Dharwad

ಧಾರವಾಡದ ಗಾಮನಗಟ್ಟಿಯಲ್ಲಿ ಅರ್ಥಪೂರ್ಣವಾಗಿ ಜರುಗಿದ್ದ ಹಿಂದೂ ಮುಸ್ಲಿಂ ಭಾವೈಕ್ಯತೆ ಹಬ್ಬ..

Share

ಹಿಂದೂ ಮುಸ್ಲಿಂ ಭಾವೈಕ್ಯತೆಯ ಹಬ್ಬವೆಂದೇ ಖ್ಯಾತಿ ಪಡೆದುಕೊಂಡಿರುವ ಮೊಹರಂ ಹಾಗೂ ತ್ಯಾಗ ಬಲಿದಾನ ಪ್ರತೀಕವಾದ ಹಬ್ಬವನ್ನು ಧಾರವಾಡದ ಗಾಮನಗಟ್ಟಿ ಗ್ರಾಮದಲ್ಲಿ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು.

ಏಸ್…ಧಾರವಾಡದ ಗಾಮನಗಟ್ಟಿ ಗ್ರಾಮದಲ್ಲಿ ಹಿಂದೂ ಮುಸ್ಲಿಂ ರು ಐದು ದಿನಗಳ ಹಿಂದೆ ಮೊಹರಂ ದೇವರನ್ನು ಶ್ರದ್ಧಾ ಭಕ್ತಿಯಿಂದ ಪ್ರತಿಷ್ಠಾಪನೆ ಮಾಡಿ, ಕೊನೆಯ ದಿನವಾದ ಶುಕ್ರವಾರದಂದು ದೇವರುಗಳನ್ನು ಶ್ರದ್ಧಾ ಭಕ್ತಿಯಿಂದ ಹಿಂದೂ ಮುಸ್ಲಿಂರು ಒಟ್ಟುಗೂಡಿಕೊಂಡು ಅದ್ದೂರಿಯಾಗಿ ಮೆರವಣಿಗೆ ಮೂಲಕ ವಿದಾಯ ಹೇಳುವ ಪದ್ಧತಿ ಇದ್ದು, ಇಲ್ಲಿ ಯಾವುದೇ ಜಾತಿ ಪಂತವಿಲ್ಲ ಎಂಬುದಕ್ಕೆ ಗಾಮನಗಟ್ಟಿ ಗ್ರಾಮದ ಮೊಹರಂ ಹಬ್ಬ ಸಾಕ್ಷಿಯಾಗಿತ್ತು. ಇನ್ನೂ ನೂರಾರು ವರ್ಷಗಳಿಂದ ಇಲ್ಲಿ ಎಲ್ಲರೂ ಮೊಹರಂ ಹಬ್ಬವನ್ನು ಒಟ್ಟುಗೂಡಿ ಆಚರಣೆ ಮಾಡುತ್ತಾ ಬಂದಿದ್ದು, ಅದನ್ನು ಈಗಲೂ ಊರಿನ ಹಿರಿಯರು ಹಾಗೂ ಯುವ ಸಮುದಾಯ ಮುದುವರಿಸಿಕೊಂಡು ಹೋಗುತ್ತಿರುವುದು ಬಹಳ ವಿಶೇವಾಗಿದೆ. ಕಳೆದ 5 ದಿನಗಳ ಕಾಲ ದರ್ಗಾದಲ್ಲಿ ಮೂರ್ತಿಗಳ ಪೂಜೆ ನಡೆಸಲಾಗುವುದು.

ಮೂರ್ತಿ ಪ್ರತಿಷ್ಠಾನದ ದಿನದಿಂದ ಐದು ದಿನಗಳು ಹಿಂದೂ ಮುಸ್ಲಿಂರು ಫಕಿರ ಆಗುತ್ತಾರೆ. ನಾಲ್ಕನೇಯ ದಿನದ ಕೊನೆಯ ಸಂಜೆ ಹಿಂದೂಗಳು ಕೆಲವರು ಮಾಂಸದ ವಿಶೇಷ ಅಡುಗೆ ಮಾಡಿ ಫಕೀರರಿಗೆ ಊಟ ಮಾಡಿಸುವುದು ಪದ್ದತಿಯಾಗಿದೆ. ಕೊನೆಯ ಐದನೇಯ ದಿನ ದೇವರುಗಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರುಸಿ ಪ್ರದಕ್ಷಿಣೆ ಹಾಕಲಾಗುತ್ತದೆ. ಐದನೇಯ ದಿನ ಮೂರ್ತಿಗಳು ಮೆರವಣಿಗೆ ಹೋಗುವ ಸಂದರ್ಭದಲ್ಲಿ ಮೆರವಣಿಗೆ ಭಾಗಿಯಾದ ಭಕ್ತರೆಲ್ಲರಿಗೂ ಮುಸ್ಲಿಂ ಭಾಂದವರು ಪಾನಕ ಹಂಚಿ ದೇವರ ಕೃಪೆಗೆ ಪಾತ್ರರಗುತ್ತಾರೆ. ಮೆರವಣಿಗೆಯ ವೇಳೆ ದೇವರ ಮೂರ್ತಿಗಳು ಮುಂದೆ ಮಕ್ಕಳ ಕೋಲಾಟ, ಜಗ್ಗಲಿಗೆ ಕುಣಿತ ಇನ್ನೂ ವಿವಿಧ ಮಜ್ಜಲುಗಳು ನೋಡುಗರು ಗಮನ ಸೆಳೆಯುತ್ತವೆ. ‌

Tags:

error: Content is protected !!