ಇತ್ತೀಚೆಗೆ ನಡೆದ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಸಿಬಿಎಸ್ಇ ಪರೀಕ್ಷೆಗಳಲ್ಲಿನ ಅವಾಂತರ ಖಂಡಿಸಿ ಹಾಗೂ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ ಸೇರಿ ಎನ್ಟಿಇ ರದ್ದು ಮಾಡುವಂತೆ ಆಗ್ರಹಿಸಿ, ಧಾರವಾಡದಲ್ಲಿ ವಿದ್ಯಾರ್ಥಿಗಳು ಬೀದಿಗೆ ಇಳಿದು ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಕಲಾಭವಮದಿಂದ ಸುಭಾಷ್ ರಸ್ತೆಯ ವಿವೇಕಾನಂದ ವೃತದವರೆಗೆ ಎಐಡಿಎಸ್ಓ ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು. ಪ್ರತಿಭಟನಾ ಮೆರವಣಿಗೆ ಉದ್ದಕ್ಕೂ ವಿದ್ಯಾರ್ಥಿಗಳು ಕೇಂದ್ರ ಶಿಕ್ಷಣ ಸಚಿವ ಹಾಗೂ ಎನ್ಟಿಎ ವಿರುದ್ಧ ಧಿಕ್ಕಾರ ಕೂಗಿ ಅಸಮಧಾನ ವ್ಯಕ್ತಪಡಿಸಿದರು. ನೀಟ್ ಯುಜಿ ಪರೀಕ್ಷೆಯಲ್ಲಿ ನಡೆದ ಅವಾಂತರಗಳಿಗೆ ಕೋಚಿಂಗ್ ಮಾಫಿಯಾಗಳೇ ಕಾರಣ. ಕೋಚಿಂಗ್ ಮಾಫಿಯಾ ಕೈಗೊಂಬೆಯಾಗಿ NTA ಕೆಲಸ ಮಾಡುತ್ತಿದೆ. “ಭ್ರಷ್ಟಾಚಾರವನ್ನು ತಡೆಗಟ್ಟುತ್ತೇವೆ ಎಂಬ ನೆಪದಲ್ಲಿ ಮೊದಲ ಬಾರಿಗೆ NEET ಪರೀಕ್ಷೆಯನ್ನು ಜಾರಿಗೊಳಿಸಿದಾಗಲೇ, AIDSO ವಿದ್ಯಾರ್ಥಿ ಸಂಘಟನೆಯಿಂದ ಹೋರಾಟಗಳು ನಡೆದಿದ್ದವು. ಇಂದು, ಒಂದು ವರ್ಷಕ್ಕೆ ಕೋಚಿಂಗ್ ಇಂಡಸ್ಟ್ರಿಗಳ ಟರ್ನ್ ಓವರ್ 60 ಸಾವಿರ ಕೋಟಿ ರೂಪಾಯಿಗಳಷ್ಟಿದ್ದು, 2030ರ ಹೊತ್ತಿಗೆ ಅದು 1 ಲಕ್ಷ ಕೋಟಿಗೆ ತಲುಪಲಿದೆ. ಅಂಕಿ-ಅಂಶಗಳ ಪ್ರಕಾರ ಭಾರತದಲ್ಲಿ ಒಂದು ಕುಟುಂಬ NEET ಕೋಚಿಂಗ್ ಪಡೆಯಲು ವರ್ಷಕ್ಕೆ 1.5 ಲಕ್ಷದಿಂದ 3.5 ಲಕ್ಷದವರೆಗೆ ಹಣ ಸುರಿಯಬೇಕು. ಆದರೆ, ಭಾರತದಲ್ಲಿನ ಕೇವಲ ಶೇಕಡ. 17ರಷ್ಟು ಕುಟುಂಬಗಳು ಮಾತ್ರ 3 ಲಕ್ಷಕ್ಕೂ ಹೆಚ್ಚು ವಾರ್ಷಿಕ ಆದಾಯ ಹೊಂದಿವೆ. ಇನ್ನುಳಿದ ಶೇಕಡ 83ರಷ್ಟು ಕುಟುಂಬಗಳ ವಿದ್ಯಾರ್ಥಿಗಳಿಗೆ ಕೋಚಿಂಗ್ನ ಹತ್ತಿರವೂ ಸುಳಿಯಲು ಸಾಧ್ಯವಿಲ್ಲ.” “ಪ್ರತಿ ವರ್ಷವೂ ಕೆಲವು “ಕೋಚಿಂಗ್ ಕಂಪನಿಗಳಿಗೆ” 50ರಿಂದ 60ರಷ್ಟು ಅಖಿಲ ಭಾರತ ರ್ಯಾಂಕ್ಗಳು ಸೇರ್ಪಡೆಯಾಗುತ್ತವೆ. ಅಂದರೆ, NEETನಂತಹ ಪರೀಕ್ಷೆಗಳನ್ನು ನಿಯಂತ್ರಿಸುತ್ತಿರುವುದೇ ಇಂತಹ “ಕೋಚಿಂಗ್ ಕಂಪನಿಗಳು”. NTA ಈ ಕೋಚಿಂಗ್ ಮಾಫಿಯಾಗಳ ಕೈಗೊಂಬೆಯಾಗಿದೆ ಎಂದು ಕಿಎಇಕಾರಿದರು. ಈ ಕೂಡಲೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಹಾಗೂ ಎನ್ಟಿಎ ರದ್ದು ಮಾಡಬೇಕು ಎಂದು ಆಗ್ರಹಿಸಿದರು. ಒಂದುವೇಳೆ ನಿರ್ಲಕ್ಷ್ಯ ತೋರಿದಲ್ಲಿ ಉಗ್ರವಾದ ಹೋರಾಟಕ್ಕೆ ಮುಂದಾಗುವುದಾಗಿ ಖಡಕ್ ಎಚ್ಚರಿಕೆ ನೀಡಿದರು.

