ಗ್ಯಾರಂಟಿ ಯೋಜನೆಗಳ ನಿರ್ವಹಣೆಗೆ ಹಣ ಕ್ರೋಢೀಕರಣದಲ್ಲಿ ರಾಜ್ಯ ಸರ್ಕಾರಕ್ಕೆ ತೊಂದರೆಯಾಗಿದೆ. ಹೀಗಾಗಿಯೇ ಸುಧಾರಣೆ ಹೆಸರಿನಲ್ಲಿ ಬಡವರಿಗೆ ನೀಡಲಾಗುವ ಯೋಜನೆಗಳಿಗೆ ಕತ್ತರಿ ಹಾಕಲಾಗುತ್ತಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಅವರು ಮಾಧ್ಯಮಗಾರರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ 1.5 ಲಕ್ಷಕ್ಕೂ ಹೆಚ್ಚು ಮಹಿಳೆಯರು ತೆರಿಗೆ ಪಾವತಿದಾರರು ಇದ್ದಾರೆ. ಅವರಿಗ್ಯಾಕೆ ಗ್ಯಾರಂಟಿ ಎಂದು ಪ್ರಶ್ನಿಸುತ್ತಿದ್ದಾರೆ. ಚುನಾವಣೆ ಸಂದರ್ಭ ಎಲ್ಲರಿಗೂ ಉಚಿತ ಎಂದು ಹೇಳಿದವರಿಗೆ ಈಗ ಇವೆಲ್ಲವೂ ನೆನಪಾಗುತ್ತಿದೆಯಾ? ಕೆಲವೆಡೆ ಅಕ್ರಮ ಆಗಿದೆ ಎಂದಾದರೆ ನಿಮ್ಮ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರುಗಳೇನು ಕತ್ತೆ ಕಾಯುತ್ತಿದ್ದರಾ? ಸರ್ಕಾರದಿಂದ ನೂರಾರು ಕೋಟಿ ಸಂಬಳ ಪಡೆದವರು ಏನು ಮಾಡುತ್ತಿದ್ದರು ಎಂದವರು ಪ್ರಶ್ನಿಸಿದ್ದಾರೆ.

ಇನ್ನು ಎಸ್.ಐ.ಆರ್ ನಲ್ಲಿ ಅಧಿಕಾರಿಗಳನ್ನು ಎತ್ತಿ ಕಟ್ಟುವ ಕೆಲಸವನ್ನು ಸರ್ಕಾರವೇ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರದ ರಾಹುಲ್ ಗಾಂಧಿ ಅವರು ಎರಡು ದೇಶದ ನಾಗರೀಕತೆ ಪಡೆದುಕೊಂಡಿದ್ದಾರೆ. ಚುನಾವಣಾ ಅಕ್ರಮ ತಡೆಯಲು ಕೇಂದ್ರ ಚುನಾವಣಾ ಆಯೋಗ ನಿರ್ಣಯಕೊಂಡಿದೆ. ಆದರೇ, ಸಂವಿಧಾನದ ವಿರುದ್ಧ ಕಾಂಗ್ರೆಸ್ಸಿನವರು ಕೆಲಸ ಮಾಡುತ್ತಿದ್ದು, ಇದು ಅಕ್ಷಮ್ಯ ಅಪರಾಧವೆಂದರು.
