State

ಚಿಕ್ಕಮಗಳೂರಿನಲ್ಲಿ ಮತ ಟ್ಯಾಂಪರಿಂಗ್ ಅಕ್ರಮ: ನ್ಯಾಯಾಲಯದ ಮೊರೆ ಹೋಗಲು ಕಾಂಗ್ರೆಸ್ ನಿರ್ಧಾರ

Share

• ಶೃಂಗೇರಿಯಲ್ಲಿ ಅಂಚೆ ಮತಗಳ ಟ್ಯಾಂಪರಿಂಗ್ ಆರೋಪ
• 200ಕ್ಕೂ ಅಧಿಕ ಮತಪತ್ರ ತಿದ್ದಿದ ಅಧಿಕಾರಿಗಳು
• ಅಕ್ರಮದ ವಿರುದ್ಧ ನ್ಯಾಯಾಲಯಕ್ಕೆ ಡಿಸಿಎಂ ಡಿ.ಕೆ.ಶಿ
• ಜಯನಗರ ಮಾದರಿಯಲ್ಲೇ ಅಕ್ರಮವೆಂದ ಕಾಂಗ್ರೆಸ್

ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಇಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಚುನಾವಣಾ ಅಕ್ರಮಗಳ ಕುರಿತು ಗಂಭೀರ ಆರೋಪ ಮಾಡಿದ್ದಾರೆ. ಶೃಂಗೇರಿ ಹಾಗೂ ಜಯನಗರದ ಮತ ಎಣಿಕೆಯಲ್ಲಿ ಅಧಿಕಾರಿಗಳ ಮೂಲಕ ಅಕ್ರಮ ಎಸಗಲಾಗಿದ್ದು, ಇದರ ವಿರುದ್ಧ ಕಾನೂನು ಸಮರ ಸಾರುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದ ಚುನಾವಣಾ ಅಪರಾಧ ನಡೆದಿದೆ” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದಾರೆ. ಹೊಸಪೇಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶೃಂಗೇರಿ ಕ್ಷೇತ್ರದಲ್ಲಿ ಅಂಚೆ ಮತಗಳ ಎಣಿಕೆಯ ವೇಳೆ ಭಾರೀ ಅಕ್ರಮ ನಡೆದಿದೆ. ಅಧಿಕಾರಿಗಳೇ ಶಾಮೀಲಾಗಿ 200ಕ್ಕೂ ಅಧಿಕ ಮತಪತ್ರಗಳನ್ನು ತಿದ್ದಿದ್ದಾರೆ. ನಮ್ಮ ಶಾಸಕರಿಗೆ ಬಂದ ಮತಗಳನ್ನು ಟ್ಯಾಂಪರಿಂಗ್ ಮಾಡುವ ಮೂಲಕ ಫಲಿತಾಂಶದ ಮೇಲೆ ಪ್ರಭಾವ ಬೀರಲಾಗಿದೆ ಎಂದು ಅವರು ನೇರ ಆರೋಪ ಮಾಡಿದರು.
ಇದೇ ವೇಳೆ ಬೆಂಗಳೂರಿನ ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶವನ್ನು ಪ್ರಸ್ತಾಪಿಸಿದ ಡಿ.ಕೆ. ಶಿವಕುಮಾರ್, ಅಲ್ಲಿಯೂ ಇದೇ ರೀತಿಯ ಅಕ್ರಮಗಳನ್ನು ನಡೆಸಿ ಮತಗಳನ್ನು ಕದಿಯಲಾಗಿದೆ. ಈ ಅನ್ಯಾಯವನ್ನು ನಾವು ಸಹಿಸುವುದಿಲ್ಲ, ಅಧಿಕಾರಿಗಳ ಈ ನಡವಳಿಕೆ ಹಾಗೂ ಮತಗಳ ಟ್ಯಾಂಪರಿಂಗ್ ವಿರುದ್ಧ ಶೀಘ್ರದಲ್ಲೇ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಸ್ಪಷ್ಟಪಡಿಸಿದರು. ಲೋಕಸಭಾ ಚುನಾವಣೆಯ ಮತ ಎಣಿಕೆಯ ಹೊಸ್ತಿಲಲ್ಲಿ ಡಿಸಿಎಂ ನೀಡಿರುವ ಈ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ.

Tags:

error: Content is protected !!