Dharwad

ಜಗತ್ತಿನಲ್ಲಿಯೇ ನಮ್ಮ ದೇಶ ಭತ್ತ ಬೆಳೆಯುವಲ್ಲಿ ನಂಬರ್-1,ಹಾಲು ಉತ್ಪಾದನೆಯಲ್ಲಿ ನಂಬರ್-2- ಪ್ರಹ್ಲಾದ್ ಜೋಶಿ.

Share

ಕೇಂದ್ರದಲ್ಲಿ ನಾವು ಕೃಷಿ ಉತ್ಪಾದನೆಯಲ್ಲಿ ಹೆಚ್ಚು ಪ್ರೋತ್ಸಾಹ ನೀಡುತ್ತಾ ಬಂದಿದ್ದು, ಈಗ ನಮ್ಮ ದೇಶ ಭತ್ತ ಬೆಳವಣಿಗೆಯಲ್ಲಿ ಜಗತ್ತಿನಲ್ಲಿ ನಂಬರ್ ಓನ್ ಜತೆಗೆ ಹಾಲು ಉತ್ಪಾದನೆಯಲ್ಲಿ ನಂಬರ್ ಎರಡನೇ ಸ್ಥಾನದಲ್ಲಿ ಇದ್ದೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ಧಾರವಾಡದ ಕೃಷಿ ವಿವಿಯ ಜ್ಞಾನಭಿವೃದ್ಧಿ ಕೇಂದ್ರದಲ್ಲಿ ಶನಿವಾರ ಪ್ರಧಾನ ಮಂತ್ರಿ‌ ಕೃಷಿ‌ ಸಮ್ಮಾನ್ ನಿಧಿ ಕಾರ್ಯಕ್ರಮ ವೀಕ್ಷಿಸಿದ ಬಳಿಕ ಮಾಧ್ಯಮಕ್ಕೆ ಮಾತನಾಡಿದ ಅವರು, ರೈತ ಪರ ಯೋಜನೆಗಳಿಗೆ ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶ ನೀಡದೇ ಕೇಂದ್ರ ಸರ್ಕಾರ ಯೋಜನೆಗಳನ್ನು ಜಾರಿಗೆ ತರುತ್ತಿದ್ದೇವೆ. ದೇಶದ 11 ಕೋಟಿ ರೈತರಿಗೆ 19 ನೂರು ಕೋಟಿ ಜಮಾ ಆಗಿದೆ. ಧಾರವಾಡ ಜಿಲ್ಲೆಗೆ 20 ಕೋಟಿ ಜಮಾ ಆಗಿದೆ. ಇಲ್ಲಿಯವರೆಗೆ 97 ಸಾವಿರದ 771 ರೈತರಿಗೆ 515 ಕೋಟಿ ಬಿಡುಗಡೆ ಆಗಿದೆ‌. ರಾಜ್ಯದ 41 ಲಕ್ಷ ರೈತರಿಗೆ 827 ಕೋಟಿ ಬಿಡುಗಡೆ. 4 ಲಕ್ಷ 6 ಸಾವಿರ ಕೋಟಿ ಹಣ ನೇರವಾಗಿ ರೈತರಿಗೆ ಜಮಾ ಆಗಿದೆ. ಕೃಷಿ ಸಮ್ಮಾನ್ ನಿಧಿ ಯೋಜನೆ ನಾವು ಘೋಷಣೆ ಮಾಡಿದ್ದೇವೆ. ಹೈನುಗಾರಿಕೆ, ಜೇನು ಸಾಕಾಣಿಕೆ ಇತರೇ ಕೃಷಿ ಚಟುವಟಿಕೆಗೆ ಪ್ರೋತ್ಸಾ ನೀಡಿದ್ದೇವೆ ಎಂದು ತಿಳಿಸಿದರು.

 

Tags:

error: Content is protected !!