Dharwad

ಧಾರವಾಡ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಇಮೇಲ್, ಕೆಲಕಾಲ ಆತಂಕ..

Share

ಧಾರವಾಡ ಜಿಲ್ಲಾ ನ್ಯಾಯಾಲಯಕ್ಕೆ ಇ ಮೇಲ್ ಮೂಲಕ ಹುಸಿ ಬಾಂಬ್ ಬೆದರಿಕೆ ಬಂದಿದ್ದು,ನ್ಯಾಯಾಲಯದಲ್ಲಿ ಕೆಲಕಾಲ ಆತಂಕದ ವಾತವಾರಣ ಸೃಷ್ಡಿಯಾಗಿತ್ತು. ಸ್ಥಳಕ್ಕೆ ಭೇಡಿ ನೀಡಿದ ಪೊಲೀಸರು ಕೋರ್ಟ ಸಿಬ್ಬಂದಿಯನ್ನು ಹೊರ ಕಳುಹಿಸಿ ಪರಿಶೀಲನೆ ನಡೆಸಿದರು.

ಧಾರವಾಡ ಜಿಲ್ಲಾ ನ್ಯಾಯಾಲಯಕ್ಕೆ ಈ ಹಿಂದೆ ಕೂಡ ಇ ಮೇಲ್ ಮೂಲಕ ಬಾಂಬ್ ಬೆದರಿಕೆಯ ಬಂದಿತ್ತು. ಈಗ ಮತ್ತೊಮ್ಮೆ ಬಾಂಬ್ ಬೆದರಿಕೆಯ ಸಂದೇಶ ಬಂದಿದ್ದು, ಕೋರ್ಟ್ ಕಲಾಪವನ್ನು ಸ್ಥಗಿತಗೊಳಿಸಿ, ಕೋರ್ಟ್ ಸಿಬ್ಬಂದಿಯನ್ನು ಹೊರಗಡೆ ಕಳುಹಿಸಿ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದವರು ತಪಾಸಣೆ ನಡೆಸಿದ್ದಾರೆ. Kurunanidhi.kundi@underworld dog ৯০ ಹೆಸರಿನ ಇಮೇಲ್‌ನಿಂದ ಈ ಮೇಲ್ ಬಂದಿದೆ. ನಿಮ್ಮ ನ್ಯಾಯಾಲಯದಲ್ಲಿ ಮಧ್ಯಾಹ್ನ 2 ಗಂಟೆಗೆ 23 ಸೈನೆಡ್ ವಾಯು ಗುಂಡುಗಳು ಸ್ಫೋಟಗೊಳ್ಳಲಿವೆ. ನಿನ್ನೆ ನಡೆದದ್ದು ಒಂದು ಪರೀಕ್ಷೆಯ ಪ್ರಯತ್ನ. ಇಂದು ನಡೆಯುವುದು ನಿಜ ಎಂದು ಈ ಮೇಲ್‌ನಲ್ಲಿ ತಿಳಿಸಲಾಗಿದೆ. ಸದ್ಯ ಧಾರವಾಡ ಜಿಲ್ಲಾ ನ್ಯಾಯಾಲಯದ ಸುತ್ತ ಬಿಗಿ ಭದ್ರತೆ ನೀಡಲಾಗಿದೆ.

Tags:

error: Content is protected !!