Dharwad

ಧಾರವಾಡ ಎಸ್ಪಿ ವ್ಯಾಪ್ತಿಯ ರೌಡಿ ಶೀಟರಗಳ ಮನೆಗೆ ಪೊಲೀಸ್ ಠಾಣಾ ಅಧಿಕಾರಿಗಳ ದಿಢೀರ್ ಭೇಟಿ ಪರಿಶೀಲನೆ..

Share

ಮುಖ್ಯಮಂತ್ರಿ ಡಿ.ಕೆ.ಶಿವಕುಮಾ‌ರವರು ತಮ್ಮ ಪ್ರಥಮ‌ ಪತ್ರಿಗೋಷ್ಠಿಯಲ್ಲಿ ರೌಡಿಶೀಟರಗಳ ಕುರಿತು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ ಬೆನ್ನಲೆ, ಅಲರ್ಟಾಗಿರುವ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕಟ್ಟುನಿಟ್ಟಿನ ನಿಗಾವಹಿಸಿಲು ಸೂಚನೆ ನೀಡಿದ ಹಿನ್ನೆಲೆಯಲ್ಲಿ, ಅಯಾ ಠಾಣಾ ಅಧಿಕಾರಿಗಳು ರೌಡಿಶೀಟರಗಳ ನಿವಾಸಕ್ಕೆ ದಿಢೀರ ಬೇಟಿ ನೀಡಿ ಪರಿಶೀಲನೆ ನಡೆಸಿದರು.

ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ಹಾಗೂ ಅಣ್ಣಿಗೇರಿ ಪೊಲೀಸ್ ಠಾಣೆಯ ಅಧಿಕಾರಿಗಳು ತಮ್ಮ ತಮ್ಮ ಠಾಣೆ ವ್ಯಾಪ್ತಿಯ ರೌಡಿಶೀಟರಗಳ ನಿವಾಸಕ್ಕೆ ಭೇಟಿ ನೀಡಿ, ತಲಾಷ್ ನಡೆಸಿದರು. ಜತೆಗೆ ಅವರ ಕೆಒಸ ಕಾರ್ಯಗಳ ಕುರಿತು ಮಾಹಿತಿ ಕಲೆ ಹಾಕಿದ ಬಳಿಕ, ಕಾನೂನು ಬಾಹಿರ ಚಟುವಡಿಕೆಗಳಲ್ಲಿ ಭಾಗಿಯಾದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳುವುದಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ರೌಡಿಗಳ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಡಿ.ಕೆ.ಶಿವಕುಮಾ‌ರ್ ಅವರು ಸೂಚನೆ ನೀಡಿದ ಹಿನ್ನೆಲೆ, ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರ ಮಾರ್ಗದರ್ಶನದಲ್ಲಿ ಧಾರವಾಡ ತಾಲೂಕಿನ ಗರಗ, ಅಣ್ಣಿಗೇರಿ ಪಟ್ಟಣ, ನವಲಗುಂದ ಪಟ್ಟಣ, ಕಲಘಟಗಿ ಪಟ್ಟಣ, ಹುಬ್ಬಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ವಿವಿಧ ರೌಡಿಶೀಟರ್‌ಗಳ ಮನೆಗೆ ಭೇಟಿ ನೀಡಿದ ಪೊಲೀಸರು ಅವರ ಮನೆಯಲ್ಲಿ ತಲಾಷ್‌ ನಡೆಸುವ ಕಾರ್ಯ ನಡೆಸಲಾಗುತ್ತಿದೆ. ಅಲ್ಲದೇ ರೌಡಿಶೀಟರ್‌ಗಳಿಗೆ ಕಾನೂನು ಬಾಹಿರ ಚಟುವಟಿಕೆಗಳನ್ನು ಕೈಬಿಡುವಂತೆಯೂ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.‌

Tags:

error: Content is protected !!