Dharwad

ಧಾರವಾಡ ಜಿಲ್ಲೆ ನವಲಗುಂದ ನಗರಸಭೆ ಕಚೇರಿ ಮೇಲೆ ಲೋಕಾಯುಕ್ತ ದಾಳಿ….DySP ನೇತೃತ್ವದಲ್ಲಿ ಧಾರವಾಡ ಲೋಕಾಯುಕ್ತ ದಾಳಿ.

Share

ನವಲಗುಂದ ಪಟ್ಟಣದ ಪುರಸಭೆ ಕಚೇರಿಯ ಮೇಲೆ ಧಾರವಾಡ ಲೋಕಾಯುಕ್ತ ಡಿವೈಎಸ್ಪಿ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ ವಿವಿಧ ಕಡತಗಳ ಪರಿಶೀಲನೆ ನಡೆಸಿದ್ದಾರೆ.

ವೈ-ದಾರವಾಡ ಜಿಲ್ಲೆಯ ನವಲಗುಂದ ಪಟ್ಟಣದ ಪುರಸಭೆ ಮೇಲೆ ದಾಳಿ ನಡೆದಿದ್ದು, ಪುರಸಭೆಗೆ ಆಗಮಿಸಿದ ಸಾರ್ವಜನಿಕರಿಗೆ ಲೋಕಾಯುಕ್ತ ಅಧಿಕಾರಿಗಳು ಯಾವ ಕೆಲಸದ ಮೇಲೆ ಬಂದಿದ್ದೀರಿ, ಎಷ್ಟು ದಿನಗಳ ಕಾಲ ಕೆಲಸದ ನಿಮಿತ್ಯ ಅಲೆದಾಡುತ್ತಿದ್ದೀರಿ ಎಂಬ ಮಾಹಿತಿಗಳನ್ನು ಕಲೆ ಹಾಕಿದರು. 4-5 ವಿವಿಧ ನೋಂದಣಿಗಳುಳ್ಳ ವಾಹನಗಳಲ್ಲಿ ಬಂದ ಲೋಕಾಯುಕ್ತ ಅಧಿಕಾರಿಗಳನ್ನು ಕಂಡು ಪುರಸಭೆಗೆ ಆಗಮಿಸಿದ ಸಾರ್ವಜನಿಕರು ಯಾರೂ ಈ ಅಧಿಕಾರಿಗಳು ಎಂದು ಗಾಬರಿಗೊಂಡಿದ್ದು ಕಂಡು ಬಂತು.

 

Tags:

error: Content is protected !!