ತಾಲೂಕಿನಲ್ಲಿ ಇತ್ತೀಚೆಗೆ ಮಿತಿಮೀರುತ್ತಿರುವ ಅಕ್ರಮ ಮಣ್ಣು ಸಾಗಣೆ, ಗಾಂಜಾ, ಜೂಜಾಟ (ಮಟ್ಕಾ) ಮತ್ತು ಅಕ್ರಮ ಸಾರಾಯಿ ದಂಧೆಗಳ ವಿರುದ್ಧ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ತೀವ್ರ ಆಕ್ರೋಶ ವ್ಯಕ್ತಪಡಿಸಿ ಅಕ್ರಮ ದಂಧೆಕೋರರಿಗೆ ಸಿಂಹಸ್ವಪ್ನವಾಗಿ ಪರಿಣಮಿಸಿದ್ದಾರೆ.
ಅವರು ಅಥಣಿ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಅಕ್ರಮವನ್ನು ಪ್ರಶ್ನಿಸುವ ಸಾರ್ವಜನಿಕರ ಮೇಲೆ ದಬ್ಬಾಳಿಕೆ ನಡೆಸುವವರ ವಿರುದ್ಧ ತಕ್ಷಣವೇ ಎಫ್ಐಆರ್ ದಾಖಲಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ಕಡಕ್ ಆದೇಶ ನೀಡಿದ್ದಾರೆ.

ಅಥಣಿ ಪರಿಸರದಲ್ಲಿ ಮತ್ತು ಪೊಲೀಸ್ ಠಾಣೆಯ ಮುಂದೆಯೇ ಲಾರಿಗಳಲ್ಲಿ ಅಕ್ರಮವಾಗಿ ಮಣ್ಣು ಸಾಗಣೆಯಾಗುತ್ತಿರುವ ಕುರಿತು ಮಾಧ್ಯಮಗಳು ಎಸ್ಪಿ ಗಮನ ಸೆಳೆದಾಗ ಉತ್ತರಿಸಿದ ಅವರು, ರೈತರು ತಮ್ಮ ಜಮೀನುಗಳ ಅಭಿವೃದ್ಧಿಗಾಗಿ ಕೆರೆಗಳಿಂದ ಮಣ್ಣು ಎತ್ತುವುದಕ್ಕೆ ಕಾನೂನಿನಲ್ಲಿ ಅವಕಾಶವಿದೆ.
ಇದು ಕೆರೆಗಳ ಹೂಳೆತ್ತಲು ಹಾಗೂ ರೈತರಿಗೆ ಇಬ್ಬರಿಗೂ ಅನುಕೂಲಕರ ಆದರೆ, ರೈತರ ಹೆಸರಿನಲ್ಲಿ ನೀರಾವರಿ ಇಲಾಖೆ, ಕಂದಾಯ ಇಲಾಖೆ ಅಥವಾ ಅರಣ್ಯ ಇಲಾಖೆಯ ಯಾವುದೇ ಅಧಿಕೃತ ಅನುಮತಿ ಪತ್ರ ಇಲ್ಲದೆ ವಾಣಿಜ್ಯ ಉದ್ದೇಶಕ್ಕಾಗಿ ಮಣ್ಣು ಸಾಗಿಸುವ ದಂಧೆಕೋರರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದರು
ಈ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಪತ್ರ ಬರೆದು ಜಂಟಿ ಸರ್ವೇ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು
ದಬ್ಬಾಳಿಕೆ ಮಾಡಿದರೆ ಜೈಲು ನಿಶ್ಚಿತ: ಅಕ್ರಮ ಮಣ್ಣು ದಂಧೆಯನ್ನು ಪ್ರಶ್ನಿಸುವ ಸ್ಥಳೀಯರ ಮೇಲೆ ದಂಧೆಕೋರರು ದಬ್ಬಾಳಿಕೆ ಮಾಡುತ್ತಿರುವ ದೂರುಗಳ ಕುರಿತು ಪ್ರತಿಕ್ರಿಯಿಸಿದ ಎಸ್ಪಿ, ಅಕ್ರಮದ ವಿರುದ್ಧ ಧ್ವನಿ ಎತ್ತುವ ಸಾರ್ವಜನಿಕರ ಮೇಲೆ ಯಾರು ದಬ್ಬಾಳಿಕೆ ಅಥವಾ ಬೆದರಿಕೆ ಹಾಕುತ್ತಾರೋ, ಅವರ ವಿರುದ್ಧ ತಕ್ಷಣವೇ ಕಠಿಣ ಸೆಕ್ಷನ್ಗಳಡಿ ಎಫ್ಐಆರ್ ದಾಖಲಿಸಿ ಜೈಲಿಗಟ್ಟಲಾಗುವುದು ಎಂದು ಎಚ್ಚರಿಸಿದರು
