Vijaypura

ವಿದೇಶದಲ್ಲಿ ಬೆಳೆಯುವ ‘ಸುಮಾತು 30’ ತಳಿಯ ಹಣ್ಣನ್ನು ಬೆಳೆದ ರೈತ; ಸಾವಯವ ಕೃಷಿ ಪದ್ದತಿಯ ಮೂಲಕ ಬೆಳೆದು ಇತರೆ ರೈತರಿಗೆ ಮಾದರಿ

Share

ವಿದೇಶದಲ್ಲಿ ಬೆಳೆಯುವಂತ ಸುಮಾರು 30 ಬಗೆಯ ಹಣ್ಣುಗಳನ್ನು ತಮ್ಮ ಹೊಲದಲ್ಲಿ ಸಾವಯುವ ಕೃಷಿ ಪದ್ಧತಿಯ ಮೂಲಕ ಬೆಳೆದು, ಲಕ್ಷಾಂತರ ರೂಪಾಯಿ ಆದಾಯ ಪಡೆಯುತ್ತಿದ್ದಾರೆ‌. ಬರಡು ಭೂಮಿಯಲ್ಲಿ ಬಂಗಾರದ ಬೆಳೆ ಬೆಳೆದು ಲಕ್ಷಾಂತರ ಹಣ ಗಳಿಸಿ ಇತರೆ ರೈತರಿಗೆ ಮಾದರಿಯಾಗಿದ್ದಾರೆ. ಹಾಗಾದರೆ ಆ ರೈತ ಯಾರು..? ಅವರು ಬೆಳೆಯುತ್ತಿರುವ ಬೆಳೆಗಳಾದರೂ ಏನು…? ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್…

ಹೌದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಪ್ರಗತಿ ಪರ ರೈತರಾದ ರಾಜೇಂದ್ರ ಭೋಸಲೆ ಎಂಬಾತರು ತಮ್ಮ ತೋಟದಲ್ಲಿ ಸುಮಾರು 13 ಎಕರೆ ಪ್ರದೇಶದಲ್ಲಿ ಸಾವಯುವ ಪದ್ದತಿಯ ಮೂಲಕ ಸಮಗ್ರ ಕೃಷಿ ಮಾಡುವ ಮೂಲಕ ಸೈ ಎನಿಸಿಕೊಂಡಿದ್ದಾರೆ. ವಿದೇಶದಲ್ಲಿ ಬೆಳೆಯುವಂತ ಸುಮಾರು 30 ಬಗೆ ಹಣ್ಣುಗಳನ್ನು ತಮ್ಮ ತೋಟದಲ್ಲಿ ಬೆಳೆಯುವ ಮೂಲಕ ಇತರೆ ರೈತರಿಗೆ ಮಾದರಿಯಾಗಿದ್ದಾರೆ. ತಮ್ಮ ತೋಟದಲ್ಲಿ 100 ಹುಣಸೆ ಹಣ್ಣಿನ ಗಿಡಗಳನ್ನು ನೆಡಲಾಗಿದ್ದು ಅವುಗಳನ್ನ ರಾಸಾಯನಿಕ ಮುಕ್ತವಾಗಿ ಬೆಳೆಸುತ್ತಿದ್ದಾರೆ. ಜೊತೆಗೆ 100 ಸೀತಾಫಲ ಹಣ್ಣುಗಳನ್ನು ಸಹಿತ ಬೆಳೆಯುತ್ತಿದ್ದಾರೆ. ಮೂರು ಎಕರೆ ಪ್ರದೇಶದಲ್ಲಿ ದಾಳಿಂಬೆ ಹಣ್ಣಿನ ಬೆಳೆ ಬೆಳೆದಿದ್ದು, ಈಗಾಗಲೇ ದಾಳಿಂಬೆಯಿಂದ ಕಳೆದ ವರ್ಷ 35 ಲಕ್ಷದಷ್ಟು ಆದಾಯವನ್ನು ಪಡೆದುಕೊಂಡು ಇತರೆ ರೈತರಿಗೆ ಮಾದರಿಯಾಗಿದ್ದಾರೆ. ಇನ್ನೂ ತೋಟದಲ್ಲಿ ಮಾವಿನ ಹಣ್ಣು, ನೋನಿ ಹಣ್ಣು, ವಾಟರ್ ಆ್ಯಪಲ್, ರೆಡ್ ಆ್ಯಪಲ್, ಕವಳೆ ಹಣ್ಣು ಹೀಗೆ ಹಲವು ಬಗೆಯ ಹಣ್ಣನ್ನು ಬೆಳೆಯುತ್ತಿದ್ದಾರೆ‌‌‌‌…

