Dharwad

ಪಂಚರಾಜ್ಯ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು ಹಿನ್ನೆಲೆ…. ಧಾರವಾಡದ ನವನಗರದಲ್ಲಿ ಮುಗಿಲು ಮುಟ್ಟಿದ ಬಿಜೆಪಿ&ಹಿಂದೂ ಕಾರ್ಯಕರ್ತರ ಸಂಭ್ರಮ.

Share

• ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಜಯ
• ಧಾರವಾಡ ನವನಗರದಲ್ಲಿ ಮುಗಿಲುಮುಟ್ಟಿದ ಸಂಭ್ರಮ
• ಪಟಾಕಿ ಸಿಡಿಸಿ ಮೋದಿ ಘೋಷಣೆ ಕೂಗಿದ ಕಾರ್ಯಕರ್ತರು
• ಮಾರುಕಟ್ಟೆ ವ್ಯಾಪಾರಿಗಳಿಗೆ ಸಿಹಿ ಹಂಚಿ ವಿಜಯೋತ್ಸವ

ಪಂಚರಾಜ್ಯ ಚುನಾವಣೆಗಳಲ್ಲಿ ಬಿಜೆಪಿ ಪಕ್ಷಕ್ಕೆ ಅಭೂತಪೂರ್ವ ಗೆಲ್ಲವು ಸಿಕ್ಕ ಹಿನ್ನಲೆ ಹಾಗೂ ಪಶ್ಚಿಮ ಬಂಗಳಾದಲ್ಲಿ ದಿಗ್ವಿಜಯ ಸಾಧಿಸದ ಬೆನ್ನಲ್ಲೇ, ಧಾರವಾಡದ ನವನಗರದಲ್ಲಿ ಬಿಜೆಪಿ ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರು ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು.

ನವನಗರದ ಎಪಿಎಂಎಂ ಸಿ ಪೊಲೀಸ್ ಠಾಣೆಯ ಬಳಿಯ ವೃತದಲ್ಲಿ ಬಿಜೆಪಿ ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರು ಮುಗಿಲೆತ್ತರಕ್ಕೆ ಪಟಾಕಿ ಸಿಡಿಸಿ, ಎರಡು ಬಾಕ್ಸ್ ಜಿಲೇಬಿ ಸಿಹಿ ಹಂಚಿ ಸಂಭ್ರಮಾಚಾರಣೆ ಮಾಡಿದರು.‌ ಇದೇ ವೇಳೆ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಪರ ಘೋಷಣೆ ಕೂಗಿದ ಕಾರ್ಯಕರ್ತರು ಪರಸ್ಪರ ಬಣ್ಣ ಹಚ್ಚಿಕೊಂಡು ಪಾಟಾಕಿ ಸಿಡಿಸಿ ಸಂಭ್ರಮಿಸಿ, ಠಾಣೆಯ ಪಕ್ಕದ ಬಸವೇಶ್ವರ ಮಾರುಕಟ್ಟೆಯಲ್ಲಿನ ವ್ಯಾಪಾರಸ್ಥರಿಗೆ ಸಿಹಿ ಹಂಚಿ ಭರ್ಜರಿಯಾಗಿ ಸಂಭ್ರಮಿಸಿದರು. ಇನ್ನೂ ಈ ವೇಳೆ ಬಿಜೆಪಿಯ ಲಕ್ಷ್ಮೀ ದೊಡಮನಿ ಸೇರಿ ರೋಹಿನಿ ಹಾಗೂ ಬಿಜೆಪಿ ಪ್ರಮುಖರು ಸೇರಿ ಅನೇಕ ಗಣ್ಯರು ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದರು .

Tags:

error: Content is protected !!