ಉತ್ತರ ಕರ್ನಾಟಕದಲ್ಲಿ ಹಿಂದೂ ಮುಸ್ಲಿಂರು ಒಟ್ಟಾಗಿ ಆಚರಣೆ ಮಾಡುವ ಮೊಹರಂ ಹಬ್ಬದ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ, ಧಾರವಾಡದಲ್ಲಿ ಪೊಲೀಸ್ ಇಲಾಖೆ ಹಿಂದು ಮುಸ್ಲಿಂ ಪ್ರಮುಖರ ಕರೆದು ಶಾಂತಿ ಸೌಹಾರ್ದ್ ಸಭೆ ಮಂಗಳವಾರ ಮಾಡಲಾಯಿತು.

ಧಾರವಾಡ ಎಸಿಪಿ ಕಚೇರಿಯಲ್ಲಿ ಧಾರವಾಡ ಎಸಿಪಿ ಪ್ರಶಾಂತ್ ಸಿದ್ಧನಗೌಡ ನೇತೃತ್ವದಲ್ಲಿ ಈ ಸಭೆ ಜರುಗಿದ್ದು, ಸಭೆಯಲ್ಲಿ ಧಾರವಾಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಹಿಂದೂ ಮುಸ್ಲಿಂ ಪ್ರಮುಖ ಮುಖಂಡರು ಭಾಗಿಯಾಗಿದ್ದರು. ಪ್ರಮುಖರ ಸಲಹೆ ಹಾಗೂ ಅಹ್ವಾಲುಗಳನ್ನು ಸ್ವೀಕರಿಸಿದ ಬಳಿಕ ಮಾತನಾಡಿದ ಎಸಿಪಿ ಪ್ರಶಾಂತ್ ಸಿದ್ಧನಗೌಡರ ಅವರು, ಮೊಹರಮ್ ಹಬ್ಬವನ್ನು ಈ ಹಿಂದಿನಿಂದಲೂ ಧಾರವಾಡದಲ್ಲಿ ಎರಡು ಸಮುದಾಯ ವಿಶಿಷ್ಟವಾಗಿ ಆಚರಣೆ ಮಾಡಿಕೊಂಡು ಬರುತ್ತಿದೆ. ಪ್ರಸಕ್ತ ವರ್ಷದ ಮೊಹರಂ ಹಬ್ಬ ಈಗ ಬಂದಿದ್ದು, ಈ ಹಿಂದಿನಿಂದ ಶಾಂತಿ ಸೌಹಾರ್ದತೆಯಿಂದ ಹಬ್ಬ ಎರಡು ಸಮುದಾಯ ಹೇಗೆ ನಡೆಸಿಕೊಂಡು ಬಂದಿದೆ ಅದನ್ನು ಈ ವರ್ಷವು ಮುಂದುವರೆಸಿಬೇಕು. ಶಾಂತಿ ಸೌಹಾರ್ದತೆಯ ಹಬ್ಬಕ್ಕೆ ಪೊಲೀಸ್ ಇಲಸಖೆಯಿಂದ ಸಂಪೂರ್ಣ ಸಹಕಾರವಿರುತ್ತದೆ. ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದೇ ಕೊಡದೇ ಹಬ್ಬ ಆಚರಣೆ ಮಾಡುವ ಮೂಲಕ ಇತರೆ ಜಿಲ್ಲೆಗಳಿಗೆ ಧಾರವಾಡ ಮಾದರಿಯಾಗಬೇಕು ಎಂದು ಕರೆ ನೀಡಿದರು. ಒಂದು ವೇಳೆ ಕಾನೂನು ಮೀರಿ ಯಾರಾದ್ರೂ ವರ್ತಿಸಿದಲ್ಲಿ ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಇದೇ ವೇಳೆ ಎರಡು ಸಮುದಾಯದ ಪ್ರಮುಖ ಮುಖಂಡರಿಗೆ ಎಚ್ಚರಿಕೆ ನೀಡಿದರು.

