜುಕಿ ಆಕ್ಸೆಸ್ ಒಟ್ಟು 5 ಬೈಕ್ ಗಳನ್ನು ಪೊಲೀಸರು ವಶಪಡಿಸಿಕೊಂಡು ಆರೋಪಿಯನ್ನು ಜೈಲಿಗೆ ಅಟ್ಟಿದ್ದಾರೆ.
