ಕಳೆದ ಮೇ 8ರಂದು ಧಾರವಾಡ ತಾಲ್ಲೂಕಿನ ಗರಗದಲ್ಲಿ ಲವ್ ಜಿಹಾದ್‌ದಿಂದ ಅಪ್ರಾಪ್ತ ಯುವತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಕರ್ತವ್ಯ ಲೋಪದಡಿಯಲ್ಲಿ ಗರಗ ಪೊಲೀಸ್ ಠಾಣೆಯ ಸಿಪಿಐರನ್ನು ಅಮಾನತು ಮಾಡಿ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಆದೇಶ ಹೊರಡಿಸಿದ್ದಾರೆ.
ಧಾರವಾಡ ತಾಲ್ಲೂಕಿನ ಗರಗ ಗ್ರಾಮದ ಪೂರ್ಣಿಮಾ ಅಪ್ರಾಪ್ತ ಯುವತಿಯೊಂದಿಗೆ ಗರಗ ಗ್ರಾಮದ ಇಬ್ಬರು ಮುಸ್ಲಿಂ ಯುವಕರಾದ ನಹೀಮ್ ಹಾಗೂ ಸೋಹಿಲ್ ಮುಲ್ಲಾ ಇಬ್ಬರು ಲವ್ ಜಿಹಾದ್‌ಗೆ ಬಳಸಿಕೊಂಡು ದೈಹಿಕ ಸಂಪರ್ಕದ ಪೋಟೋ ಸೊಸಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದ ಹಿನ್ನಲೆಯಲ್ಲಿ, ಅಪ್ರಾಪ್ತ ಯುವತಿ ಆತ್ಮಹತ್ಯೆ ಶರಣಾಗಿದ್ದಳು. ಆರಂಭದಲ್ಲಿ ಯುವತಿ ಕುಟುಂಬಸ್ಥರು ದೂರು ನೀಡಿದರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಮಿನಾಮೇಶ ಎನಿಸುತ್ತಿದ್ದರಂತೆಂದು ಆರೋಪ ಕೇಳಿ ಬಂದಿತ್ತು. ಸಂಘಟನೆಗಳಿಗೆ ವಿಷಯ ತಿಳಿಯುತ್ತಿದ್ದಂತೆ ಆಕ್ರೋಶ ಹೆಚ್ಚಾದ ಬೆನ್ನಲ್ಲೇ ಈಗ ಇಬ್ಬರು ಆರೋಪಿಗಳನ್ನು ಗರಗ ಠಾಣೆ ಪೊಲೀಸರು ಹೆಡೆಮುರಿ ಕಟ್ಟಿದ್ದು, ಈ ಪ್ರಕರಣದ ಆರಂಭದ ತನಿಖೆಯಲ್ಲಿ ಗರಗ ಠಾಣೆಯ ಸಿಪಿಐ ಶಿವಯೋಗಿ ಲೋಹಾರ ಕರ್ತವ್ಯ ಲೋಪದಡಿಯಲ್ಲಿ ಈಗ ಅಮಾನತು ಮಾಡಲಾಗಿದೆ.

