• ಕಟ್ಟಡದ ಮೇಲಿಂದ ಬಿದ್ದು ಲೈನ್ಮ್ಯಾನ್ ಸಾವು
• ಸಿಂದಗಿ ಕೆಇಬಿ ಕಚೇರಿಯಲ್ಲಿ ನಡೆದ ದುರಂತ
• ನಿದ್ರೆಯ ಮಂಪರಿನಲ್ಲಿ ಆಯತಪ್ಪಿ ಬಿದ್ದ ಮುತ್ತಪ್ಪ
• ಹಂದಿಗನೂರ ಗ್ರಾಮದ ಕುಟುಂಬಸ್ಥರ ಕಣ್ಣೀರು, ಆಕ್ರಂದನ

ಕೆಇಬಿ ಕಛೇರಿಯ ಕಟ್ಟಡದ ಮೇಲೆ ರಾತ್ರಿ ಮಲಗಿದ್ದ ಲೈನ್ ಮ್ಯಾನ್ ಕೆಳಗೆ ಬಿದ್ದು ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ನಡೆದಿದೆ.

ಲೈನ್ ಮೆನ್ ಮುತ್ತಪ್ಪ ಡಂಗಿ (35) ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಅವರು ರಾತ್ರಿ ಕೆಲಸ ಮುಗಿಸಿ ಕಛೇರಿ ಕಟ್ಟಡದ ಮೇಲೆ ಮಲಗಿದ್ದರು. ಮೂತ್ರ ವಿಸರ್ಜನೆಗೆ ತೆರಳುವಾಗ ನಿದ್ದೆಯಲ್ಲಿ ಈ ದುರ್ಘಟನೆ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಮೃತ ಮುತ್ತಪ್ಪ ಡಂಗಿ ಸಿಂದಗಿ ಕೆಇಬಿ ಯಲ್ಲಿ ಲೈನ್ ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದರು ಮತ್ತು ಅವರು ಸಿಂದಗಿ ತಾಲ್ಲೂಕಿನ ಹಂದಿಗನೂರ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. ಸ್ಥಳದಲ್ಲಿ ಮೃತನ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿತ್ತು. ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