ಬಾಳೆ ಹಣ್ಣಿನ ಗಿಡಗಳ ಜೊತೆಗೆ ಅಡಿಕೆ ಬೆಳೆದಿದ್ದಾರೆ, ಅವುಗಳು ಸಹಿತ ಸಾವಯವ ಕೃಷಿ ಪದ್ಧತಿ ಮೂಲಕ ಬೆಳೆಯುತ್ತಾರೆ. ಇನ್ನು ತಮ್ಮ ಅವರ ತೋಟದಲ್ಲಿ ಸುಮಾರು ಎರಡು ನೂರು ಮಾವಿನ ಮರಗಳನ್ನು ಸಾವಯವ ಪದ್ಧತಿ ಮೂಲಕ 100 ಕೇಸರ ಮಾವಿನ ಹಣ್ಣಿನ ಮರ, 100 ಆಪುಸ್ ಮಾವಿನ ಹಣ್ಣು ಹಾಗೂ ವಿವಿಧ ಹಣ್ಣನ್ನು ಬೆಳಯುತ್ತಿದ್ದಾರೆ‌. ಕಾಸರಗೋಡು ಗೋಡಂಬೆ ಕೂಡ ಬೆಳೆದು ಈ ಭಾಗದಲ್ಲಿ ಯಶಸ್ಸು ಕಂಡಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಗೋಡಂಬೆ ಬೆಳೆಯಲು ಆಗಲ್ಲ ಎಂಬುವರಿಗೆ ಅದನ್ನು ಇವರು ಬೆಳೆದು ತೋರಿಸಿದ್ದಾರೆ. ಅರಿಶಿಣದ ಅಗಿಗಳನ್ನು ನೆಟ್ಟು, ಅದರಿಂದ ಶುದ್ದವಾದ ಅರಿಶಿಣದ ಬೆಳೆಗಳನ್ನು ಕೂಡಾ ಬೆಳೆಯುತ್ತಿದ್ದಾರೆ. ಇವರ ತೋಟದಲ್ಲಿ ಸುಮಾರು 1500 ಶ್ರೀಗಂಧದ ಮರಗಳನ್ನು ಬೆಳೆಯುತ್ತಿದ್ದಾರೆ. ಇವರ ತೋಟದಲ್ಲಿ ಸುಮಾರು ಎರಡು ಸಾವಿರ ರಕ್ತ ಚಂದನದ ಗಿಡಗಳನ್ನು ನೆಟ್ಟು ಆರು ವರ್ಷದಿಂದ ಅವುಗಳ ಪಾಲನೆ ಪೊಷಣೆ ಮಾಡುತ್ತಿದ್ದು, ಈ ಗಿಡಗಳ ಮದ್ಯದಲ್ಲಿ ದಾಳಿಂಬೆಬೆಳೆದು ಅದರ ಲಾಭ ಪಡೆಯುತ್ತಿದ್ದಾರೆ. ಕಳೆದ 20 ವರ್ಷಗಳಿಂದ ದಾಂಡೇಲಿಯ ಸಾಗುವಾನಿ ಮರಗಳನ್ನು ಬೆಳೆಯುತ್ತಿದ್ದಾರೆ, ಅವುಗಳು ಈಗ ಸುಮಾರು 40 ಅಡಿಯಷ್ಟು ಬೆಳೆದು ನಿಂತಿವೆ. ರಾಜೇಂದ್ರ ಭೋಸಲೆ ಅವರ ಕಾರ್ಯಕ್ಕೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ‌‌‌‌‌‌…

ಬರಡ ಭೂಮಿ, ಗುಡ್ಡ ಗಾಡು ಪ್ರದೇಶದಂತಹ ಭೂಮಿಯಲ್ಲಿ ಕಡಿಮೆ ನೀರಿನಲ್ಲಿ, ಯಾವ ಹಣ್ಣು ಈ ಭಾಗದಲ್ಲಿ ಬೆಳೆಯಲಾಗಲ್ಲ ಅಂತಾರೆ ಅಂತಹ ಹಣ್ಣಿನ ಜೊತೆಗೆ ವಿವಿಧ ಬಗೆ ಹಣ್ಣು ಬೆಳೆಯುವ ಮೂಲಕ ರಾಜೇಂದ್ರ ಭೋಸಲೆ ಅವರು ಇತರೆ ರೈತರಿಗೆ ಮಾಡದರಿಯಾಗಿದ್ದಂತೂ ಸತ್ಯ…

Tags:

error: Content is protected !!