arrest

ಬೆಳಗಾವಿಯಲ್ಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ಅಕ್ರಮ ಗೋವಾ ಮದ್ಯ ಜಪ್ತಿ ಹಾಗೂ ಗಾಂಜಾ ವ್ಯಸನಿಯ ಬಂಧನ

Share

ಬೆಳಗಾವಿ ನಗರದ ಉದ್ಯಮಬಾಗ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗೋವಾ ರಾಜ್ಯದ ಅಕ್ರಮ ಮದ್ಯ ಮಾರಾಟ ದಂಧೆಯನ್ನು ಭೇದಿಸಲಾಗಿದ್ದು, ಮತ್ತೊಂದೆಡೆ ಖಡೇಬಜಾರ್ ಪೊಲೀಸರು ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.

ಬೆಳಗಾವಿ ನಗರದಲ್ಲಿ ಜೂನ್ 13, 2026 ರಂದು ಪೊಲೀಸರು ನಡೆಸಿದ ಸರಣಿ ದಾಳಿಗಳಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲಾಗಿದೆ. ಮೊದಲ ಪ್ರಕರಣದಲ್ಲಿ, ಉದ್ಯಮಬಾಗ್ ಪಿಎಸ್ಐ ಪ್ರವೀಣ ಬಿರಾದಾರ ಹಾಗೂ ಸಿಬ್ಬಂದಿಯವರು ಅರುಣಾ ಫ್ಯಾಕ್ಟರಿ ಹತ್ತಿರ ದಾಳಿ ನಡೆಸಿ, ಯಾವುದೇ ಪರವಾನಗಿ ಇಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಗೋವಾ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಹೊನ್ನಾವರ ತಾಲೂಕಿನ ಬಾಲಕುರದ ನಿವಾಸಿ ದೇವೇಂದ್ರ ನಾರಾಯಣ ನಾಯಕ (41) ಎಂಬಾತನನ್ನು ಬಂಧಿಸಿದ್ದಾರೆ. ಆತನಿಂದ ಒಟ್ಟು 4,520/- ರೂ. ಮೌಲ್ಯದ 11.5 ಲೀಟರ್ ಅಕ್ರಮ ಮದ್ಯವನ್ನು ಜಪ್ತಿ ಮಾಡಿ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇನ್ನು ಎರಡನೇ ಪ್ರಕರಣದಲ್ಲಿ, ಖಡೇಬಜಾರ್ ಪಿಎಸ್ಐ ಎಸ್. ಆರ್. ಮುತ್ತತ್ತಿ ಹಾಗೂ ಸಿಬ್ಬಂದಿ ಸರ್ದಾರ್ ಗ್ರೌಂಡ್ ಗ್ಯಾಲರಿ ಹತ್ತಿರ ಅಸಭ್ಯವಾಗಿ ವರ್ತಿಸುತ್ತಿದ್ದ ಬಸವನ ಗಲ್ಲಿಯ ಸುಧೀರ ನಂದಕುಮಾರ ಸಾಲಗುಡೆ (38) ಎಂಬಾತನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಆತ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದು, ಆತನ ವಿರುದ್ಧ ಎನ್ಡಿವಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಈ ಯಶಸ್ವಿ ದಾಳಿಗಳನ್ನು ಕೈಗೊಂಡ ಪಿಎಸ್ಐ ಹಾಗೂ ಸಿಬ್ಬಂದಿ ವರ್ಗದ ಶ್ಲಾಘನೀಯ ಕಾರ್ಯವನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿಯವರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

Tags:

error: Content is protected !!