hubbali

ಅಂತರ ಜಿಲ್ಲೆಯ ಗೋ ಕಳ್ಳರನ್ನು ಕಂಬಿ ಹಿಂದೆ ತಳ್ಳಿದ ಹುಬ್ಬಳ್ಳಿಯ ಬೆಂಡಿಗೇರಿ ಠಾಣೆಯ ಖಾಕಿ ಪಡೆ

Share

ಐಷಾರಾಮಿ ಕಾರಿನಲ್ಲಿ ಗೋವುಗಳ ಕಳ್ಳತನ

ಬೆಂಡಿಗೇರಿ ಪೊಲೀಸರಿಂದ ಅಂತರ ಜಿಲ್ಲಾ ಕಳ್ಳನ ಬಂಧನ

ಬ್ಲ್ಯಾಕ್ ಸ್ಟಿಕ್ಕರ್ ಅಂಟಿಸಿ ಪೊಲೀಸರಿಗೆ ಚಳ್ಳೆಹಣ್ಣು

ಖತರ್ನಾಕ್ ಗೋ ಕಳ್ಳರ ಜಾಲ ಪತ್ತೆಹಚ್ಚಿದ ಖಾಕಿ ಪಡೆ

ಬೇರೆ ಜಿಲ್ಲೆಯಿಂದ ಐಷಾರಾಮಿ ಕಾರು ತಂದು ಹುಬ್ಬಳ್ಳಿಯಲ್ಲಿ ಆಕಳುಗಳನ್ನು ಕಳ್ಳತನ ಮಾಡುತ್ತಿದ್ದ ಖತರ್ನಾಕ್‌ ಕಳ್ಳರನ್ನು ಜೈಲಿಗೆ ಕಳುಹಿಸುವಲ್ಲಿ ಹುಬ್ಬಳ್ಳಿಯ ಬೆಂಡಿಗೇರಿ ಠಾಣೆಯ ಸಕ್ಸಸ್ ಆಗಿದ್ದು. ಓರ್ವ ಗೋ ಕಳ್ಳ ಮತ್ತು ಐಷಾರಾಮಿ ಕಾರನ್ನು ವಶಕ್ಕೆ ಪಡೆದಿದ್ದಾರೆ.

ಶಿವಮೊಗ್ಗ ಮೂಲದ ಮುಬಾರಕ್ ಮತ್ತು ಆತನ ಇನ್ನಿಬ್ಬರು ಸ್ನೇಹಿತರು ಬಿಳಿ ಬಣ್ಣದ ಐಷಾರಾಮಿ ಕಾರಿಗೆ ಬ್ಲ್ಯಾಕ್ ಕಲರ್ ಸ್ಟಿಕರ್ ಅಂಟಿಸಿಕೊಂಡು, ಹುಬ್ಬಳ್ಳಿಯ ಸೆಟ್ಸ್‌ಮೆಂಟ್,ಹಳೇ ಹುಬ್ಬಳ್ಳಿ ಸೇರಿದಂತೆ ವಿವಿಧ ಕಡೆಗಳಲ್ಲಿ ರಸ್ತೆ ಬದಿಯಲ್ಲಿ ಮಲಗಿದ್ದ ಜಾನುವಾರುಗಳನ್ನು ಕಳ್ಳತನ ಮಾಡಿಕೊಂಡು ಹೋಗುತ್ತಿರೋ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಆಗಿತ್ತು.

ಈ ಹಿನ್ನೆಲೆಯಲ್ಲಿ ಅಲರ್ಟ್ ಆದ ಬೆಂಡಿಗೇರಿ ಠಾಣೆಯ ಇನ್ಸೆಕ್ಟ‌ರ್ ಎಸ್ ಆ‌ರ್ ನಾಯಕ ನೇತೃತ್ವದ ತಂಡ ಗೋ ಕಳ್ಳರ ಪತ್ತೆಗೆ ಮುಂದಾಗಿತ್ತು, ಸಿಸಿ ಕ್ಯಾಮೆರಾ ಸೇರಿದಂತೆ ವಿವಿಧ ಮೂಲಗಳ ಮೂಲಕ ಮಾಹಿತಿ ಕಲೆ ಹಾಕಿದಾಗ ಆರೋಪಿಗಳು ಶಿವಮೊಗ್ಗ ಮೂಲದವರು ಎಂಬ ಮಾಹಿತಿ ಲಭ್ಯವಾದ ಕೂಡಲೇ ಪ್ರಮುಖ ಆರೋಪಿ ಮುಬಾರಕ್ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಕಾರನ್ನು ವಶಕ್ಕೆ ಪಡೆದಿದ್ದಾರೆ.

ಸದ್ಯ ಪ್ರಕರಣದಲ್ಲಿ ಭಾಗಿಯಾದ ಇನ್ನಿಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದು ಸುದ್ದಿ ಪ್ರಸಾರವಾದ ಕೂಡಲೇ ಅಲರ್ಟ್ ಆಗಿ ಕಾರ್ಯ ನಿರ್ವಹಿಸಿದ ಇನ್ಸೆಕ್ಟರ್ ಎಸ್ ಆರ್ ನಾಯಕ, ಪಿಎಸ್‌ಐ ರವಿ ಹಾಗೂ ಸಿಬ್ಬಂದಿ ಆರ್ ಎಸ್ ಹರ್ಕಿ, ಹನುಮಂತ ಕರಗಾವಿ, ಬಸು ಬೆಳಗಿ, ಮುತ್ತು ಗಾನಗಿ ಅವರ ಕಾರ್ಯಕ್ಕೆ ಕಮಿಷನ‌ರ್ ಶಶಿಕುಮಾ‌ರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Tags:

error: Content is protected !!