hubbali

ಹುಬ್ಬಳ್ಳಿಯಲ್ಲಿ ಪಂಚಮಸಾಲಿ ಮುಖಂಡರ ಮಹತ್ವದ ಸಭೆ: ಉಭಯ ಪೀಠಗಳ ಭಿನ್ನಾಭಿಪ್ರಾಯ ಶಮನಕ್ಕೆ ಹಿರಿಯರ ಮುನ್ನುಡಿ!

Share

• ಹುಬ್ಬಳ್ಳಿಯಲ್ಲಿ ಪಂಚಮಸಾಲಿ ಪ್ರಮುಖರ ಮಹತ್ವದ ಸಭೆ
• ಸಮಸ್ಯೆಗಳ ಪರಿಹಾರಕ್ಕೆ ಸೌಹಾರ್ದಯುತ ಚರ್ಚೆ ಆರಂಭ
• ಯಾವ ಸ್ವಾಮೀಜಿಗಳನ್ನೂ ಸಭೆಯಿಂದ ಹೊರಗಿಟ್ಟಿಲ್ಲ
• ಸಮಾಜ ಒಟ್ಟಾಗಿಸಲು ಹಿರಿಯ ಮುಖಂಡರ ಶ್ರಮ
ಹುಬ್ಬಳ್ಳಿಯಲ್ಲಿ ಇಂದು ಕೂಡಲಸಂಗಮ ಹಾಗೂ ಹರಿಹರ ಪಂಚಮಸಾಲಿ ಪೀಠದ ಪ್ರಮುಖ ಮುಖಂಡರ ಮಹತ್ವದ ಜಂಟಿ ಸಭೆ ನಡೆದಿದೆ. ಸಮಾಜದ ಆಂತರಿಕ ಸಮಸ್ಯೆಗಳನ್ನು ಬೀದಿಯಲ್ಲಿ ಚರ್ಚಿಸುವ ಬದಲು, ಸೌಹಾರ್ದಯುತವಾಗಿ ಬಗೆಹರಿಸಿಕೊಂಡು ಸಮುದಾಯವನ್ನು ಸಂಘಟಿಸುವ ಕುರಿತು ಸಭೆಯಲ್ಲಿ ಸುದೀರ್ಘ ಮಂಥನ ನಡೆದಿದೆ. ಈ ಹೈವೋಲ್ಟೇಜ್ ಸಭೆಯ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ…

ಇಂದು ಹುಬ್ಬಳ್ಳಿಯಲ್ಲಿ ಕೂಡಲ ಸಂಗಮ ಮತ್ತು ಹರಿಹರ ಪಂಚಮಸಾಲಿ ಪೀಠದ ಮುಖಂಡರ ಸಭೆಯನ್ನು ಕರೆದು ಮಹತ್ವದ ಚರ್ಚೆಯನ್ನು ನಡೆಸಲಾಗಿದೆ.

ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಅವರು ರಾಜ್ಯದಲ್ಲಿ ಪಂಚಮಸಾಲಿ ಸಮಾಜ ಅತಿದೊಡ್ಡ ಸಮಾಜವಾಗಿದ್ದು, ಸಮಸ್ಯೆಗಳನ್ನು ಬೀದಿಗೆ ಬಂದು ಮಾತನಾಡುವುದನ್ನು ಬಿಟ್ಟು, ಸಮಸ್ಯೆಗಳನ್ನು ಪರಿಹರಿಸಲು ಸೌಹಾರ್ದಯುತವಾದಿ ಚರ್ಚೆಯಾಗಿದೆ. ಸದ್ಯ ಸಮಾಜದ ಮುಖಂಡರನ್ನು ಮಾತ್ರ ಕರೆಯಲಾಗಿದೆ. ಯಾವುದೇ ಸ್ವಾಮಿಜೀಗಳನ್ನು ಹೊರಗಿಟ್ಟಿಲ್ಲ ಎಂದರು. ಬೈಟ್

