Chikkodi

26 ರಂದು151 ಅಡಿ ಎತ್ತರದ ಭಗವಾನ ಪಾರ್ಶ್ವನಾಥ ಮೂರ್ತಿಯ ಪ್ರತಿಷ್ಠಾಪನೆ

Share

151 ಅಡಿ ಎತ್ತರದ ಭಗವಾನ ಪಾರ್ಶ್ವನಾಥ ಮೂರ್ತಿಯ ಪ್ರತಿಷ್ಠಾಪನೆಯ ಭೂಮಿ ಶುದ್ದೀಕರಣ, ಸರಸ್ವತಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಎಜಿಎಂ ಕಾಲೇಜಿನ ಇಂಜನಿಯರಿಂಗ್ ಉದ್ಘಾಟನಾ ಕಾರ್ಯಕ್ರಮ ಚಿಕ್ಕೋಡಿ ತಾಲೂಕಿನ ನೇಜ ಕ್ರಾಸ್ ಬಳಿ ಮೇ.24, 25 ಮತ್ತು 26ರಂದು ನಡೆಯಲಿದೆ ಎಂದು ರಾಷ್ಟ್ರಸಂತ ಆಚಾರ್ಯ 108 ಗುಣಧರನಂದಿ ಮುನಿಮಹಾರಾಜರು ತಿಳಿಸಿದರು.

ಚಿಕ್ಕೋಡಿ ತಾಲೂಕಿನ ನೇಜ ಕ್ರಾಸ್ ಬಳಿ ನಿರ್ಮಾಣವಾದ ನೂತನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಮೊದಲ ಬಾರಿಗೆ 151 ಅಡಿ ಎತ್ತರದ ಭಗವಾನ ಪಾರ್ಶ್ವನಾಥರ ಬೃಹತ್ ವಿಗ್ರಹವನ್ನು ಗುಣಧರ ತೀರ್ಥ ಶಮನೇವಾಡಿ ನೇಜ ಕ್ರಾಸ್‌ದಲ್ಲಿ ಸ್ಥಾಪಿಸಲಾಗುತ್ತಿದೆ ಎಂದರು.

24ರಂದು ಮುಂಜಾನೆ ಅಭಿಷೇಕ, ನಿತ್ಯ ಪೂಜಾ ಕಾರ್ಯಕ್ರಮ, ಮಧ್ಯಾಹ್ನ ವಾಸ್ತು ವಿಧಾನ, ಸಂಜೆ ಆರತಿ ಮತ್ತು ಗಾಯಕ ಚಂದನಶೆಟ್ಟಿ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಮುಖ್ಯ ಅತಿಥಿಗಳಾಗಿ
ವಿಧಾನಪರಿಷತ ಸದಸ್ಯ ಪ್ರಕಾಶ ಹುಕ್ಕೇರಿ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕ ಗಣೇಶ ಹುಕ್ಕೇರಿ, ಶಾಸಕಿ ಶಶಿಕಲಾ ಜೊಲ್ಲೆ, ಪರಿಷತ್ ಮಾಜಿ ಸದಸ್ಯ ವೀರಕುಮಾರ ಪಾಟೀಲ ಆಗಮೀಸಲಿದ್ದಾರೆ.

25ರಂದು ಮುಂಜಾನೆ ಅಭಿಷೇಕ, ನಿತ್ಯ ಪೂಜೆ, ಭಗವಾನ ಪಾರ್ಶ್ವನಾಥ ವಿಧಾನ ಮತ್ತು ಸರಸ್ವತಿ ಮೂರ್ತಿ ಶುದ್ದೀಕರಣ, ಸಂಜೆ 7ಕ್ಕೆ ಪಿಯುಸಿ ಪ್ರಾಚಾರ್ಯರ ಸತ್ಕಾರ ಸಮಾರಂಭ ನಡೆಯಲಿದೆ. ಸಂಜೆ ಖ್ಯಾತ ಗಾಯಕ ರಘು ದೀಕ್ಷಿತ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಮುಖ್ಯ ಅತಿಥಿಯಾಗಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ,ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಅಥಣಿ ಶಾಸಕ ಲಕ್ಷಣ ಸವದಿ ಶಾಸಕರು, ಬೋರಗಾಂವನ ಯುವ ಮುಖಂಡರಾದ ಉತ್ತಮ ರಾವಸಾಹೇಬ ಪಾಟೀಲ, ಅಣ್ಣಾಸಾಹೇಬ ಹವಲೆ‌ ಆಗಮಿಸುವವರು
ಮೇ 26ರಂದು ಮುಂಜಾನೆ ಅಭಿಷೇಕ, ನಿತ್ಯ ಪೂಜೆ, ಮುಂಜಾನೆ 9ಕ್ಕೆ ಎಜೆಎಂ ಇಂಜಿನಿಯರಿಂಗ್ ಕಾಲೇಜು ಉದ್ಘಾಟನಾ ಸಮಾರಂಭ ಮತ್ತು ಸರಸ್ವತಿ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದೆ.

ಈ ಕಾರ್ಯಕ್ರಮಕ್ಕೆ ರಾಜ್ಯಪಾಲ ಥಾವರಚಂದ ಗೆಹ್ಲೋತ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ ಆಗಮಿಸಲಿದ್ದಾರೆ. ಎಂದು‌ ತಿಳಿಸಿದರು.ಮುಖಂಡರಾದ ಜಯಕುಮಾರ ಖೋತ, ಬಾಬಣ್ಣಾ ಖೋತ ಸೇರಿದಂತೆ ಇನ್ನಿತರರು ‌ಉಪಸ್ಥಿತರಿದ್ದರು.

Tags:

error: Content is protected !!