ಖಾನಾಪೂರ ತಾಲೂಕಿನ ಐತಿಹಾಸಿಕ ನಂದಗಡ ಗ್ರಾಮದ ಪೋಲಿಸ್ ಠಾಣೆಯಲ್ಲಿ ಸುಮಾರು ವರ್ಷಗಳಿಂದ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸೇವೆ ಸಲ್ಲಿಸುತ್ತಿದ್ದ ಎಎಸ್ಐ ಆರೇರ್, ಎಎಸ್ಐ ಮುಕಾಶಿ,ಹವಾಲ್ದಾರ್ ನಾಗರಾಜ್ ಬೆಳವಡಿ, ಪೋಲಿಸ್ ರಾದ ವಿಜಯ ಪಾಟೀಲ, ಭಜಂತ್ರಿ ಇವರು ತಮ್ಮ ಇಲಾಖೆಯ ನಿಯಮದಂತೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಅವರನ್ನು ನಂದಗಡ ಪೋಲಿಸ್ ಠಾಣೆಯ ಇನ್ಸ್ಪೆಕ್ಟರ್ ರವಿಕುಮಾರ್ ಧರ್ಮಟ್ಟಿ ಇವರ ನೇತೃತ್ವದಲ್ಲಿ ಸತ್ಕರಿಸಿ ಅವರು ಮುಂದಿನ ಸೇವಾ ಅವಧಿಯಲ್ಲಿ ಒಳ್ಳೆಯ ರೀತಿಯಲ್ಲಿ ನಡೆಯಲ್ಲಿ ಎಂದು ಹಾರೈಸಿ ಬೀಳ್ಕೊಟ್ಟರು

ಈ ಸಂದರ್ಭದಲ್ಲಿ ಪಿಎಸ್ಐ ಬಳಿಗಾರ್, ಪಿಎಸ್ಐ ಮಹಾನಂದಾ, ಎಎಸ್ಐ ಶ್ರೀನಿವಾಸ,ಹವಾಲ್ದಾರ್ ನೀಲಕಂಠ ಚಂದರಗಿ, ಶಿವಾನಂದ ತುರಮುರಿ,ಚೀದಾನಂದ ಮನ್ನಿಕೇರಿ ಎಸ್.ಜಿ.ಶಿಂತ್ರೆ,ಶ್ರಿಕಾಂತ ತಳವಾರ,ಸಿ.ಎಸ್.ಕರವಿನಕೊಪ್ಪ, ಸೇರಿದಂತೆ ಇನ್ನಿತರ ಪೋಲಿಸ್ ಠಾಣೆಯ ಪೊಲೀಸರು ಅಧಿಕಾರಿಗಳು ಉಪಸ್ಥಿತರಿದ್ದರು.

