hubbali

ಕ್ಷುಲಕ ಕಾರಣಕ್ಕೆ ಇಬ್ಬರ ನಡುವೆ ಜಗಳ ಓರ್ವನಿಗೆ ಚಾಕು ಇರಿತ

Share

• ಹುಬ್ಬಳ್ಳಿಯಲ್ಲಿ ಕ್ಷುಲಕ ಕಾರಣಕ್ಕೆ ಚಾಕು ಇರಿತ.
• ಸಲ್ಮಾನ್ ಎಂಬ ಯುವಕನಿಗೆ ಗಂಭೀರ ಗಾಯ.
• ಮನೆಯೊಳಗೆ ಇಣುಕಿ ನೋಡಿದ್ದಕ್ಕೆ ಶುರುವಾಯ್ತು ಜಗಳ.
• ಕಸಬಾಪೇಟೆ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲು.

ಕ್ಷುಲಕ‌ ಕಾರಣಕ್ಕೆ ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ ಇರಿದ ಘಟನೆ ಇಲ್ಲಿಯ ಎಸ್.ಎಂ. ಕೃಷ್ಣ ನಗರದಲ್ಲಿ ಸೋಮವಾರ ನಡೆದಿದೆ.
ಸಲ್ಮಾನ್ ಕಲಾದಗಿ ಎಂಬಾನಿಗೆ ಚಾಕುವಿನಿಂದ ಇರಿಯಲಾಗಿದೆ. ಎದೆ ಮತ್ತು ಎಡಗೈಗೆ ಗಾಯವಾಗಿದ್ದು, ಕೆಎಂಸಿಆರ್‌ಐನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮನೆಯೊಳಗೆ ಇಣುಕಿ ನೋಡಿದ ವಿಚಾರವಾಗಿ ಸಿಖಂದರ್ ಶೇಖ್ ಎಂಬಾತನೊಂದಿಗೆ ಜಗಳ ನಡೆದಿದ್ದು, ಸಲ್ಮಾನ್ ಗೆ ಚಾಕು ಇರಿಯಲಾಗಿದೆ. ಚಾಕು ಇರಿತಕ್ಕೀಡಾದ ಸಲ್ಮಾನ್ ಚಾಕು ಇರಿದಿದ್ದರ ಕುರಿತು ದೂರು ಕೊಟ್ಟಿದ್ದರೆ, ಸಲ್ಮಾನ್ ನನಗೆ ಕಲ್ಲಿನಿಂದ ಹೊಡೆದಿದ್ದಾನೆ ಎಂದು ಸಿಖಂದರ್ ಪ್ರತಿ ದೂರು ದಾಖಲಿಸಿದ್ದಾನೆ. ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:

error: Content is protected !!