ಕಳೆದ ಶುಕ್ರವಾರ ಧಾರವಾಡ ಹೊಸ ಬಸ ನಿಲ್ದಾಣದಲ್ಲಿ ಜೈಲರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೃತ ಜೈಲರ್ ಪತ್ನಿ ಲಕ್ಷ್ಮೀ ನನ್ನ ಪತಿಯ ಸಾವಿಗೆ ಡಿಐಜಿ ಅಲೋಕಕುಮಾರವರೇ ನೇರ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕಳೆದ ಮೇ ತಿಂಗಳಲ್ಲಿ ಧಾರವಾಡ ಕೇಂದ್ರ ಕಾರಾಗೃಹದ ಜೈಲಾರಿಗಿದ್ದ ವೇಳೆ ಮೃತ ಜೈಲರ್ ಕರ್ತವ್ಯ ಲೋಪದಡಿಯಲ್ಲಿ ಅಮಾನತು ಮಾಡಲಾಗಿತ್ತು. ಬಳಿಕ ಸಿದ್ದರಾಮಪ್ಪ ಅವರನ್ನು ಮೈಸೂರು ಕೇಂದ್ರ ಕಾರಾಗೃಹಕ್ಕೆ ವರ್ಗಾಯಿಸಿ ಕಳೆದ ಶುಕ್ರವಾರ ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಆದರೆ ಸಿದ್ದರಾಮಪ್ಪ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸದ್ಯ ಈಗ ಸಾವಿಗೆ ಮೃತನ ಪತ್ನಿ ಲಕ್ಷ್ಮೀಯವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ, ನನ್ನ ಪತಿಯ ಸಾವಿಗೆ ಡಿಐಜಿ ಅಲೋಕಕುಮಾರವರೇ ಕಾರಣಾರಿದ್ದಾರೆ. ಅಮಾನತು ಮಾಡಿದ ಬಳಿಕ ಅವರಿಗೆ ಸಾಕಷ್ಟು ವಿಚಾರಣೆ ರೂಪದಲ್ಲಿ ಕಿರುಕುಳ ನೀಡಲಾಗಿದೆ. ಮಾನಸಿಕವಾಗಿ ಕಿರುಕುಳ ತಡೆಯಲಾಗದೆ, ನನ್ನ ಪತಿ ಈಗ ಜೀವ ಕಳೆದುಕೊಂಡಿದ್ದಾರೆ. ನಮ್ಮ ಪತಿಯ ಸಾವಿಗೆ ನ್ಯಾಯಬೇಕು ಎಂದು ಆಗ್ರಹಿಸಿದ್ದಾರೆ.

