Athani

ಅಥಣಿ: ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದಳೇ ವಿವಾಹಿತೆ?

Share

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ವಿವಾಹಿತೆ ಗುರುವಾರ ಅನುಮಾನಾಸ್ಪದ ಸಾವು ಸಂಭವಿಸಿದ್ದು, ವರದಕ್ಷಿಣೆ ಕಿರುಕುಳದ ಆರೋಪ ಕೇಳಿಬಂದಿದೆ.

ಸಂಗೀತಾ ಗಾಡಿವಡ್ಡರ ಮೃತ ಮಹಿಳೆ. ಇವರು ವೆಂಕಟೇಶ್ ಗಾಡಿವಡ್ಡರ್ ಎಂಬಾತನೊಂದಿಗೆ ವಿವಾಹವಾಗಿದ್ದರು. ಕಳೆದ ಕೆಲವು ವರ್ಷಗಳಿಂದ ಗಂಡನ ಮನೆಯವರಿಂದ ವರದಕ್ಷಿಣೆಗಾಗಿ ಕಿರುಕುಳ ನೀಡಲಾಗುತ್ತಿತ್ತು ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ.
ಮನೆ ನಿರ್ಮಾಣಕ್ಕಾಗಿ 2 ಲಕ್ಷ ಹಣ ತರಲು ಸಂಗೀತಾಳ ತವರು ಮನೆಗೆ ಪತಿ ವೆಂಕಟೇಶ್ ಒತ್ತಡ ಹಾಕಿದ್ದಾನೆ ಎನ್ನಲಾಗಿದೆ. ಹಣವಿಲ್ಲ ಎಂದಿದ್ದಕ್ಕೆ ಜಗಳವಾಡ ತೊಡಗಿದರು. ಪತಿ, ನಾದಿನಿ, ಎಲ್ಲರೂ ಕಿರುಕುಳ ನೀಡುತ್ತಿದ್ದರು. ಅಲ್ಲದೇ, ಪತಿ ಹಾಗೂ ಪತ್ನಿಯನ್ನು ಬೇರೆ ಇಡಲಾಗಿತ್ತು. ಒಂದುವರೆ ತಿಂಗಳಲ್ಲೇ ನನ್ನ ಮಗಳನ್ನು ಹೊಡೆದು ಹಾಕಲಾಗಿದೆ. ನನ್ನ ಮಗಳ ಸಾವಿಗೆ ನ್ಯಾಯ ಬೇಕು ಎಂದು ಮೃತ ಸಂಗೀತಾಳ ತಾಯಿ ಕಸ್ತೂರಿ ಆಗ್ರಹಿಸಿದರು.

ಸಹೋದರಿಯ ಪತಿ ವೆಂಕಟೇಶ್ ಪದೇ ಪದೇ ಹಣಕ್ಕಾಗಿ ಬೇಡಿಕೆಯಿಡುತ್ತಿದ್ದ. ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಹೇಳುತ್ತಿದ್ದಾನೆ. ಆದರೇ, ಆಕೆಯ ದೇಹದ ಮೇಲೆ ಹೊಡೆತದ ಗಾಯಗಳಿವೆ. ಸಹೋದರಿಯ ಸಾವಿಗೆ ಕಾರಣವಾದ ಪತಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಮೃತಳ ಸಹೋದರಿ ಗೀತಾ ಆಗ್ರಹಿಸಿದರು.

ಸಂಗೀತಾ ನನಗಿಂತ ಚಿಕ್ಕವಳು. ಆಕೆಯ ಪತಿ ನಿರಂತರ ಕಿರುಕುಳ ನೀಡಿದ್ದಾನೆ. ಆಕೆಯ ಮೇಲೆ ಹಲ್ಲೆ ಮಾಡಲಾಗಿದೆ. ಹೊಡೆದು ಆಕೆಯ ಜೀವವನ್ನು ತೆಗೆಯಲಾಗಿದೆ ನಮಗೆ ನ್ಯಾಯ ಬೇಕೆಂದು ಇನ್ನೋರ್ವ ಸಹೋದರಿ ಹೇಳಿದರು.

ಘಟನಾ ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದರ ಕುರಿತು ತನಿಖೆಯ ಬಳಿಕ ತಿಳಿದು ಬರಲಿದೆ.

Tags:

error: Content is protected !!