Dharwad

ಶಾಲಾ ಆಡಳಿತ ಮಂಡಳಿ ನಿರ್ಲಕ್ಷ್ಯದಿಂದ ಮಗು ಸಾವು ಆರೋಪ..

Share

ಆ ಬಾಲಕನಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಅನ್ನೋದು ಹೆತ್ತವರ ಕನಸಾಗಿತ್ತು.. ಮಗನ ಭವಿಷ್ಯ ಉಜ್ವಲವಾಗಲಿ ಎಂಬ ಕಾರಣಕ್ಕೆ ಸರ್ಕಾರಿ ಶಾಲೆಯಿಂದ ಖಾಸಗಿ ಶಾಲೆಗೆ ದಾಖಲಿಸಿದ್ದರು.. ಆದರೆ ಖಾಸಗಿ ಶಾಲೆಗೆ ದಾಖಲಾದ ಕೇವಲ ಎಂಟು ದಿನಗಳಲ್ಲೇ ಬಾಲಕ ದಾರುಣವಾಗಿ ಮೃತಪಟ್ಟಿದ್ದಾನೆ. ಕುಟುಂಬಸ್ಥರ ಆಕ್ರಂದನ ಅಕ್ಕಪಕ್ಕದವರ ಕಣ್ಣಂಚಲ್ಲಿ ನೀರು ತರುವಂತಿತ್ತು. ಜತೆಗೆ ಶಾಲಾ ಆಡಳಿತ ಮಂಡಳಿ ವಿರುದ್ಧ ನಿರ್ಲಕ್ಷ್ಯದ ಆರೋಪವು ಕೇಳಿಬಂದಿದೆ… ಎಲ್ಲಿದೂ ನಡೆದಿದ್ದು ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್ ವಿವರ.

ಎರಡನೇ ಮಹಡಿಯಿಂದ ಬಿದ್ದು ಬಾಲಕ ಸಾವು… ಶಾಲಾ ಆಡಳಿತ ಮಂಡಳಿ ನಿರ್ಲಕ್ಷ್ಯ ಆರೋಪ… ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ ದೃಶ್ಯ…ಎಸ್ ಈ ಎಲ್ಲ ದೃಶ್ಯಗಳಿಗೆ ಧಾರವಾಡದ ಹುಬ್ಬಳ್ಳಿ ಕಿಮ್ಸ್ ಆವರಣ ಸಾಕ್ಷಿಯಾಗಿತ್ತು. ಅಂದಹಾಗೆ ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದ ಅಣ್ಣಿಗೇರಿ ರಸ್ತೆಯಲ್ಲಿರುವ ವಿದ್ಯಾ ಜ್ಯೋತಿ ಪ್ರಾಥಮಿಕ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಆಕಾಶ್ ನೀಲಣ್ಣವರ್ ಎಂಬ ಬಾಲಕ ಎರಡನೇ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ಮೂಲತಃ ನವಲಗುಂದ ಪಟ್ಟಣದ ಶಾನವಾಡ ಗ್ರಾಮದ ಆಕಾಶನನ್ನು, ತಕ್ಷಣ ಆಸ್ಪತ್ರೆಗೆ ದಾಖಲಿಸಿಲು ಮುಂದಾಗಿದ್ದಾರೆ, ಅಲ್ಲಿ ಹೋಗೋಣ ಇಲ್ಲಿ ಹೋಗಣ ಅನ್ನುವಷ್ಟರಲ್ಲಿ ಸಮಯ ಮೀರುತಾ ಬಂದಿದೆ. ಕೊನೆಗೆ ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ತೆಗೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲಿ ಮಗು ಕೊನೆಯಿಸಿರು ಏಳೆದಿದೆ. ಇನ್ನೂ ಮಗುವಿನ ಸಾವಿನ ಹಿಂದೆ ಶಾಲೆ ಸಿಬ್ಬಂದಿಯ ಕಿರುಕುಳದ ಗಂಭೀರ ಆರೋಪ ಕೇಳಿ ಬಂದಿದೆ. ಮಗು ಎಲ್ಲದರಲ್ಲೂ ಉತ್ತಮ ಎನಿಸಿಕೊಂಡಿದ್ದನ್ನು, ಆದರೆ ಮಗುವಿಗೆ ಪದೇ ಪದೇ ಹೊಡೆಯಲಾಗಿದೆ. ಪೊಷಕರ ಮುಂದೆ ವಿಷಯ ತಿಳಿಸಿದಕ್ಕೆ ಮತ್ತೆ ಹೊಡೆಯಲಾಗಿದೆ. ಆಸ್ಒತ್ರೆಗೆ ದಾಖಲಿಸಲು ಬಂದಾಗ, ನನ್ನ ಮಗ ಅಪ್ಪಾ ತಲೆ ಮುಟ್ಟಬೇಡಾ ನೋವಾಗುತ್ತೆ. ನನಗೆ ತಲೆ ಹೊಡೆದಿದ್ದಾರೆ ಎಂದು ಕಣವರಿಸುತ್ತಲೇ ಪ್ರಾಣ ಬಿಟ್ಡಿದ್ದಾನೆ ಎಂದು ಮಗುವಿನ ತಂದೆ ಕಣ್ಣೀರು ಹಾಕುತ್ತಲೇ ಆರೋಪಿಸಿದ್ದಾರೆ‌. ಸದ್ಯ ಈಗ ಬಾಲಕನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಶಾಲೆಯ ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದಲೇ ಈ ದುರಂತ ಸಂಭವಿಸಿದೆ ಎಂದು ಮಗುವಿನ ತಾಯಿ ಕೂಡಾ ಅಳಲು ತೋಡಿಕೊಂಡಿದ್ದಾರೆ.

