ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ 2025-26 ನೇ ಸಾಲಿಗೆ ನಡೆಸಿದ ಕರ್ನಾಟಕ ಸಾಮಾನ್ಯ ಅರ್ಹತಾ ಪರೀಕ್ಷೆಯ ಫಲಿತಾಂಶ
ಪ್ರಕಟಗೊಂಡಿದ್ದು ಈ ಬಾರಿ ವಿಜಯಪುರ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ
ರ್ಯಾಂಕ್‍ಗಳನ್ನು ಪಡೆದುಕೊಳ್ಳುವ ಮೂಲಕ ಐತಿಹಾಸಿಕ ಸಾಧನೆಗೆ ಸಾಕ್ಷಿಯಾಗಿದ್ದಾರೆ. ವಿದ್ಯಾರ್ಥಿನಿ ಅನುಷಾ ಹೊಸುರ ಕೆ-ಸಿಇಟಿ ಅಗ್ರಿಯಲ್ಲಿ ರಾಜ್ಯಕ್ಕೆ
3ನೇ ಸ್ಥಾನ ಹಾಗೂ ವೆಟರನರಿ ಸೈನ್ಸ್‍ಲ್ಲಿ ರಾಜ್ಯಕ್ಕೆ 4ನೇ ಸ್ಥಾನ ಪಡೆದುಕೊಂಡರೆ, ನಿಖಿಲ್ ಕಿತ್ತೂರ ಅಗ್ರಿಯಲ್ಲಿ ರಾಜ್ಯಕ್ಕೆ 13ನೇ ಸ್ಥಾನ ಹಾಗೂ ವೆಟರನರಿ
ಸೈನ್ಸ್‍ಲ್ಲಿ 20ನೇ ಸ್ಥಾನವನ್ನು ಪಡೆದುಕೊಳ್ಳುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.


ಇವರ ಸಾಧನೆಯ ಕುರಿತು ಪ್ರತಿಕ್ರಿಯಿಸಿದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಬಸವರಾಜ ಕೌಲಗಿ; ಕಳೆದ ಬಾರಿಯು ಸಹ ವಿದ್ಯಾರ್ಥಿಗಳು
ಕೆ-ಸಿಇಟಿ ಅಗ್ರಿ ಹಾಗೂ ವೆಟರ್‍ನರಿಯಲ್ಲಿ ರ್ಯಾಂಕ್ ಪಡೆದುಕೊಳ್ಳುವ ಮೂಲಕ ಕಾಲೇಜಿನ ಹೆಸರನ್ನು ಇನ್ನಷ್ಟು ಹೆಚ್ಚು ಮಾಡಿದ್ದರು. ಇಂದು ಈ
ವಿದ್ಯಾರ್ಥಿಗಳು ಆ ರ್ಯಾಂಕ್ ಪರಂಪರೆಯನ್ನು ಮುಂದುವರಿ ಸಿದ್ದಾರೆ. ಯಾರು ಪರಿಶ್ರಮ ಪಟ್ಟು ಅಧ್ಯಯನ ಮಾಡುತ್ತಾರೋ ಅವರು ಖಂಡಿತ ಯಶಸ್ಸು
ಪಡೆಯುತ್ತಾರೆ ಎನ್ನುವುದಕ್ಕೆ ಈ ವಿದ್ಯಾರ್ಥಿಗಳೇ ಸಾಕ್ಷಿಯಾಗಿದ್ದಾರೆ. ರೈತರ ಮಕ್ಕಳಾಗಿದ್ದುಕೊಂಡು ಅಗ್ರಿಯಲ್ಲಿ ರ್ಯಾಂಕ್ ಪಡೆದು ಹೆತ್ತವರ ಕನಸನ್ನು ನನಸು
ಮಾಡಿದ ಇವರಿಗೆ ಹೃದಯಪೂರ್ವಕ ಶುಭಾಷಯಗಳನ್ನು ಸಲ್ಲಿಸಿದ್ದಾರೆ. ಇಂದು ಈ ವಿದ್ಯಾರ್ಥಿಗಳು ಮಾಡಿದ ಸಾಧನೆ ಪ್ರಸ್ತುತ ಕಲಿಯುವ ಎಲ್ಲ
ವಿದ್ಯಾರ್ಥಿಗಳಿಗೂ ಸಹ ಮಾರ್ಗಸೂಚಿಯಾಗಿದ್ದು ವಿದ್ಯಾರ್ಥಿಗಳು ಅವರ ದಾರಿಯನ್ನು ಅನುಸರಿಸಬೇಕು ಎಂದು ಹೇಳಿದರು. ಅದರ ಜೊತೆಗೆ
ಇಂಜಿನೀಯರಿಂಗ್‍ನಲ್ಲಿಯೂ ರ್ಯಾಂಕ್‍ಗಳನ್ನು ಪಡೆದುಕೊಂಡ ವಿದ್ಯಾರ್ಥಿಗಳಿಗೂ ಹಾಗೂ ಈ ಐತಿಹಾಸಿಕ ಸಾಧನೆಯ ಹಿಂದೆ ಶ್ರಮವಹಿಸಿದ ಎಲ್ಲ
ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳಿಗೂ ಅಭಿನಂದನೆ ಸಲ್ಲಿಸಿದರು. ಪ್ರತಿ ವರ್ಷದಂತೆ ಈ ಬಾರಿಯೂ ವಿದ್ಯಾರ್ಥಿಗಳು ಅತ್ಯುತ್ತಮವಾದ ಸ್ಥಾನಗಳನ್ನು ಪಡೆದುಕೊಳ್ಳುವ ಮೂಲಕ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.

