Athani

ಲಾಬಿಯಿಂದ ದೂರ, ನಾಯಕತ್ವದ ಬಲದಿಂದ ಸಚಿವ ಸ್ಥಾನ ನಿರೀಕ್ಷೆಯಲ್ಲಿರುವ ರಾಜು ಕಾಗೆ

Share

ಕಾಗವಾಡ:ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ಪುನರ್‌ರಚನೆ ಚರ್ಚೆ ತೀವ್ರಗೊಂಡಿರುವ ನಡುವೆಯೇ ಉತ್ತರ ಕರ್ನಾಟಕದ ಹಿರಿಯ ನಾಯಕ ಹಾಗೂ ಶಾಸಕ ರಾಜು ಕಾಗೆ ಸಚಿವ ಸ್ಥಾನದ ಕುರಿತು ತಮ್ಮ ಅಭಿಲಾಷೆಯನ್ನು ಬಹಿರಂಗಪಡಿಸಿದ್ದಾರೆ. ಉಗಾರ್ ಪಟ್ಟಣದಲ್ಲಿ ಮಾತನಾಡಿದ ಅವರು, “ಅಧಿಕಾರ ಕೇಳಿ ಪಡೆಯುವ ಅವಶ್ಯಕತೆ ಇಲ್ಲ. ನನ್ನ ಯೋಗ್ಯತೆಯನ್ನು ಪರಿಗಣಿಸಿ ಅವಕಾಶ ನೀಡಿದರೆ ಸಚಿವ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ನನಗೆ ಸಚಿವ ಸ್ಥಾನದ ಅಭಿಲಾಷೆ ಇದೆ, ಆದರೆ ದುರಾಸೆ ಇಲ್ಲ” ಎಂದು ಹೇಳಿದರು. ಸದ್ಯ ಆರೋಗ್ಯ ಸರಿಯಿಲ್ಲದ ಕಾರಣ ಸಿ.ಎಲ್.ಪಿ ಸಭೆಗೆ ಗೈರಾಗಿದ್ದು, ಈ ಕುರಿತು ಮುಂಚಿತವಾಗಿ ಪತ್ರ ನೀಡಿದ್ದೇನೆ ಎಂದರು.

ಬೆಂಗಳೂರಿನಲ್ಲಿ ಸಚಿವ ಸ್ಥಾನದ ಲಾಬಿ ನಡೆಯುತ್ತಿರುವ ಸಂದರ್ಭದಲ್ಲೂ ತಾವು ಕ್ಷೇತ್ರದಲ್ಲೇ ಸಕ್ರಿಯವಾಗಿರುವುದಾಗಿ ಹೇಳಿದ ರಾಜು ಕಾಗೆ, “ನಾನು ಒನ್ ಮ್ಯಾನ್ ಶೋ, ಟೈಗರ್ ಸಿಂಗಲ್ ಇರುತ್ತೇನೆ. ಅಧಿಕಾರಕ್ಕಾಗಿ ಯಾರ ಬೆಂಬಲದ ಅಗತ್ಯವಿಲ್ಲ. ಯಾವುದೇ ಹುದ್ದೆ ಕೊಟ್ಟರೂ ಸಮರ್ಥವಾಗಿ ನಿರ್ವಹಿಸುವ ಸಾಮರ್ಥ್ಯ ನನ್ನಲ್ಲಿದೆ” ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಉತ್ತರ ಕರ್ನಾಟಕದ ಹಿರಿಯ ನಾಯಕತ್ವಕ್ಕೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗಬೇಕು ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದ್ದು, ಸಂಪುಟ ಪುನರ್‌ರಚನೆಯಲ್ಲಿ ರಾಜು ಕಾಗೆಗೆ ಅವಕಾಶ ಸಿಗಬಹುದೇ ಎಂಬ ಚರ್ಚೆ ಕಾಂಗ್ರೆಸ್ ವಲಯದಲ್ಲಿ ಜೋರಾಗಿದೆ.

Tags:

error: Content is protected !!