Vijaypura

ಮದುವೆ ಹೆಣ್ಣು ಸಿಗಲಿಲ್ಲ ಅಂತ ಟವರ್ ಏರಿದ ಯುವಕ!

Share

ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ಯುವಕನೊಬ್ಬ ಮದುವೆಗೆ ಹೆಣ್ಣು ಸಿಗುತ್ತಿಲ್ಲ ಎಂದು ಮೊಬೈಲ್ ಟವರ್ ಏರಿ ಹೈಡ್ರಾಮಾ ನಡೆಸಿದ್ದಾನೆ. ಶ್ರೀಶೈಲ ನಾಗಪ್ಪ ರಾಮತೀರ್ಥ ಎಂಬ ಯುವಕನನ್ನು ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಮನವೊಲಿಸಿ ಕೆಳಗಿಳಿಸಿದ್ದಾರೆ. ಕೋಟ್ಯಾಳ ಗ್ರಾಮದ ಶ್ರೀಶೈಲ ರಾಮತೀರ್ಥ ಎಂಬ ಯುವಕ, ಮದುವೆ ಮಾಡಿಕೊಡಬೇಕು ಎಂದು ಆಗ್ರಹಿಸಿ ಗ್ರಾಮದ ಮೊಬೈಲ್ ಟವರ್ ಏರಿದ್ದಾನೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸಾಕಷ್ಟು ಸಮಯ ಮಾತುಕತೆ ನಡೆಸಿ ಸುರಕ್ಷಿತವಾಗಿ ಕೆಳಗಿಳಿಸಿದರು.
ಈ ಹಿಂದೆ ಕೂಡ ಮದ್ಯ ಹಾಗೂ ಗುಟ್ಕಾ ಬೇಕೆಂದು ಇದೇ ಯುವಕ ಎರಡು ಬಾರಿ ಟವರ್ ಏರಿದ್ದಾನೆ ಎನ್ನಲಾಗಿದೆ. ಪದೇ ಪದೇ ಟವರ್ ಏರಿ ಕಿರಿಕ್ ಮಾಡುತ್ತಿರುವ ಯುವಕನಿಂದ ಗ್ರಾಮಸ್ಥರು ಬೇಸತ್ತಿದ್ದಾರೆ.

Tags:

error: Content is protected !!