Dharwad

ಧಾರವಾಡದ ಗರಗದಲ್ಲಿ ಲವ್ ಜಿಹಾದ್ ಸದ್ದು, ಅಪ್ರಾಪ್ತ ಯುವತಿ ಸಾವಿಗೆ ಹೆಚ್ಚಿದ್ದ ಜನಾಕ್ರೋಶ..

Share

ಇತ್ತಿಚೆಗೆ ಧಾರವಾಡ ತಾಲ್ಲೂಕಿನ ಗರಗದಲ್ಲಿ ಲವ್ ಜಿಹಾದ್‌‌ದಿಂದ ಅಪ್ರಾಪ್ತ ಯುವತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಜನಾಕ್ರೋಶ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಳೆದ ದಿನವೂ ಕೂಡಾ ಗರಗದಲ್ಲಿ ದಲಿತ ಸಂಘಟನೆ ಸೇರಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿ ಆರೋಪಿಗಳಿಗೆ ಗಲ್ಲು ಶಿಕ್ಷೆಗೆ ಗುರಿಪಡಿಸುವ ನಿಟ್ಟಿನಲ್ಲಿ ತನಿಖೆ ಆಗ್ರಹಿಸಿದರು.

ಧಾರವಾಡ ತಾಲ್ಲೂಕಿನ ಗರಗ ಗ್ರಾಮದ ಪೂರ್ಣಿಮಾ ಅಪ್ರಾಪ್ತ ಯುವತಿಯೊಂದಿಗೆ ಗರಗ ಗ್ರಾಮದ ಇಬ್ಬರು ಮುಸ್ಲಿಂ ಯುವಕರಾದ ನಹೀಮ್ ಬೇಗ್ ಹಾಗೂ ಸೋಹಿಲ್ ಮುಲ್ಲಾ ಇಬ್ಬರು ಲವ್ ಜಿಹಾದ್‌ಗೆ ಬಳಸಿಕೊಂಡು ದೈಹಿಕ ಸಂಪರ್ಕದ ಪೋಟೋ ಸೊಸಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದ ಹಿನ್ನಲೆಯಲ್ಲಿ ಯುವತಿ ಆತ್ಮಹತ್ಯೆ ಶರಣಾಗಿದ್ದಳು. ಆರಂಭದಲ್ಲಿ ಯುವತಿ ಕುಟುಂಬಸ್ಥರು ದೂರು ನೀಡಿದರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಮಿನಾಮೇಶ ಎನಿಸುತ್ತಿದ್ದರಂತೆಂದು ಆರೋಪ ಕೇಳಿ ಬಂದಿತ್ತು. ಸಂಘಟನೆಗಳಿಗೆ ವಿಷಯ ತಿಳಿಯುತ್ತಿದ್ದಂತೆ ಆಕ್ರೋಶ ಹೆಚ್ಚಾದ ಬೆನ್ನಲ್ಲೇ ಈಗ ಇಬ್ಬರು ಆರೋಪಿಗಳನ್ನು ಗರಗ ಠಾಣೆ ಪೊಲೀಸರು ಹೆಡೆಮುರಿ ಕಟ್ಟಿದ್ದು, ಸದ್ಯ ಈ ಬಂಧಿತ ಆರೋಪಿಗಳನ್ನು ಗಲ್ಲು ಶಿಕ್ಷೆಗೆ ಗುರಿಯಾಗುವ ನಿಟ್ಟಿನಲ್ಲಿ ತನಿಖೆ ನಡೆಯಬೇಕು. ಅಪ್ರಾಪ್ತ ದಲಿತ ಹೆಣ್ಮಗಳನ್ನು, ಲವ್ ಜಿಹಾದ್‌ಗೆ ಬಳಸಿಕೊಂಡ್ ಸಮಾಜ ಘಾತುಕ ಇಬ್ಬರು ಒಂದು ಜೀವ ಬಲಿ ಪಡೆದಿದ್ದಾರೆ. ಈ ರೀತಿಯ ಪ್ರಕರಣದಿಂದ ಇನ್ನೊಂದು ಕುಟುಂಬ ಕಣ್ಣೀರು ಹಾಕಬಾರದೆಂಬ ನಿಟ್ಟಿನಲ್ಲಿ ಈ ಪ್ರಕರಣದ ತನಿಖೆಯಾಗಿ ಮಗಳ ಕಳೆದುಕೊಂಡ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದರು. ‌ಇಲ್ಲವಾದಲ್ಲಿ ನಿರ್ಲಕ್ಷ್ಯ ಕಂಡುಬಂದಲ್ಲಿ ಹೋರಾಟ ಹೆಚ್ಚಾಗುತ್ತದೆ ಎಂದು ಪೊಲೀಸ್ ಇಲಾಖೆ ಹಾಗೂ ರಾಜ್ಯ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದರು.

Tags:

error: Content is protected !!