Dharwad

ಕೊನೆಗೂ ಅರೆಸ್ಟ್ ಆದ ಧಾರವಾಡ ತಡಸಿಕೊಪ್ಪ ಬಳಿ ಶೂಟೌಟ್ ಪ್ರಕರಣದ ಮುಖ್ಯ ಆರೋಪಿ ಸುಂದರ್..

Share

ಕಳೆದ ಮೇ ತಿಂಗಳಲ್ಲಿ ಧಾರವಾಡ ವಿದ್ಯಾಗಿರಿ ಠಾಣೆ ವ್ಯಾಪ್ತಿಯಲ್ಲಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ನಡೆದಿದ್ದ ಶೂಟೌಟ್ ಪ್ರಕರಣದ ಮುಖ್ಯ ಆರೋಪಿಯನ್ನು ಕೊನೆಗೂ ಬಂಧಿಸಿ ಕರೆತರುವಲ್ಲಿ ಧಾರವಾಡ ವಿದ್ಯಾಗಿರಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಪ್ರಕರಣದ ಮುಖ್ಯ ಆರೋಪಿ ಸುಂದರಪೌಲ್ ಬಂಧಿತ ಮುಖ್ಯ ಆರೋಪಿಯಾಗಿದ್ದಾರೆ. ಕಳೆದ ಮೇ ತಿಂಗಳಲ್ಲಿ ಧಾರವಾಡ ತಡಸಿನಕೊಪ್ಪದ ಇಟಿಗಟ್ಟಿ ರಸ್ತೆಯಲ್ಲಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಶೂಟೌಟ್ ನಡೆದಿತ್ತು. ಈ ವೇಳೆ ತಡಸಿನಕೊಪ್ಪದ ವಿಠಲ ಅವರ ಕಾಲಿಗೆ ಗುಂಡು ತಗುಲಿತ್ತು. ಘಟನೆಯ ನಂತರ ವಿದ್ಯಾಗಿರಿ ಠಾಣೆಯ ಪೊಲೀಸರು ಐದು ಜನ ಆರೋಪಿಗಳನ್ನು ಬಂಧನ ಮಾಡಿದ್ದರು. ಫಿಲೋಮಿನಾ ಪಾಲ್, ಪ್ರವೀಣ್ ಸುತಾರ್, ಇಂದರ್‌ಪಾಲ್, ಬೆಂಜಮಿನ್ ಮತ್ತು ವಿಶಾಲ್ ಬಂಧಿತರಾಗಿದ್ದಾರೆ. ಆದರೆ ಮುಖ್ಯ ಆರೋಪಿ ದೇಶದ ವಿವಿಧ ರಾಜ್ಯಗಳಲ್ಲಿ ತಲೆ ಕುದಕು ತೆಗೆಸಿಕೊಂಡು ತಲೆ ಮರಿಸಿಕೊಂಡಿದ್ದು, ಕೊನೆಗೂ ಈಗ ತಮಿಳುನಾಡಿನ ನಾಗಪಟ್ಟಣಂನಲ್ಲಿ ಆರೋಪಿ ಸುಂದರ್ ಪೌಲ್ ಪೊಲೀಸರ ಬಲೆ ಬಿದಿದ್ದಾನೆ. ಸದ್ಯ ಆರೋಪಿಯನ್ನು ಕರೆ ತಂದಿರುವ ವಿದ್ಯಾಗಿರಿ ಠಾಣೆಯ ಪೊಲೀಸರು ವಿಚಾರಣೆ ಪೂರ್ಣಗೊಳಿಸಿ ಸದ್ಯ ಈಗ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Tags:

error: Content is protected !!