ಇನ್ನೂ, ಕೇವಲ ಎಂಟು ದಿನಗಳ ಹಿಂದಷ್ಟೇ ಆಕಾಶ್‌ನನ್ನು ಈ ಖಾಸಗಿ ಶಾಲೆಗೆ ದಾಖಲಿಸಲಾಗಿತ್ತು. ಈ ಮೊದಲು ಆತ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಮಗನಿಗೆ ಉತ್ತಮ ಹಾಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಪೋಷಕರು ಖಾಸಗಿ ಶಾಲೆಗೆ ಸೇರಿಸಿದ್ದರು. ಆದರೆ ಶಾಲೆಗೆ ಸೇರಿದ ಕೆಲವೇ ದಿನಗಳಲ್ಲಿ ಮಗನನ್ನು ಕಳೆದುಕೊಂಡ ಕುಟುಂಬ ದುಃಖದ ಸಾಗರದಲ್ಲಿ ಮುಳುಗಿದೆ. ಶಾಲಾ ಆವರಣದಲ್ಲಿ ಕುಟುಂಬಸ್ಥರ ಆಕ್ರಂದನ ಮನಕಲಕುವಂತಿತ್ತು. ಘಟನೆ ಕುರಿತು ಮಾಹಿತಿ ಪಡೆದ ನವಲಗುಂದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪೋಷಕರು ಶಾಲಾ ಆಡಳಿತ ಮಂಡಳಿ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಧಾರವಾಡ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಯವರು ತನಿಖೆ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಒಟ್ಟಾರೆಯಾಗಿ, ಮಗನ ಭವಿಷ್ಯ ಉಜ್ವಲವಾಗಲಿ ಎಂದು ಕನಸು ಕಂಡಿದ್ದ ಪೋಷಕರ ಬದುಕಿನಲ್ಲಿ ವಿಧಿ ಕ್ರೂರ ಆಟವಾಡಿದೆ. ಬಾಳಿ ಬದುಕಬೇಕಿದ್ದ ಕಿರಿಯ ಬಾಲಕ ಶಾಲೆಯ ಎರಡನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವುದು ನೋವಿನ ಸಂಗತಿಯಾಗಿದೆ. ಪ್ರಕರಣದ ನಿಖರ ಕಾರಣ ಏನು ಎಂಬುದು ಪೊಲೀಸ್ ತನಿಖೆಯಿಂದಷ್ಟೇ ಹೊರಬರಬೇಕಿದೆ.

ಮಂಜುನಾಥ ಡಿ ಇನ್ ನ್ಯೂಸ್ ಧಾರವಾಡ.

Tags:

error: Content is protected !!