Nandagad

ಅತಿವೇಗದಿಂದ ಬಂದು ಅಂಗಡಿಗೆ ನುಗ್ಗಿದ ಕಾರು; ಬೀಡಿ ಗ್ರಾಮದಲ್ಲಿ ‘ಸಾಯಿಕೃಪಾ ಹಾರ್ಡ್‌ವೇರ್’ ಅಂಗಡಿಗೆ ಸುಮಾರು ಒಂದು ಲಕ್ಷ ರೂ. ನಷ್ಟ

Share

ಖಾನಾಪೂರ: ತಾಲೂಕಿನ ಬೀಡಿ (ಕಸಬಾ–ನಂದಗಡ ಮಾರ್ಗ) ಗ್ರಾಮದಲ್ಲಿ ಮಂಗಳವಾರ ಸಂಜೆ ಸುಮಾರು 7.45ರ ಸುಮಾರಿಗೆ ಅತಿವೇಗದಲ್ಲಿ ಬಂದ ಕಾರೊಂದು ನೇರವಾಗಿ ಅಂಗಡಿಗೆ ನುಗ್ಗಿದ ಪರಿಣಾಮ ದೊಡ್ಡ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಬೀಡಿ ಗ್ರಾಮದ ಸಾಗರ್ ಪಾಟೀಲ್ ಅವರ ಮಾಲೀಕತ್ವದ ‘ಸಾಯಿಕೃಪಾ ಹಾರ್ಡ್‌ವೇರ್ ಅಂಡ್ ಪೇಂಟ್’ ಅಂಗಡಿಯಲ್ಲಿದ್ದ ಸಾಮಗ್ರಿಗಳು ಭಾರೀ ಪ್ರಮಾಣದಲ್ಲಿ ಹಾನಿಗೊಳಗಾಗಿದ್ದು, ಸುಮಾರು ಒಂದು ಲಕ್ಷ ರೂಪಾಯಿ ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ.

ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿದೆನೆಂದರೆ ಮಾರುಕಟ್ಟೆ ದಿನವಾಗಿದ್ದರಿಂದ ಪ್ರದೇಶದಲ್ಲಿ ಹೆಚ್ಚಿನ ಜನಸಂದಣಿ ಇತ್ತು. ಅಂಗಡಿ ಮುಂದೆ ಅನೇಕ ದ್ವಿಚಕ್ರ ವಾಹನಗಳು ನಿಲ್ಲಿಸಲಾಗಿದ್ದವು. ಕಸಬಾ–ನಂದಗಡ ಮಾರ್ಗದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ನೇರವಾಗಿ ಅಂಗಡಿಗೆ ನುಗ್ಗಿದೆ.

ಈ ವೇಳೆ ಅಂಗಡಿ ಮುಂದೆ ನಿಂತಿದ್ದ ಒಬ್ಬ ಗ್ರಾಹಕ ಗಾಯಗೊಂಡಿದ್ದು, ಅವರ ಹೆಸರು ತಿಳಿದುಬಂದಿಲ್ಲ. ಗಾಯಗೊಂಡವರನ್ನು ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಕಾಲಿಗೆ ಗಂಭೀರ ಗಾಯಗಳಾಗಿರುವುದಾಗಿ ತಿಳಿದುಬಂದಿದೆ.

ಘಟನೆಯ ಮಾಹಿತಿ ದೊರಕುತ್ತಿದ್ದಂತೆಯೇ ನಂದಗಡ ಪೊಲೀಸ್ ಠಾಣೆಯ ಪಿಎಸ್‌ಐ ಬಳಿಗಾರ, ಪಿಎಸ್‌ಐ ಶ್ರೀಮತಿ ಮಹಾನಂದಾ ಹಾಗೂ ಹವಾಲ್ದಾರ್ ಎನ್.ಎ. ಚಂದರಗಿ ಅವರು ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ ನಡೆಸಿದರು. ಮುಂದಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.

Tags:

error: Content is protected !!