Bagalkote

ಬಾಗಲಕೋಟೆಯಲ್ಲಿ ಹೈಟೆಕ್ ಕುರಿಗಳ್ಳರ ಹಾವಳಿ: ಕಾರ್‌ನಲ್ಲಿ ಬಂದು ಮೇಕೆ ಎಗರಿಸುವ ಗ್ಯಾಂಗ್ ಈಗ ಪೊಲೀಸ್ ಅತಿಥಿ!

Share

• ಕಾರಿನಲ್ಲಿ ಬಂದು ಕುರಿಗಳ್ಳತನ ಮಾಡುವ ಗ್ಯಾಂಗ್
• ಮಹಿಳೆಯರಿಂದಲೇ ನಡೆಯುತ್ತಿತ್ತು ಸ್ಕೆಚ್ ಮತ್ತು ರೆಕ್ಕಿ
• ಕೆರಕಲಮಟ್ಟಿಯ ಏಳು ಮೇಕೆಗಳನ್ನ ಕದ್ದ ಕಳ್ಳರು
• ಪೊಲೀಸ್ ವಶದಲ್ಲಿ ಮೂವರು ಖದೀಮರು, ಕಾರು

ಬಾಗಲಕೋಟೆ ಜಿಲ್ಲೆಯಲ್ಲಿ ಈಗ ಮನೆಗಳ್ಳರ ಕಾಟಕ್ಕಿಂತ ಕುರಿ-ಮೇಕೆಗಳ್ಳರ ಕಾಟ ಹೆಚ್ಚಾಗಿದೆ. ಕಾರ್‌ನಲ್ಲಿ ಬಂದು ಸಿನಿಮಾ ಸ್ಟೈಲ್‌ನಲ್ಲಿ ಮೇಕೆಗಳನ್ನು ಅಪಹರಿಸುತ್ತಿದ್ದ ಹೈಟೆಕ್ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದ್ದು, ರೈತರು ನಿಟ್ಟುಸಿರು ಬಿಡುವಂತಾಗಿದೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದಲ್ಲಿ ವಿಭಿನ್ನ ಮಾದರಿಯ ಕಳ್ಳತನ ಬೆಳಕಿಗೆ ಬಂದಿದೆ. ಈ ಗ್ಯಾಂಗ್‌ನಲ್ಲಿ ಮಹಿಳೆಯರೂ ಶಾಮೀಲಾಗಿದ್ದು, ಮೊದಲು ತೋಟದ ಮನೆಗಳಿಗೆ ಬಂದು ನೀರು ಕೇಳುವ ನೆಪದಲ್ಲಿ ಕುರಿ ದಡ್ಡಿಗಳ ಮೇಲೆ ಕಣ್ಣಿಡುತ್ತಾರೆ. ನಂತರ ಯಾರು ಇಲ್ಲದ ಸಮಯ ನೋಡಿ ಕಾರ್‌ನಲ್ಲಿ ಬಂದು ಮೇಕೆಗಳನ್ನು ತುಂಬಿಕೊಂಡು ಪರಾರಿಯಾಗುತ್ತಿದ್ದರು. ಕೆರಕಲಮಟ್ಟಿ ಗ್ರಾಮದ ರಂಗಪ್ಪ ಎಂಬುವವರ ಏಳು ಮೇಕೆಗಳನ್ನು ಇದೇ ರೀತಿ ಕದ್ದೊಯ್ಯಲಾಗಿತ್ತು.
ಇದೇ ಮಾದರಿಯಲ್ಲಿ ಬೆಳಗಾವಿ ಜಿಲ್ಲೆಯ ಘಟಪ್ರಭಾದಲ್ಲೂ ಕಳ್ಳತನಕ್ಕೆ ಯತ್ನಿಸಿದಾಗ ಸ್ಥಳೀಯರು ಕಳ್ಳರನ್ನು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ. ಸದ್ಯ ಘಟಪ್ರಭಾ ಪೊಲೀಸರು ಮೂವರು ಕಳ್ಳರನ್ನು ಬಂಧಿಸಿ, ಕೃತ್ಯಕ್ಕೆ ಬಳಸುತ್ತಿದ್ದ ಕಾರನ್ನು ವಶಪಡಿಸಿಕೊಂಡಿದ್ದಾರೆ. ಹಗಲು ಹೊತ್ತಿನಲ್ಲೇ ದಡ್ಡಿಗಳನ್ನು ಟಾರ್ಗೆಟ್ ಮಾಡಿ ರೈತರ ಜೀವನಾಧಾರವಾಗಿದ್ದ ಜಾನುವಾರುಗಳನ್ನು ಹೊತ್ತೊಯ್ಯುತ್ತಿದ್ದ ಈ ಗ್ಯಾಂಗ್ ಪತ್ತೆಯಾಗಿರುವುದು ಜಿಲ್ಲೆಯಾದ್ಯಂತ ಸಂಚಲನ ಮೂಡಿಸಿದೆ.

Tags:

error: Content is protected !!