hukkeri

ಹುಕ್ಕೇರಿ : ಮೇ 20 ರಂದು ಹುಕ್ಕೇರಿಯಲ್ಲಿ ಜರುಗುವ ರೈತ ಹೋರಾಟಕ್ಕೆ ಮಠಾಧೀಶರ ಬೆಂಬಲ

Share

• ನಾಳೆ ಹುಕ್ಕೇರಿಯಲ್ಲಿ ಬೃಹತ್ ರೈತ ಪ್ರತಿಭಟನೆ
• ಹೋರಾಟಕ್ಕೆ ಹಿರೇಮಠದ ಶ್ರೀಗಳ ಪೂರ್ಣ ಬೆಂಬಲ
• ಮೂರು ನದಿಗಳಿದ್ದರೂ ತಾಲೂಕಿಗೆ ತಪ್ಪದ ವಂಚನೆ
• ನೀರಾವರಿ ಯೋಜನೆಗೆ ಆಗ್ರಹಿಸಿ ತೀವ್ರ ಆಕ್ರೋಶ

ಹುಕ್ಕೇರಿ ನಗರದಲ್ಲಿ ಮೇ 20 ರಂದು ವಿವಿಧ ರೈತ ಸಂಘಟನೆಗಳು ಹಮ್ಮಿಕೊಂಡ ಪ್ರತಿಭಟನೆಗೆ ಮಠಾಧೀಶರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಹುಕ್ಕೇರಿ ತಾಲೂಕು ಮೂರು ನದಿಗಳು ಮತ್ತು ಎರಡು ಜಲಾಶಯಗಳು ಹೊಂದಿದ್ದರು ಸಂಪೂರ್ಣ ನೀರಾವರಿ ಹೊಂದದೆ ರೈತರು ಸಂಕಷ್ಟಕ್ಕೋಳಗಾಗಿದ್ದಾರೆ ಕಾರಣ ಹುಕ್ಕೇರಿ ತಾಲೂಕಿನಲ್ಲಿ ವಿವಿಧ ಏತ ನೀರಾವರಿ ಯೋಜನೆಗಳ ಮೂಲಕ ನೀರು ಹರಿಸುವ ಕಾರ್ಯವಾಗಬೇಕು ಎಂದು ಆಗ್ರಹಿಸಿ ಮೇ 20 ರಂದು ಬೃಹತ್ ರೈತ ಪ್ರತಿಭಟನೆ ಜರುಗಲಿದೆ ಈ ಕುರಿತು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಮಹಾಸ್ವಾಮಿಗಳು ಮಾತನಾಡಿ ರೈತರು ತಮ್ಮ ಜಮಿನುಗಳಿಗೆ ನೀರು ನೀಡುವಂತೆ ಆಗ್ರಹಿಸುತ್ತಿದ್ದಾರೆ ಕೂಡಲೇಈ ಭಾಗದ ಶಾಸಕರು, ಸಂಸದರು ಉಸ್ತುವಾರಿ ಸಚಿವರು ಸರ್ಕಾರದ ಮೇಲೆ ಒತ್ತಡ ತಂದು ಸಂಪೂರ್ಣ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳ ಬೇಕು ಎಂದು ಆಗ್ರಹಿಸಿದರು.

Tags:

error: Content is protected !!