• ಬೀದಿ ನಾಯಿಗಳ ಹಾವಳಿಗೆ ಎಂಎಲ್ಸಿ ಆತಂಕ.
• ಮಗುವಿನ ಚಿಕಿತ್ಸಾ ವೆಚ್ಚ ಸರ್ಕಾರ ಭರಿಸಲಿ.
• ಅಧಿಕಾರಿಗಳ ವಿಳಂಬ ನೀತಿಗೆ ತೀವ್ರ ಅಸಮಾಧಾನ.
• ನಾಯಿಗಳ ನಿಯಂತ್ರಣಕ್ಕೆ ಕೇಶವ ಪ್ರಸಾದ್ ಒತ್ತಾಯ.

ಆ್ಯಂಕರ್: ಬೀದಿ ನಾಯಿ ಉಪಟಳ ಸಂಪೂರ್ಣವಾಗಿ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಪಾಲಿಕೆ ಇಲಾಖಾಧಿಕಾರಿಗಳು ಗಂಭೀರ ಸ್ವರೂಪದ ಕ್ರಮಗಳನ್ನು ಕೈಗೊಳ್ಳಬೇಕು, ಈ ವಿಷಯದಲ್ಲಿ ವಿಳಂಬ ನೀತಿ ಅನುಸರಿಸದೇ ನಿಯಂತ್ರಣ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್ ಒತ್ತಾಯಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಬೀದಿ ನಾಯಿಗಳ ಹಾವಳಿ ಭೀಕರ ಸ್ವರೂಪ ತಲುಪಿದೆ, ಚಿಕ್ಕ ಮಗುವನ್ನು ಬೀದಿ ನಾಯಿಗಳು ದಾಳಿ ನಡೆಸಿವೆ, ಆ ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ, ಮಗುವಿನ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸಬೇಕು, ಮಗುವಿಗೆ ಇನ್ನೂ ಉನ್ನತ ಮಟ್ಟದ ಚಿಕಿತ್ಸೆ ಅಗತ್ಯವಿದ್ದರೆ ಅದನ್ನು ಕೂಡಾ ಸರ್ಕಾರ ಮುಂದಾಳತ್ವ ವಹಿಸಿ ಅದನ್ನು ದೊರಕಿಸಬೇಕು, ಬೀದಿ ನಾಯಿಗಳ ಉಪಟಳ ಜನರನ್ನು ಭಯಭೀತರನ್ನಾಗಿಸಿದೆ, ಚಿಕ್ಕ ಮಕ್ಕಳನ್ನು ಹೊರಗೆ ಬಿಡಲು ಹೆದರುವಂತಾಗಿದೆ, ದೊಡ್ಡವರು ಸಹ ಹೊರಗಡೆ ಸಂಚರಿಸಲು ಭಯ ಪಡುವ ಪರಿಸ್ಥಿತಿ ಇದೆ ಎಂದು ಅನೇಕರು ನನಗೆ ದೂರಿದ್ದಾರೆ, ಇದು ಆತಂಕಕಾರಿ ವಿಷಯ, ಈ ನಿಟ್ಟಿನಲ್ಲಿ ಪಾಲಿಕೆ ಹಾಗೂ ಸಂಬಂಧಿಸಿದ ಅಧಿಕಾರಿಗಳು ಸಮನ್ವಯತೆ ಸಾಧಿಸಿ ಬೀದಿ ನಾಯಿಗಳ ಉಪಟಳ ನಿಯಂತ್ರಿಸುವ ನಿಟ್ಟಿನಲ್ಲಿ ದಿಟ್ಟ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
