ಚಿಕ್ಕೋಡಿ ನಗರದ ರವಿವಾರ ಪೆಟನಲ್ಲಿರುವ ಗಜಾನನ ಮಾಳಿ ಎಂಬುವರಿಗೆ ಸೇರಿದ ವಿನಾಯಕ ಕೃಷಿ ಕೇಂದ್ರಕ್ಕೆ ಬೆಂಕಿ ತಗುಲಿ ಅಪಾರವಾದ ವಸ್ತುಗಳು ಸುಟ್ಟುಕರಲಾಗಿದೆ.

ಕೀಟನಾಶಕ ಅಂಗಡಿಗೆ ಬೆಳಿಗ್ಗೆ 7.30 ಗಂಟೆ ಸುಮಾರಿಗೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ ಅಂಗಡಿ ಸುಟ್ಟು ಕರಕಲಾಗಿದೆ. ಬೆಂಕಿಯಲ್ಲಿ ಅಂಗಡಿಯಲ್ಲಿರುವ , ರಾಸಾಯನಿಕ ಗೊಬ್ಬರ, ಕಿಟನಾಶಕ, ಬೀಜ ಸೇರಿದಂತೆ ಸುಮಾರು 50 ಲಕ್ಷ ರೂಪಾಯಿ ವಸ್ತುಗಳು ಸುಟ್ಟುಕರಲಾಗಿದೆ.ಸ್ಥಳಕ್ಕೆ ಚಿಕ್ಕೋಡಿ ಅಗ್ನಿಶಾಮಕ ಠಾಣೆಯ ಸಿಬ್ಬಂದಿಯವರಾದ ರಾಚಯ್ಯಾ ಮಠಪತಿ, ಮೇಹಬೂಬ ನದಾಪ, ಮಲ್ಲಿಕಾರ್ಜುನ ಕುಂಬಾರ,

ಕಂಠೆಪ್ಪ ಮಾಳಗೆ, ಈರಯ್ಯಾ ಹಿರೇಮಠ, ಉಮೇಶ್ ನೇರ್ಲೇಕರ್, ಹೈದರ್ ಮುಲ್ಲ್ತಾನಿ ರವರು ಧಾವಿಸಿ ಸುಮಾರು 2 ಗಂಟೆಗಳ ಕಾಲ ಕಾರ್ಯಾಚರಣೆ ಮಾಡಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದರು.ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
