Bagalkote

ಬಾಗಲಕೋಟೆ ಜಿಲ್ಲೆ ಹುನಗುಂದ್ ತಾಲ್ಲೂಕಿನ ಹಲವೆಡೆ ಅಕ್ರಮ ಮರಳು ಅಡ್ಡೆಗಳ ಮೇಲೆ ದಾಳಿ..

Share

ಬಾಗಲಕೋಟೆಯಲ್ಲಿ ಅಕ್ರಮ ಮರಳು ದಂಧೆಗೆ ಬ್ರೇಕ್

ಹುನಗುಂದ ತಾಲೂಕಿನ ಅಡ್ಡೆಗಳ ಮೇಲೆ ದಾಳಿ

ಬೆಂಗಳೂರು ಲೋಕಾ ಅಧಿಕಾರಿಗಳಿಂದ ದಿಢೀರ್ ಕಾರ್ಯಾಚರಣೆ

ಇಪ್ಪತ್ತಕ್ಕೂ ಹೆಚ್ಚು ಅಕ್ರಮ ಟಿಪ್ಪರ್‌ಗಳು ಜಪ್ತಿ

ಈ ಭಾಗದಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದ್ದರೂ ಕಣ್ಮುಚ್ಚಿ ಕುಳಿತಿದೆ ಪೊಲೀಸ್ ಇಲಾಖೆ.ಗ್ರಾಮೀಣ ಭಾಗದ ರಸ್ತೆಗಳು ಹಾಳಾಗ್ತಿರೊದ್ರಿಂದ ರೋಷಿ ಹೊದ ಜನ್ರು ಲೋಕಾಯುಕ್ತರಿಗೆ ಮಾಹಿತಿ ನೀಡಿದ್ದು,ಸಾರ್ವಜನಿಕರ ಮಾಹಿತಿ ಮೇರೆಗೆ 5 ಲೋಕಾ ಅಧಿಕಾರಿಗಳ ತಂಡ ಅಕ್ರಮ ಮರಳು ಅಡ್ಡೆಗಳ ಮೇಲೆ ದಾಳಿ ನಡೆಸಿದೆ.ಅಕ್ರಮ ಮರಳು ಅಡ್ಡೆ ದಂಧೆಕೋರರಿಗೆ ಲೋಕಾ ಶಾಕ್ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ….

ಒಂದೆಡೆ ನಡೆಯುತ್ತಿದ್ದ ಅಕ್ರಮ ಮರಳು ದಂಧೆ.ಮತ್ತೊಂದೆಡೆ ಅಕ್ರಮ ಮರಳು ದಂಧೆಕೋರರಿಗೆ ಬ್ರೇಕ್ ಹಾಕಲು ಪಿಲ್ಡಿಗೆ ಇಳಿದ ಲೋಕಾಯುಕ್ತ ಅಧಿಕಾರಿಗಳು.ಇನ್ನೊಂದೆಡೆ ಅಕ್ರಮ ಮರಳು ಸಾಗಾಟ ಮಾಡ್ತಿದ್ದ ಮುಧೋಳ ಭಾಗದಲ್ಲಿ,20ಕ್ಕೂ ಹೆಚ್ಚು ಟಿಪ್ಪರಗಳ ಜಪ್ತಿ ಮಾಡಿ,ಮರಳು ಅಡ್ಡೆ ಪರಿಶೀಲನೆ ಮಾಡ್ತಿರೋ ಲೋಕಾ ಅಧಿಕಾರಿಗಳು. ಇಂತಹ ದೃಶ್ಯ ಕಂಡುಬಂದಿದ್ದು ಬಾಗಲಕೋಟೆ ಜಿಲ್ಲೆ ಹುನಗುಂದ್ ತಾಲ್ಲೂಕಿನ ಚಿತ್ತಾಪೂರ ಗ್ರಾಮದ ಆಸು-ಪಾಸು.ಹೌದು ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ನಡೆಯುತ್ತಿರೋ ಹಿನ್ನೆಲೆ ಸಾರ್ವಜನಿಕರ ಮಾಹಿತಿ ಮೇರೆಗೆ ಬೆಂಗಳೂರು ಲೋಕಾ ಅಧಿಕಾರಿಗಳ ತಂಡ ಹುನಗುಂದ್ ತಾಲ್ಲೂಕಿನ ನಾಲ್ಕೈದು ಅಕ್ರಮ ಮರಳು ಅಡ್ಡೆಗಳ ಮೇಲೆ ದಾಳಿ ನಡಸಿ ಪರಿಶೀಲನೆ ನಡೆಸಿತು…

ಇನ್ನು ಹುನಗುಂದ್ ತಾಲ್ಲೂಕಿನ ಚಿತ್ತಾಪೂರ ಸೇರಿದಂತೆ ಲೋಕಾ ಅಧಿಕಾರಿಗಳು ಅಕ್ರಮ ಮರಳು ದಂಧೆಕೋರರು ಜಮೀನುಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ ಮರಳು ಅಡ್ಡೆಗಳನ್ನ ಪತ್ತೆ ಹಚ್ಚಿದ್ದಲ್ಲದೆ.ಮರಳು ಎತ್ತಲು ಬಳಕೆ ಮಾಡ್ತಿದ್ದ ಬೋಟ್,ಪೈಪ್ ಲೈನ್ ಹಾಗೂ ಅಕ್ರಮ ಮರಳು ಸಾಗಾಟ ಮಾಡ್ತಿದ್ದ ಟಿಪ್ಪರಗಳು ಲೋಕಾ ಅಧಿಕಾರಿಗಳಿಗೆ ಸಿಕ್ಕುಬಿದ್ದಿವೆ.ಸಾರ್ವಜನಿಕರ ದೂರಿನ ಮೇರೆಗೆ ಮಾಹಿತಿ ಖಚಿತ ಪಡೆಸಿಕೊಂಡು ದಾಳಿಗಿಳಿದ ಲೋಕಾ ಅಧಿಕಾರಿಗಳು ಅಕ್ರಮ ಮರಳು ದಂಧೆಕೋರರ ಬೆನ್ನು ಬಿದ್ದಿದ್ದು,ಮರಳು ಅಡ್ಡೆಗಳ ಸ್ಥಳ ಮಹಜರ,ಪರಿಶೀಲನೆ ಮುಂದುವರೆಸಿದ್ದಾರೆ.

ಒಟ್ಟಿನಲ್ಲಿ ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಅಕ್ರಮ ಮರಳು ದಂಧೆಕೋರರ ಆಮಿಶ್ಯಕ್ಕೆ ಬಲಿಯಾಗಿ ಕರ್ತವ್ಯ ಮರೆತು ಭ್ರಷ್ಟರ ಚೇಲಾಗಳಾಗಿ ಕರ್ತವ್ಯ ನಿರ್ವಹಿಸುತ್ತಿರೋ ಸ್ಥಳೀಯ ಅಧಿಕಾರಿಗಳ ವಿರುದ್ದ ಸ್ಥಳೀಯರು ಆಕ್ರೋಶ ಹೊರಹಾಕಿದ್ದಂತೂ ಸುಳ್ಳಲ್ಲ….

Tags:

error: Content is protected !!