ಅದರಲ್ಲಿ ಸಲ್ಮಾನ್ ಗೋಡಿಹಾಳ (ಇಂಜಿನಿಯರಿಂಗ್-1048, ಬಿ.ಎಸ್.ಸಿ ಅಗ್ರಿ-232, ವೆಟರ್ನರಿ-291), ಪ್ರತೀಕ ಪಿ ಚವ್ಹಾಣ (ಇಂಜಿನಿಯರಿಂಗ್-1437,
ಬಿ.ಎಸ್.ಸಿ ಅಗ್ರಿ-264, ವೆಟರ್ನರಿ-1541), ಚೇತನ್ ಮಠದ(ಬಿ.ಎಸ್.ಸಿ ಅಗ್ರಿ-54, ವೆಟರ್ನರಿ-141), ಸಂಕೇತ ಜಿ ಬಿರಾದಾರ(ಇಂಜಿನಿಯರಿಂಗ್-2440),
ಅನುಷ್ಕಾ ಮಹಿಶಾಳೆ (ಇಂಜಿನಿಯರಿಂಗ್-2727, ಬಿ.ಎಸ್.ಸಿ ಅಗ್ರಿ-552, ವೆಟರ್ನರಿ-209), ರುಮೇಜಾ ಶೇಖ್(ಇಂಜಿನಿಯರಿಂಗ್-3220, ಬಿ.ಎಸ್.ಸಿ
ಅಗ್ರಿ-560, ವೆಟರ್ನರಿ-787), ಮಂಜುನಾಥ ಹೊನವಾಡ (ಇಂಜಿನಿಯರಿಂಗ್-3519), ಆಕಾಶ ಗೊರನಾಳ(ಇಂಜಿನಿಯರಿಂಗ್-3588), ಶೈಲೇಶ
ಕುಲಕರ್ಣಿ(ಇಂಜಿನಿಯರಿಂಗ್-3680), ರಜತ ಎನ್ (ಇಂಜಿನಿಯರಿಂಗ್-3685), ರವಿ ಹಳ್ಳೂರ(ಇಂಜಿನಿಯರಿಂಗ್-4107, ಬಿ.ಎಸ್.ಸಿ ಅಗ್ರಿ -1887,
ವೆಟರ್ನರಿ – 1856), ನಿಖಿಲ್ ಕಿತ್ತೂರ (ಇಂಜಿನಿಯರಿಂಗ್-4314), ಅಮೋಘ ಬೊಂಬಳೇಕರ್(ಇಂಜಿನಿಯರಿಂಗ್-4517, ಬಿ.ಎಸ್.ಸಿ ಅಗ್ರಿ-2907,
ವೆಟರ್ನರಿ-935), ಅನುಷಾ ಹೊಸುರ (ಇಂಜಿನಿಯರಿಂಗ್-4648), ಮಲ್ಲಿಕಾರ್ಜುನ ಹೂಗಾರ (ಇಂಜಿನಿಯರಿಂಗ್-4865 ಬಿ.ಎಸ್.ಸಿ ಅಗ್ರಿ-1232,
ವೆಟರ್ನರಿ-437), ಸಹಾನಾ ಮಾವಿನಗಿಡದ (ಇಂಜಿನಿಯರಿಂಗ್-5043), ಮಲ್ಲಿಕಾರ್ಜುನ ಮುಚ್ಚಂಡಿ (ಇಂಜಿನಿಯರಿಂಗ್-5145), ಅನುಷಾ
ಎಡವಣ್ಣವರ(ಇಂಜಿನಿಯರಿಂಗ್-5312), ನಿವೇಶ ಮೋಗಲಿ (ಇಂಜಿನಿಯರಿಂಗ್-5409), ರುಚಿತಾ ಘಟನಟ್ಟಿ(ಇಂಜಿನಿಯರಿಂಗ್-5502), ಚನ್ನವೀರೇಶ
ಕುಂಬಾರ (ಇಂಜಿನಿಯರಿಂಗ್-5761)ಬಸವ ಗೊಳಸಂಗಿ(ಇಂಜಿನಿಯರಿಂಗ್-5993) ವಿದ್ಯಾರ್ಥಿಗಳ ಈ ಸಾಧನೆಗೆ ಪ್ರಾಂಶುಪಾಲರಾದ ಮಂಜುನಾಥ ಮ
ಜುನಗೊಂಡ, ಶೈಕ್ಷಣಿಕ ಸಂಯೋಜಕ ಮಂಜುನಾಥ ತುಮ್ಮರಮಟ್ಟಿ ಸೇರಿದಂತೆ ಆಡಳಿತ ಮಂಡಳಿಯ ಸರ್ವ ಸದಸ್ಯರು ಹಾಗೂ ಎಲ್ಲ ಬೋಧಕ
ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.