ಇನ್ನು ಶಾಸಕ ಯತ್ನಾಳ್ ಅವರು . ಶೇಕಡಾ ತೊಂಬತ್ತರಷ್ಟು ಸಮಸ್ಯೆ ಬಗೆಹರಿದಿವೆ. ಲೆಕ್ಕಪತ್ರದ ಬಗ್ಗೆ ಮುಂದಿನ ದಿನದಲ್ಲಿ ಕ್ಲಿಯರ್ ಮಾಡಿಕೊಳ್ಳುತ್ತೇವೆ
. ಇನ್ನು ಮೂರ್ನಾಲ್ಕು ಸಭೆಗಳನ್ನು ಮಾಡಬೇಕಾಗುತ್ತದೆ
ಎಲ್ಲಾ ಸಮಸ್ಯೆ ಗಳು ಒಮ್ಮೆ ಬಗೆಹರಿಯಲ್ಲಾ. ಎರಡು ಬಣದವರು ನಾಯಕರ ತೀರ್ಮಾನಕ್ಕೆ ಬದ್ದ ಅಂತ ಹೇಳಿದ್ದಾರೆ.
ಸಮಾಜದ ಗೊಂದಲ ಗಳ‌ ನಿವಾರಣೆಗಾಗಿ ಸೂಕ್ತ ಕ್ರಮ
ಎರಡು ಕಡೆಯವರ ಮನಸ್ತಾಪ ನಿವಾರಣೆ ಮಾಡೋ ಕೆಲಸ ಮಾಡುತ್ತಿದ್ದೇವೆ. ಹರಿಹರ ಪೀಠ ಜೊತೆಗೆ ಕೂಡಲಸಂಗಮ ಪೀಠ ವಿವಾದ ಕೂಡಾ ಬಗೆಹರಿಸಲಾಗುವದು. ಯಾವ ಪೀಠ ಸ್ಥಾಪನೆ ಮರುಸ್ಥಾಪನೆ ಇಲ್ಲಾ. ಇದ್ದ ಮಠಗಳನ್ನು ಸುಧಾರಣೆ ಮಾಡೋದು ನಮ್ಮ ಉದ್ದೇಶ ಎಂದರು.
ಸಮಾಜದ ಗೊಂದಲ ನಿವಾರಣೆಗೆ ಮೊದಲು ನಾವು ಸಭೆ ಮಾಡಿದ್ದೇವೆ. ನಂತರ ಸ್ವಾಮೀಜಿಗಳ ಅಭಿಪ್ರಾಯ ಪಡೆಯುತ್ತೇವೆ. ಸಮಾಜ ಎರಡು ವಿರುದ್ಧ ಧಿಕ್ಕಿನಲ್ಲಿ ಸಾಗುತ್ತಿತ್ತು. ನಾವು ಹೇಳಿದ್ದನ್ನು ಸ್ವಾಮೀಜಿ ಗಳು ಕೇಳಬೇಕು
.ಅದಕ್ಕೂ ಮೊದಲು ನಮ್ಮಲ್ಲಿನ ಗೊಂದಲ ನಿವಾರಣೆ ಗೆ ಮುಂದಾಗಿದ್ದೇವೆ. ಇಂದು ಸಮಾಜ ಸುಧಾರಿಸಲು ಸಮಾನ ಮನಸ್ಕರರು ಕೂಡಿದ್ದೇವೆ ಎಂದರು

ಇನ್ನುಳಿದ ಮುಖಂಡರು ಮಾತನಾಡಿ, ರಾಜ್ಯದಲ್ಲಿ ಹರಿಹರಪೀಠ ಮತ್ತು ಪಂಚಮಸಾಲಿ ಪೀಠಗಳು ಪಂಚಮಸಾಲಿ ಸಮಾಜವನ್ನು ಗಟ್ಟಿಯಾಗಿ ಕಟ್ಟಬೇಕೆಂಬ ಚರ್ಚೆಯನ್ನು ಮಾಡುತ್ತಿದ್ದೇವೆ. ಸದ್ಯ ಪೀಠಗಳನ್ನು ಒಂದುಗೂಡಿಸುವ ಯಾವುದೇ ಚರ್ಚೆಯನ್ನು ಮಾಡಿಲ್ಲ ಎಂದರು.

ಸಮಾಜದ ಸಮಸ್ಯೆಗಳನ್ನು ಪ್ರಾರಂಭಿಕವಾಗಿ ಚರ್ಚಿಸಲಾಗಿದೆ. ಸುದೀರ್ಘ ಚರ್ಚೆ ಇನ್ನು ಆಗಬೇಕಿದೆ. ಸಮಸ್ಯೆಗಳು ಇನ್ನು ಸಾಕಷ್ಟಿವೆ. ಉಭಯ ಪೀಠಗಳಲ್ಲಿ ಉದ್ಭವಿಸಿದ ಸಮಸ್ಯೆಗಳನ್ನು ಸರಿಮಾಡಿ, ಸಮಾಜವನ್ನು ಒಟ್ಟಾಗಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದರು.

ಸಭೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಿ.ಸಿ. ಪಾಟೀಲ್, ಮುರುಗೇಶ ನಿರಾಣಿ, ಅರವಿಂದ ಬೆಲ್ಲದ, ಭಾವಿ ಬೆಟ್ಟಪ್ಪ, ಉಮಾಪತಿ, ಶ್ರೀ ಶಂಕರ ಇನ್ನುಳಿದವರು ಭಾಗಿಯಾಗಿದ್ಧರು.

Tags:

error: Content is protected !!