ಉಪಚುನಾವಣೆ ಫಲಿತಾಂಶ 2028ಕ್ಕೆ ದಿಕ್ಸೂಚಿ

ಸಚಿವ ಸಂಪುಟ ಸೇರಲು ಸಲೀಂ ಅಹ್ಮದ್ ಆಕಾಂಕ್ಷೆ

ಮೇ ತಿಂಗಳಲ್ಲಿ ಸಂಪುಟ ಪುನರ್‌ರಚನೆ ಸಾಧ್ಯತೆ
ಶೃಂಗೇರಿಯಲ್ಲಿ ಮತಪತ್ರ ಟ್ಯಾಂಪರಿಂಗ್ ಆರೋಪ
ಕರ್ನಾಟಕ ರಾಜ್ಯದ ದಾವಣಗೆರೆ ಹಾಗೂ ಬಾಗಲಕೋಟೆ ಉಪ ಚುನಾವಣಾ ಫಲಿತಾಂಶ ಮುಂದಿನ 2028 ರ ರಾಜ್ಯ ವಿಧಾನ ಸಭಾ ಚುನಾವಣೆಯ ದಿಕ್ಸೂಚಿ ಎಂದು ವಿಧಾನ ಪರಿಷತ್ ಕಾಂಗ್ರೆಸ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ದಾವಣಗೆರೆ ಹಾಗೂ ಬಾಗಲಕೋಟೆ ಎರಡು ಉಪ ಚುನಾವಣೆಯಲ್ಲಿ ತಮ್ಮ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಶ್ರಮಿಸಿದ್ದಾರೆ. ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯ ಹಾಗೂ ಐದು ಗ್ಯಾರಂಟಿಯಿಂದ ನಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕಾರಣವಾಯಿತು. ಭಾರತೀಯ ಜನತಾ ಪಕ್ಷದವರೇ ಹೇಳಿದಂತೆ ಈ ಎರಡು ಫಲಿತಾಂಶ ಮುಂದಿನ ವಿಧಾನ ಸಭಾ ಚುನಾವಣೆಗೆ ದಿಕ್ಸೂಚಿ ಎಂದರು.
ಶೀಘ್ರದಲ್ಲೇ ಸಚಿವ ಸಂಪುಟ ಪುನರ್ ರಚನೆ
ಆದಷ್ಟು ಬೇಗನೆ ಸಚಿವ ಸಂಪುಟ ಪುನರ್ ರಚನೆಯಾಗುತ್ತದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ದೆಹಲಿಗೆ ಹೋದ ಮೇಲೆ ಅದು ನಿರ್ಧಾರವಾಗುತ್ತದೆ. ಮೇ ತಿಂಗಳಲ್ಲಿ ಆಗಬಹುದು
ಆದಷ್ಟು ಬೇಗನೆ ಸಂಪುಟ ಪುನರ್ ರಚನೆಯಾಗಬೇಕು ಅಂತ ಹೈಕಮಾಂಡ್ ಗೆ ಮನವಿ ಮಾಡಿದ್ದೇವೆ. ಹೊಸಬರಿಗೆ ಅವಕಾಶ ಮಾಡಿಕೊಡಿ ಅಂತ ಮನವಿ ಮಾಡಿದ್ದೇವೆ. ಅಂತಿಮವಾಗಿ ಹೈಕಮಾಂಡ್ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತದೆ ಎಂದರು. ಕ್ಯಾಬಿನೆಟ್ ವಿಸ್ತರಣೆ ಖಂಡಿತಾ ಆಗುತ್ತದೆ .ನಾನು ಸಹ ಸಚಿವ ಸ್ಥಾನದ ಆಕಾಂಕ್ಷಿ ಎಂದು ಆಶಯ ವ್ಯಕ್ತಪಡಿಸಿದರು.
ಇನ್ನು ಶೃಂಗೇರಿ ಚುನಾವಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರುಈ ಹಿಂದೆ ನಮ್ಮ ಅಭ್ಯರ್ಥಿ ರಾಜೇಗೌಡ 201 ಮತಗಳಿಂದ ಗೆದ್ದಿದ್ದರು. ಮತ ಪತ್ರಗಳನ್ನು ಟ್ಯಾಂಪರಿಂಗ್ ಮಾಡಿದ್ದಾರೆ. ಇದರಲ್ಲಿ ದೊಡ್ಡ ಷಂಡ್ಯಂತ್ರವಾಗಿದೆ.
ಬಿಜೆಪಿಯವರು ಮತಕಳ್ಳರು ಗೆದ್ದವರನ್ನು ಸೋಲಿಸಿದ್ದಾರೆ. ಸೋತವರನ್ನು ಗೆಲ್ಲಿಸಿದ್ದಾರೆ ಎಂದು ಆರೋಪ ಮಾಡಿದರು.
