• ವಿಜಯಪುರದಲ್ಲಿ ಮೊಳಗಿದ ಬೃಹತ್ ರೈತ ಗರ್ಜನೆ
• ಆಲಮಟ್ಟಿ ಎತ್ತರಕ್ಕೆ ಒತ್ತಾಯಿಸಿ ಸರ್ಕಾರದ ಮೇಲೆ ಒತ್ತಡ
• ಹಸಿರು ಟವೆಲ್ ಬೀಸಿ ರೈತರಿಂದ ಒಕ್ಕೊರಲ ಬೆಂಬಲ
• ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ರೈತರ ಸಂಕಲ್ಪ

ರೈತರಿಗೆ ಸಂಕಷ್ಟಗಳು ಒಂದಲ್ಲಾ ಎರಡಲ್ಲಾ ನೂರಾ ಎಂಟು. ರೈತರ ಸಮಸ್ಯೆಗಳನ್ನು ಸರ್ಕಾರಗಳು ಕೇಳದೇ ಹೋದಲ್ಲಿ ಅನ್ನದಾತರು ಒಟ್ಟಾಗಿ ಸೇರಿ ಹೋರಾಟಕ್ಕೆ ಇಳಿಯುತ್ತಿದ್ದಾರೆ. ತಮ್ಮ ಬೇಡಿಕೆಗಳನ್ನು ಮಂಡಿಸಲು ಬೃಹತ್ ಪ್ರಮಾಣದ ಸಮಾವೇಶ ಏರ್ಪಡಿಸಿ ಸರ್ಕಾರಗಳಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ಇಂತಹದ್ದೇ ಸಮಾವೇಶಕ್ಕೆ ವಿಜಯಪುರ ಸಾಕ್ಷಿಯಾಯಿತು. ಈ ಕುರಿತು ಇಲ್ಲಿದೆ ಒಂದು ವರದಿ…

ಹೌದು, ವಿಜಯಪುರ ಮಹಾನಗರದ ದರ್ಬಾರ ಗ್ರೌಂಡನಲ್ಲಿ ನಡೆದ ರಾಜ್ಯಮಟ್ಟದ ಬೃಹತ ರೈತ ಸಮಾವೇಶದಲ್ಲಿ ನಡೆಯಿತು. ಹಲವು ಮಠಾದೀಶರು, ರೈತ ಮುಖಂಡರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು. ಈ ಸಮಾವೇಶದ ದಿವ್ಯಸಾನಿದ್ಯವನ್ನು ಪರಮಪೂಜ್ಯ ಡಾಕ್ಟರ ಮುರಘರಾಜೇಂದ್ರ ಮಹಾಸ್ವಾಮೀಜಿಗಳು ವಹಿಸಿದ್ದರು. ಪಾವನ ಸಾನಿದ್ಯವನ್ನು ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿಗಳು, ಮಾತೊಶ್ರೀ ಸುವರ್ಣಾತಾಯಿ ಹೊಸಮಠ, ಮಾತೋಶ್ರೀ ದಾನಮ್ಮ ತಾಯಿಯವರು,ಪೂಜ್ಯ ಯಾಸಿನ ಮುಲ್ಲಾ ಗುರುಗಳು ವಹಿಸಿದ್ದರು. ಈ ಸಮಾವೇಶದಲ್ಲಿ ಉತ್ತರ ಕರ್ನಾಟಕ ಜೀವನಾಡಿ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ‘ಆಲಮಟ್ಟಿ ಲಾಲ್ ಬಹಾದ್ದೂರ ಶಾಸ್ತ್ರಿ ಅಣೆಕಟ್ಟಿನ ಎತ್ತರವನ್ನು 519.60 ಮೀಟರ್ನಿಂದ 524.256 ಮೀಟರ್ಗೆ ಹೆಚ್ಚಿಸುವುದು, ಭೂ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸುವುದು, ಐದು ಜಿಲ್ಲೆಗಳಿಗೆ ಸಮಗ್ರ ನೀರಾವರಿ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸಮಾವೇಶದಲ್ಲಿ ಮಂಡಿಸಲಾಯಿತು.
ಇನ್ನೂ ‘ಮುಳವಾಡ ಸೇರಿದಂತೆ ಏತ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದು, ಮುಳುಗಡೆ ಪ್ರದೇಶದ ರೈತರಿಗೆ ಬಾಕಿ ಪರಿಹಾರ ನೀಡುವುದು, ಬೆಳೆಗಳಿಗೆ ಬೆಂಬಲ ಬೆಲೆ ಹಾಗೂ ಮಾರುಕಟ್ಟೆ ಸೌಲಭ್ಯ ಒದಗಿಸುವುದು, ವಿದ್ಯುತ್ ಯೋಜನೆ ಮುಂದುವರಿ ಸುವುದು ಸೇರಿದಂತೆ ಹಲವಾರು ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆದರು. ಅಷ್ಟೆ ಅಲ್ಲದೇ ಸಂಪೂರ್ಣ ಪೋಡಿಮುಕ್ತ ಸೇರಿದಂತೆ ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ವಿದ್ಯಾವಂತ ನಿರುದ್ಯೋಗಿ ಯುವಕರಿಗೋಸ್ಕರ ಭರ್ತಿ ಮಾಡಲು ಆಗ್ರಹಿಸಲಾಯಿತು. ರೈತರು ಹಸಿರು ಟವೆಲ್ ಬಿಸಿ ಒಕ್ಕೋರಲ ಬೆಂಬಲ ಸೂಚಿಸಿದರು.
ಇನ್ನೂ ರೈತ ಸಾಧಕರಿಗೆ ಸನ್ಮಾನಿಸಲಾಯಿತು. ಒಟ್ಟಾರೆ ವಿಜಯಪುರ ನಗರದಲ್ಲಿ ಬೃಹತ್ ರೈತರ ಸಮಾವೇಶ ರಾಜ್ಯದ ಗಮನಸೆಳೆದು ಸರ್ಕಾರಕ್ಕೆ ಬಿಸಿ ಮುಟ್ಟಿಸುವಲ್ಲಿ ಯಶಸ್ವಿಯಾಯಿತು.
