hubbali

ಸೇಂಟ್ ಆಂಡ್ರ್ಯೂಸ್ ಎಜ್ಯುಕೇಶನ್ ಸೊಸೈಟಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ದುರುಪಯೋಗ : ಜಿಪಿಎ ಹೋಲ್ಡರ್ ಚಾರ್ಲ್ ಕೊಠಾರಿ ಆರೋಪ

Share

ಹುಬ್ಬಳ್ಳಿ ರೈಲ್ವೆ ಕಾಲೋನಿಯ ಪ್ರಸಿದ್ಧ ಸೇಂಟ್ ಆಂಡ್ರ್ಯೂಸ್ ಎಜ್ಯುಕೇಶನ್ ಸೊಸೈಟಿಯಲ್ಲಿ ನಕಲಿ ದಾಖಲೆಗಳ ಆಧಾರದ ಮೇಲೆ ಅಕ್ರಮವಾಗಿ ಆಡಳಿತ ಕಬಳಿಸಿ, ಲಕ್ಷಾಂತರ ರೂಪಾಯಿ ದುರುಪಯೋಗ ಪಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ಜಿಪಿಎ ಹೋಲ್ಡರ್ ಚಾರ್ಲ್ ಕೊಠಾರಿ ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಕಾನೂನುಬದ್ಧ ಅಧ್ಯಕ್ಷ ಚಂದ್ರಶೇಖರ ನೆರೆಳ್ಳ ಅವರು ನೀಡಿದ್ದ 3 ತಿಂಗಳ ಅವಧಿಯ ಜಿಪಿ-ಎಯನ್ನು ನವೆಂಬರ್ 2025ರಲ್ಲೇ ರದ್ದುಪಡಿಸಲಾಗಿ-ತ್ತು. ಆದರೂ ಸುಧಾ ಮಣಿಕುಂಟ್ಲ, ಆಂಥೋನಿ ಭಂಡಾರಿ ಹಾಗೂ ಪುರುಷೋತ್ತಮ ಕಲ್ಲಕುಂಟ್ಲ ತಂಡವು ರದ್ದಾದ ಜಿಪಿಎ ಬಳಸಿ ನಕಲಿ ಸಹಿ, ಕೃತಕ ರಾಜೀನಾಮೆ ಪತ್ರ ಹಾಗೂ ಸುಳ್ಳು ಸಭಾ ನಡಾವಳಿಗಳನ್ನು ಸೃಷ್ಟಿಸಿ, ಅಧಿಕಾರಿಗಳೊಂದಿಗೆ ಸೊಸೈಟಿ ನವೀಕರಣ ಮಾಡಿಕೊಂಡಿದ್ದಾರೆ. ಅಲ್ಲದೆ ಬ್ಯಾಂಕ್ ಖಾತೆಗಳಿಂದ ಶಾಮೀಲಾಗಿ ಲಕ್ಷಾಂತರ ರೂ. ಹಣ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

Tags:

error: Content is protected !!