Dharwad

ಕಣಿವೆಯಲ್ಲಿ ಈಜಲು ಹೋಗಿ ಯುವಕ ಸಾವು, ಕುಟುಂಬಸ್ಥರ ಆಕ್ರಂದನ..

Share

ಯುವಕರು ಸೇರಿಕೊಂಡು ಪಾರ್ಟಿ ಮಾಡಲು ಹೋಗಿ ಅಲ್ಲೇ ಇದ್ದ ಕಲ್ಲಿನ ಕಣಿವೆಯಲ್ಲಿ ಈಜಲು ಮುಂದಾಗಿ ತಡದ ಯುವಕನೊಬ್ಬ ಕಲ್ಲಿನ ಕಣಿವೆಯಲ್ಲಿ ಸಿಲುಕಿಕೊಂಡು ಸಾವನ್ನಪ್ಪಿದ ಘಟನೆ ಧಾರವಾಡದ ಕಲಘಟಗಿ ತಾಲ್ಲೂಕಿನ ದುಮ್ಮಾವಾಡ ಬಳಿಯ ನೀರಸಾಗರ ಪಕ್ಕದ ಕಣಿವೆಯಲ್ಲಿ ಮಂಗಳವಾರ ಸಂಜೆ ನಡೆದಿದೆ.

ವೈ- ಹುಬ್ಬಳ್ಳಿಯ ಸಿದ್ದಾರೂಢರ ಮಠ ಪಕ್ಕದ ಶಿವ ಶಂಕರ ಕಾಲೋನಿಯ ನಿವಾಸಿ ಸುಮಿತ್ ಎಂಬಾತನೇ ಸಾವನ್ನಪ್ಪಿದ ಯುವಕ. ಫ್ರೆಂಡ್ಸ್ ಎಲ್ಲರೂ ಸೇರಿಕೊಂಡು ಪಾರ್ಟಿ ಮಾಡಲು ಹೋಗಿದ್ದಾರೆ. ನಂತರ ಬಿಸಿಲಿನ ತಾಪಕ್ಕೆಂದು ಕಲ್ಲಿನ ಕಣಿವೆಯಲ್ಲಿ ಈಜಲು ಹೋಗಿದ್ದಾರೆ. ಸುಮೀತ್‌ಗೆ ಈಜಲು ಬರುತ್ತಿರಲಿಲ್ಲ. ಆದರೂ ಸ್ನೆಹಿತರ ಧೈರ್ಯದ ಮೇಲೆ ನೀರಲ್ಲಿ ಬಿದ್ದು ಕಲ್ಲಿನಲ್ಲಿ ಸಿಲುಕಿಕೊಂಡು ಸಾವನ್ನಪ್ಪಿದ್ದಾನೆ. ಎಷ್ಟೋ ಹೊತ್ತು ಮೃತ ದೇಹವನ್ನು ಹುಡುಕಿದರೂ ಸಿಕ್ಕಿರಲಿಲ್ಲ. ನಂತರ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ ನಂತರ ಸ್ಥಳಕ್ಕೆ ಪೊಲೀಸರು ಅಗ್ನಿಶಾಮಕ ದಳ ಬಂದು ಕಲ್ಲಿನ ಕಣಿವೆಯಲ್ಲಿ ಇಳಿದು ಸುಮಾರು ಗಂಟೆಗಳ ಕಾಲ ಕಾರ್ಯಾಚರಣೆ ಮಾಡಿ, ಶವವನ್ನು ಹೊರಗೆ ತೆಗೆದುಕೊಂಡು ಬಂದಿದ್ದಾರೆ. ಸುಮೀತ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Tags:

error: Content is protected !!