BELAGAVI

ಬೆಳಗಾವಿಯಲ್ಲಿ ಜೂನ್ 19ಕ್ಕೆ ‘ವಿಕಸಿತ ಭಾರತ ಉದ್ಯೋಗ’ ರಾಷ್ಟ್ರೀಯ ಕಾರ್ಯಕ್ರಮ

Share

ಪ್ರಧಾನ ಮಂತ್ರಿ ವಿಕಸಿತ ಭಾರತದ ಉದ್ಯೋಗ ಯೋಜನೆಯಡಿಯಲ್ಲಿ ರಾಷ್ಟ್ರ ಮಟ್ಟದ ಕಾರ್ಯಕ್ರಮವನ್ನು ಜೂ.19 ರಂದು ಬೆಳಗಾವಿಯ ಫೌಂಡರಿ ಕ್ಲಸ್ಟರ್ ನಲ್ಲಿ ಆಯೋಜಿಸಲಾಗಿದೆ ಎಂದು ಹುಬ್ಬಳ್ಳಿಯ ಭವಿಷ್ಯ‌‌ ನಿಧಿ ಪ್ರಾದೇಶಿಕ ಆಯುಕ್ತ ನಿರಂಜನ ಗುಪ್ತಾ ಹೇಳಿದರು.

ಬುಧವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪಿಎಂ, ವಿಬಿಆರ್ ವೈ ಮತ್ತು ಸಾಮಾಜಿಕ ಭದ್ರತಾ ಪ್ರಯೋಜನೆಗಳ ಬಗ್ಗೆ ಜಾಗೃತಿ ಮೂಡಸುವುದು, ಉದ್ಯೋಗದಾತರು ಮತ್ತು ಲಾಭಧಾರರ ನಡುವೆ ಸಂವಹನವನ್ನು ಸುಗಮಗೊಳಿಸುವುದು, ಹೊಸದಾಗಿ ನೇಮಕವಾದ ನೌಕರರಿಗೆ ನೇಮಕ ಪತ್ರ ಹಂಚುವುದು ಹಾಗೂ ಶ್ರಮಿಕ‌ ಕಲ್ಯಾಣದ ಯೋಜನೆಗಳು ಮತ್ತು ಇತ್ತೀಚಿನ ಕಾರ್ಮಿಕ ಸುಧಾರಣೆಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವಾಗಿದೆ ಎಂದರು.ಕಾರ್ಯಕ್ರಮದಲ್ಲಿ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಆಗಮಿಸಲಿದ್ದಾರೆ. ಸುಮಾರು 200 ಜನ ಭಾಗವಹಿಸುವ ನಿರೀಕ್ಷೆ ಇದೆ. ಇದರ ಲಾಭವನ್ನು ಜನರು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಸಹಾಯಕ ಭವಿಷ್ಯ‌ ನಿಧಿ ಆಯುಕ್ತರು ಶುಭಂ ಮೀನಾ, ಹುಬ್ಬಳ್ಳಿಯ ಪ್ರವರ್ತನಾಧಿಕಾರಿ ಮಹೇಶ್ ಜಿಂದೆ ಇನ್ನುಳಿದವರು ಉಪಸ್ಥಿತರಿದ್ಧರು.

Tags:

error: Content is protected !!