ಚಿಕ್ಕೋಡಿ ತಾಲೂಕಿನ ನಣದಿ ಡಿ.ಕೆ.ಎಸ್.ಎಸ್.ಕೆ ಫ್ಯಾಕ್ಟರಿಯಿಂದ ಹವಾಲಾದಾರ,ನಾಯಿಕ ತೋಟಗಳ ಮುಖಾಂತರ ಬಸವನ ಗುಡಿ ಕೆನಾಲ್ ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಎಂಎಲ್ಸಿ ಪ್ರಕಾಶ ಹುಕ್ಕೇರಿ ಚಾಲನೆ ನೀಡಿದರು.


50 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಕಾಮಗಾರಿಗೆ ಚಾಲನೆಯನ್ನು ನೀಡಲಾಯಿತು. ಬಳಿಕ ಮಾತನಾಡಿ ಎಂಎಲ್ಸಿ ಪ್ರಕಾಶ ಹುಕ್ಕೇರಿಯವರು ಮಾತನಾಡಿ ಗುಣಮಟ್ಟದ ರಸ್ತೆ ಮಾಡುವಂತೆ ಗುತ್ತಿಗೆದಾರನಿಗೆ ಸೂಚನೆಯನ್ನು ನೀಡಿದರು.ಬಳಿಕ ಸ್ಥಳೀಯರು ಮಾಧ್ಯಮಗಳ ಜೊತೆಗೆ ಮಾತನಾಡಿ ನಮ್ಮ ಬೇಡಿಕೆಯಂತೆ ರಸ್ತೆ ಮಂಜೂರು ಮಾಡಿ ಹಾಗೂ ಅದೇ ರೀತಿಯಾಗಿ ಒಂದು ವರ್ಷದಲ್ಲಿ ನಣದಿ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ 10 ಕೋಟಿ ರೂಪಾಯಿ ಅನುದಾನ ನೀಡಿರುವ ಎಂಎಲ್ಸಿ ಪ್ರಕಾಶ ಹುಕ್ಕೇರಿ,ಶಾಸಕ ಗಣೇಶ ಹುಕ್ಕೇರಿಯವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಮಲ್ಲು ಹವಾಲ್ದಾರ, ರಾಮಚಂದ್ರ ಮಡಿವಾಳೆ,ರಾಜೇಂದ್ರ ಶಿಂಧೆ,ಕಾಂತೇಶ ನಾಯಿಕ,ರಾಜು ಚವಾನ,ಮೋಶಿನ ದೇಸಾಯಿ, ಸಂಜಯ ಕಿರಾಯಿ,ವಿಠ್ಠಲ ಹವಾಲ್ದಾರ,ಬಂಡಾ ನಾಯಿಕವಾಡಿ,ಅಣ್ಣಾ ಚಿನಗೆ,ಪರಶುರಾಮ ಥೋರಾತ,ಅಮ್ಮನಿ ಕೆಂಚನ್ನವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
