arrest

ಬೆಳಗಾವಿಯಲ್ಲಿ ಖಾಕಿ ಪಡೆ ಭರ್ಜರಿ ಜೂಜಾಟ ದಾಳಿ: ಒಟ್ಟು 26 ಇಸ್ಪೀಟ್ ಆಟಗಾರರ ಬಂಧನ, ನಗದು ಜಪ್ತಿ

Share

ಬೆಳಗಾವಿ ಮಹಾನಗರ ಹಾಗೂ ಉಪನಗರ ಪ್ರದೇಶಗಳಲ್ಲಿ ಅಕ್ರಮ ಜೂಜಾಟ ದಂಧೆಗಳ ವಿರುದ್ಧ ಪೊಲೀಸರು ತಮ್ಮ ಸರಣಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ಕಾಕತಿ ಮತ್ತು ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಇಸ್ಪೀಟ್ ಆಟವಾಡುತ್ತಿದ್ದ ಒಟ್ಟು 26 ಜನರನ್ನು ಖಾಕಿ ಪಡೆ ಬಂಧಿಸಿದೆ.

ಬೆಳಗಾವಿ ನಗರದ ಕಾಕತಿ ಹಾಗೂ ಎಪಿಎಂಸಿ ಠಾಣಾ ವ್ಯಾಪ್ತಿಯಲ್ಲಿ ಜೂನ್ 13, 2026 ರಂದು ಪೊಲೀಸರು ನಡೆಸಿದ ಎರಡು ಪ್ರತ್ಯೇಕ ದಾಳಿಗಳಲ್ಲಿ ಒಟ್ಟು 26 ಜೂಜುಕೋರರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲಾಗಿದೆ. ಕಾಕತಿ ಠಾಣೆಯ ಪಿಎಸ್ಐ ಮೃತ್ಯುಂಜಯ ಮುಳವದ ಹಾಗೂ ಸಿಬ್ಬಂದಿಯವರು ಹೊನಗಾ ಇಂಡಸ್ಟ್ರಿಯಲ್ ಏರಿಯಾದ ಸಾರ್ವಜನಿಕ ಸ್ಥಳದ ಮೇಲೆ ದಾಳಿ ನಡೆಸಿ, ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಯಾಸೀನ ಮಹಮ್ಮದ ಹುಸೇನ ತಹಶೀಲ್ದಾರ, ಆರೀಫ ಮಹಮ್ಮದಗೌಸ ಶಹಾಪುರಿ, ಮಹಮ್ಮದ ತಯ್ಯುಮ್ ಜತ್ರಿ, ಮನ್ಸೂರ ದಾವೂದಸಾಬ ಬಾಗವಾನ, ಸಹೇರಾಜ ಸ ಮಹಮ್ಮದಗೌಸ ಶಹಾಪುರಿ, ಫೈಜಾನ ಅಲ್ಲಾಪಹ ಮುಜಾವರ, ಶಾನೂರ ಬಾಳಪ್ಪ ಮುಚ್ಚಂದಿ, ಆರೀಫ ಅಜುರುದ್ದೀನ ಮುಲ್ಲಾ, ಸುನೀಲ ಅಷ್ಟೇಕರ, ದಸ್ತಗೀರಸಾಬು ನೂರಅಹ್ಮದ ದೇಸಾಯಿ, ವಾಸಿಮ ಕಾಸಿಮ ಮುಜಾವರ, ಅಲ್ಲಾಫ ರಾಸಿಂಸಾಬು ಮುಜಾವರ, ದಸ್ತಗಿರ ಅಜಮುದ್ದೀನ ಮುಲ್ಲಾ, ಆರೀಫ ಮಹಮ್ಮದಶಫಿ ರಾಕತೀಕರ, ಸಕಲನ ಹರೂನ ತಂಬಾಕವಾಲೆ, ಸಿರಾಜು ಅಬುಲಗಣಿ ಖಾಜಿ, ಅತಿಫ ರಫೀಕ ಸೋದಾಗರ, ಪ್ರಕಾಶ ಶಂಕರ ಬನ್ನೆ, ಗಣಪತಿ ರಾಮಪ್ಪ ಕೆಂಚವ್ವಗೋಳ ಹಾಗೂ ಜಹಾಂಗೀರ ಅಬ್ದುಲ ನಾಯಕ ಸೇರಿದಂತೆ ಒಟ್ಟು 20 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 1,60,465/- ರೂ. ನಗದು ಹಾಗೂ ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಲಾಗಿದೆ.

ಇನ್ನು ಎರಡನೇ ಪ್ರಕರಣದಲ್ಲಿ ಎಪಿಎಂಸಿ ಠಾಣೆಯ ಪಿಎಸ್ಐ ವಿಠ್ಠಲ ಹಾವನ್ನವರ ಹಾಗೂ ಸಿಬ್ಬಂದಿ ಶಾಹೂ ನಗರದ ಕೆರೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ದಾಳಿ ನಡೆಸಿ ನಾಗೇಶ ಚಂದ್ರು ಹಮ್ಯಾರ, ಪ್ರಕಾಶ ಮಲಕಪ್ಪ ಲಮಾಣಿ, ರವಿ ರಾಮಪ್ಪ ಕಾರಬರಿ, ವಿನೋದ ಶಂಕರ ಹಮ್ಯಾರ, ರವಿ ಹಮ್ಯಾರ ಹಾಗೂ ನಾಗೇಶ ತಾರಸಿಂಗ್ ರಾಠೋಡ ಎಂಬ 6 ಜನರನ್ನು ಬಂಧಿಸಿ ನಗದು ಮತ್ತು ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಎರಡೂ ಯಶಸ್ವಿ ಕಾರ್ಯಾಚರಣೆಗಳನ್ನು ಕೈಗೊಂಡ ಪಿಎಸ್ಐಗಳು ಹಾಗೂ ಸಿಬ್ಬಂದಿ ವರ್ಗದ ಶ್ಲಾಘನೀಯ ಕಾರ್ಯವನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿಯವರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

Tags:

error: Content is protected !!