bellari

ಮೊಹರಂ ಅಲಾಯಿ ಕುಣಿಯ ಬೆಂಕಿಗೆ ಬಿದ್ದಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವು!!!

Share

ಮೊಹರಂ ಹಬ್ಬದ ಅಲಾಯಿ ಉತ್ಸವದ ವೇಳೆ ಆಯತಪ್ಪಿ ಉರಿಯುವ ಬೆಂಕಿ ಕುಣಿಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

ಬಳ್ಳಾರಿ ಜಿಲ್ಲೆಯ ಕುರಗೋಡು ತಾಲೂಕಿನ ಕ್ಯಾದಿಗೆಹಾಳು ಗ್ರಾಮದಲ್ಲಿ ಮೊಹರಂ ಹಬ್ಬದ ಸಂಪ್ರದಾಯದಂತೆ ಬೆಂಕಿ ತುಳಿಯುವ ವೇಳೆ ನಡೆದಿದ್ದ ಭೀಕರ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ದೇವರಾಜ (28) ಎಂಬ ಯುವಕ ಚಿಕಿತ್ಸೆ ಫಲಕಾರಿಯಾಗದೆ ವಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಹಬ್ಬದ ಆಚರಣೆಯ ಸಂದರ್ಭದಲ್ಲಿ ಒಂದು ಕೈಯಲ್ಲಿ ಪಂಜು ಹಾಗೂ ಮತ್ತೊಂದು ಕೈಯಲ್ಲಿ ಸೀಮೆಎಣ್ಣೆ ಬಾಟಲಿ ಹಿಡಿದು ಬೆಂಕಿ ತುಳಿಯುತ್ತಿದ್ದಾಗ ಯುವಕ ಆಯತಪ್ಪಿ ಅಲಾಯಿ ಕುಣಿಯ ಒಳಗೆ ಬಿದ್ದಿದ್ದನು. ಯುವಕ ಕೆಂಡದ ಹೊಂಡಕ್ಕೆ ಬೀಳುತ್ತಿದ್ದಂತೆಯೇ ಆತನ ಕೈಯಲ್ಲಿದ್ದ ಸೀಮೆಎಣ್ಣೆ ಸುರಿದು ಬೆಂಕಿ ಧಗಧಗನೆ ಹೊತ್ತಿ ಉರಿದಿತ್ತು. ತಕ್ಷಣವೇ ಸ್ಥಳೀಯರು ಸಮಯಪ್ರಜ್ಞೆ ಮೆರೆದು ಆತನನ್ನು ರಕ್ಷಿಸಿ, ಗಂಭೀರ ಗಾಯಗೊಂಡಿದ್ದ ದೇವರಾಜನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಶೇಕಡಾವಾರು ತೀವ್ರವಾಗಿ ಸುಟ್ಟ ಗಾಯಗಳಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಯುವಕ ಇಂದು ಮೃತಪಟ್ಟಿದ್ದಾನೆ. ಈ ಘಟನೆ ಕುರಿತು ಕುರುಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Tags:

error: Content is protected !!