ಗ್ರಾಮೀಣ ಭಾಗಗಳಲ್ಲಿ ಅಪರಾಧಗಳು ಹೆಚ್ಚಾಗಲು ‘ಲೂಸ್ ಲಿಕರ್’ (ಹಳ್ಳಿ ಹಳ್ಳಿಗಳಲ್ಲಿ ಸಿಗುವ ಅಕ್ರಮ ಸಾರಾಯಿ) ಪ್ರಮುಖ ಕಾರಣವಾಗಿದೆ ಎಂದು ಎಸ್ಪಿ ವಿಶ್ಲೇಷಿಸಿದರು ರಾತ್ರಿ ವೇಳೆ ಸುಲಭವಾಗಿ ಸಾರಾಯಿ ಸಿಗುವುದರಿಂದ ಯುವಕರು ಗಲಾಟೆ, ಕೊಲೆಗಳಂತಹ ಅಪರಾಧ ಕೃತ್ಯಗಳಲ್ಲಿ ತೊಡಗುತ್ತಿದ್ದಾರೆ. ಇತ್ತೀಚೆಗೆ ಕುಡಚಿ ಮತ್ತು ಯಮಕನಮರಡಿಯಲ್ಲಿ ಬೃಹತ್ ಕಾರ್ಯಾಚರಣೆ ನಡೆಸಲಾಗಿದ್ದು, ಮಟ್ಕಾ ಹಾಗೂ ಜೂಜಾಟವನ್ನು ಸಂಪೂರ್ಣ ಮಟ್ಟ ಹಾಕಲಾಗುವುದು” ಎಂದರು
KSP ಆಪ್ ಬಳಸಿ-ಪಾರದರ್ಶಕತೆಗೆ ಆದ್ಯತೆ: ಸಾರ್ವಜನಿಕರು ತಮ್ಮ ಸುತ್ತಮುತ್ತ ನಡೆಯುವ ಅಕ್ರಮಗಳ ವಿಡಿಯೋ ಮತ್ತು ಫೋಟೋಗಳನ್ನು ಕರ್ನಾಟಕ ಪೊಲೀಸ್ ಇಲಾಖೆಯ ‘KSP App’ ಮೂಲಕ ನೇರವಾಗಿ ತಮಗೆಸಾರ್ವಜನಿಕರು ತಮ್ಮ ಸುತ್ತಮುತ್ತ ನಡೆಯುವ ಅಕ್ರಮಗಳ ವಿಡಿಯೋ ಮತ್ತು ಫೋಟೋಗಳನ್ನು ಕರ್ನಾಟಕ ಪೊಲೀಸ್ ಇಲಾಖೆಯ ‘KSP App’ ಮೂಲಕ ನೇರವಾಗಿ ತಮಗೆ ಕಳುಹಿಸಬಹುದು ಈ ಆಪ್ನಲ್ಲಿ ಬರುವ ದೂರುಗಳು ನೇರವಾಗಿ ನನಗೂ ಮತ್ತು ನನ್ನ ಹಿರಿಯ ಅಧಿಕಾರಿಗಳಿಗೂ ತಲುಪುತ್ತವೆ. ತಪ್ಪು ಮಾಹಿತಿ ಮುಚ್ಚಿಡಲು ಯಾರಿಗೂ ಸಾಧ್ಯವಿಲ್ಲ ಮಾಹಿತಿ ಬಂದ ತಕ್ಷಣ ಕ್ರಮ ಕೈಗೊಳ್ಳದ ಬಿಟ್ ಕಾಸ್ಟೇಬಲ್, ಸಬ್ಇನ್ಸ್ಪೆಕ್ಟರ್ಗಳ ಮೇಲೆ ಇಲಾಖಾ ತನಿಖೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಈ ವ್ಯವಸ್ಥೆಯಲ್ಲಿ ನಾನೂ ಸಹ ಜವಾಬ್ದಾರನಾಗಿರುತ್ತೇನೆ ಎಂದು ಹೇಳುವ ಮೂಲಕ ಪೊಲೀಸ್ ಇಲಾಖೆಯಲ್ಲಿ ಪಾರದರ್ಶಕತೆ ತರಲು ಸಂಕಲ್ಪ ಮಾಡಿದರು.
ಅಥಣಿ ಪೊಲೀಸ್ ಠಾಣೆ ವಿಭಜನೆಗೆ ಪ್ರಸ್ತಾವನೆ: ಅಥಣಿ ಪೊಲೀಸ್ ಠಾಣೆಯ ವ್ಯಾಪ್ತಿ ದೊಡ್ಡದಾಗಿದ್ದು, ವಾರ್ಷಿಕ ಸಾವಿರಕ್ಕೂ ಹೆಚ್ಚು ಎಫ್ಐಆರ್ ದಾಖಲಾಗುತ್ತಿರುವುದು ಅಧಿಕಾರಿಗಳ ಕೊರತೆಗೆ ಕಾರಣವಾಗಿದೆ ಎಂಬುದನ್ನು ಎಸ್ಪಿ ಒಪ್ಪಿಕೊಂಡರು ಸಾರ್ವಜನಿಕರ ಹಿತದೃಷ್ಟಿಯಿಂದ ಅಥಣಿ ಠಾಣೆಯನ್ನು ವಿಭಜಿಸಿ ‘ಅಥಣಿ ಟೌನ್’, ‘ಅಥಣಿ ಗ್ರಾಮೀಣ’ ಮತ್ತು ಪ್ರತ್ಯೇಕ ‘ಟ್ರಾಫಿಕ್ ಪೊಲೀಸ್ ಠಾಣೆ’ಯನ್ನಾಗಿ ಮಾಡಲು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ . ಹೊಸ ಪೊಲೀಸ್ ಕಟ್ಟಡ ನಿರ್ಮಾಣಕ್ಕಾಗಿ 30 ಗುಂಟೆ ಜಾಗವನ್ನು ಗುರುತಿಸಲಾಗಿದ್ದು, ಶೀಘ್ರದಲ್ಲೇ ಮಂಜೂರಾತಿ ಸಿಗಲಿದೆ ಎಂದು ಭರವಸೆ ನೀಡಿದರು.
