Belagavi

ಎಂಇಎಸ್ ಕಾರ್ಯಕ್ರಮಗಳಿಗೆ ಅನುಮತಿ ನೀಡದಂತೆ ಕರವೇ ಆಗ್ರಹ: ಬೆಳಗಾವಿ ಪೊಲೀಸ್ ಕಮಿಷನರ್‌ಗೆ ಮನವಿ; ಮಸಿ ಬಳಿಯುವ ಎಚ್ಚರಿಕೆ

Share

ಎಂಇಎಸ್ ಸಂಘಟನೆಯು ಭಾಷಾ ವಿವಾದ ಎಬ್ಬಿಸಿ ಸೌಹಾರ್ದತೆ ಕೆಡಿಸಲು ಯತ್ನಿಸುತ್ತಿದ್ದು, ಅವರ ಮುಂಬರುವ ರ್ಯಾ ಲಿ ಮತ್ತು ಸಭೆಗಳಿಗೆ ಪೊಲೀಸರು ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಹಾಗೂ ಕನ್ನಡಪರ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ. ಈ ಕುರಿತು ಕರವೇ ಮುಖಂಡರು ಇಂದು ಬೆಳಗಾವಿ ನಗರ ಪೊಲೀಸ್ ಆಯುಕ್ತರಿಗೆ ಮಹತ್ವದ ಮನವಿ ಪತ್ರ ಸಲ್ಲಿಸಿದ್ದಾರೆ.

ಬೆಳಗಾವಿಯಲ್ಲಿ ಎಂಇಎಸ್ ಸಂಘಟನೆಯವರು ನಡೆಸುತ್ತಿರುವ ಸಭೆಗಳಿಗೆ ಪೊಲೀಸರು ಅನುಮತಿ ನೀಡುತ್ತಿರುವುದು ಸರಿಯಲ್ಲ ಎಂದು ಕರವೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಮುಂಬರುವ ಜೂನ್ 22 ಹಾಗೂ 27ನೇ ತಾರೀಖಿನಂದು ಎಂಇಎಸ್ ಹಮ್ಮಿಕೊಂಡಿರುವ ರ್ಯಾ ಲಿ ಮತ್ತು ಕಾರ್ಯಕ್ರಮಗಳಿಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಪೊಲೀಸ್ ಕಮಿಷನರ್‌ಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಲಾಗಿದೆ. ಒಂದು ವೇಳೆ ನಿಯಮ ಮೀರಿ ಎಂಇಎಸ್ ನಾಯಕರಿಗೆ ಅನುಮತಿ ನೀಡಿದ್ದೇ ಆದಲ್ಲಿ, ಅವರು ಕಾರ್ಯಕ್ರಮ ನಡೆಸುವ ಜಾಗದಲ್ಲೇ ಕರವೇ ವತಿಯಿಂದಲೂ ಬೃಹತ್ ಮಟ್ಟದ ಹೋರಾಟ ನಡೆಸಿ, ಮಸಿ ಬಳಿಯುವ ಕೆಲಸವನ್ನು ಮಾಡಬೇಕಾಗುತ್ತದೆ ಎಂದು ಕರವೇ ಜಿಲ್ಲಾಧ್ಯಕ್ಷ ವಾಜೀದ್ ಹಿರೇಕೂಡಿ ಇದೇ ವೇಳೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಗಾವಿಯಲ್ಲಿ ಕನ್ನಡಿಗರು ಮತ್ತು ಮರಾಠಿಗರು ಸದ್ಯ ಅನ್ಯೋನ್ಯತೆಯಿಂದ ಬಾಳುತ್ತಿದ್ದು, ಮಹಾರಾಷ್ಟ್ರ ಏಕೀಕರಣ ಸಮಿತಿಯ (MES) ಮುಖಂಡರು ಮತ್ತೆ ಭಾಷಾ ವಿವಾದವನ್ನು ಎಬ್ಬಿಸಿ ಜನರ ನಡುವೆ ಜಗಳ ತಂದಿಡುವ ಪ್ರಚೋದನಾಕಾರಿ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕರವೇ ಮುಖಂಡ ಮಹಾದೇವ ತಳವಾರ ಆರೋಪಿಸಿದ್ದಾರೆ. ಕರ್ನಾಟಕ ಸರ್ಕಾರದ ನಿಯಮಾವಳಿಗಳ ಪ್ರಕಾರ ನಾಮಫಲಕಗಳಲ್ಲಿ ಶೇಕಡಾ 60 ರಷ್ಟು ಕನ್ನಡ ಕಡ್ಡಾಯವಾಗಿದ್ದು, ಇನ್ನುಳಿದ ಶೇಕಡಾ 40 ರಷ್ಟು ಭಾಗದಲ್ಲಿ ಮರಾಠಿ ಸೇರಿದಂತೆ ಯಾವುದೇ ಸ್ಥಳೀಯ ಭಾಷೆ ಬಳಸಲು ಮುಕ್ತ ಅವಕಾಶವಿದೆ. ಆದರೂ ಎಂಇಎಸ್ ನಾಯಕರು ಮರಾಠಿ ಭಾಷಿಕರನ್ನು ಕನ್ನಡಿಗರ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ ಎಂದು ಖಂಡಿಸಿರುವ ಕರವೇ, ಚಿತ್ರ 01.JPG ಯಲ್ಲಿರುವಂತೆ ಗಡಿಭಾಗದಲ್ಲಿ ಮರಾಠಿಗರಿಗೆ ಸಾಕಷ್ಟು ಸೌಲಭ್ಯಗಳಿದ್ದರೂ ಎಂಇಎಸ್ ಮರವಣಿಗೆಗೆ ಮುಂದಾಗುತ್ತಿರುವುದನ್ನು ತಡೆಯಬೇಕೆಂದು ಪೊಲೀಸರನ್ನು ಒತ್ತಾಯಿಸಿದೆ.
ಈ ವೇಳೆ ಬಲರಾಮ್ ಮಾಸೇನಟ್ಟಿ, ಬಾಳಪ್ಪ ಗುಡಗೇನಟ್ಟಿ, ಮಲ್ಲಪ್ಪ ಗುಡಗೇನಟ್ಟಿ, ಈಶ್ವರಲಿಂಗ ಪಾಟೀಲ್ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.

Tags:

error: Content is protected !!