Athani

ಅಥಣಿಯ ಸತ್ತಿ ಗ್ರಾಮದ ಬಾರ್‌ನಲ್ಲಿ 24×7 ರಾಜಾರೋಷ ಎಣ್ಣೆ ಮಾರಾಟ!

Share

ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ಬಾರ್ ಮಾಲೀಕರ ದರ್ಬಾರ್ ಮಿತಿಮೀರಿದೆ. ಕಾನೂನಿನ ಭಯವಿಲ್ಲದೆ ಹಗಲು-ರಾತ್ರಿ ಮದ್ಯ ಮಾರಾಟ ಮಾಡುತ್ತಿರುವ ಬಾರ್ ಮಾಲೀಕರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.


ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸತ್ತಿ ಗ್ರಾಮದ ಹೊರವಲಯದಲ್ಲಿರುವ ‘ಅನುಶ್ರೀ ಪೆಗ್’ ಬಾರ್‌ನಲ್ಲಿ ಅಬಕಾರಿ ನಿಯಮಗಳು ಗಾಳಿಗೆ ತೂರಲ್ಪಟ್ಟಿವೆ. ಮುಂಭಾಗದ ಬಾಗಿಲು ಮುಚ್ಚಿದಂತೆ ಕಂಡರೂ, ಬಾರ್‌ನ ಹಿಂಬದಿಯ ಮಾರ್ಗವಾಗಿ 24 ಗಂಟೆಯೂ ಎಣ್ಣೆ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ನಿಗದಿಪಡಿಸಿದ ಸಮಯದ ಮಿತಿ ಮೀರಿ ವ್ಯಾಪಾರ ಮಾಡುತ್ತಿದ್ದರೂ, ಅಬಕಾರಿ ಇಲಾಖೆಯ ಅಧಿಕಾರಿಗಳು ಮಾತ್ರ ಮೌನಕ್ಕೆ ಶರಣಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಧಿಕಾರಿಗಳ ಕಣ್ಣೆದುರೇ ಕಾನೂನು ಉಲ್ಲಂಘನೆಯಾಗುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಸತ್ತಿ ಗ್ರಾಮದ ಜನರಲ್ಲಿ ತೀವ್ರ ಅಸಮಾಧಾನ ಮೂಡಿಸಿದ್ದು, ಕೂಡಲೇ ಈ ಅಕ್ರಮಕ್ಕೆ ಬ್ರೇಕ್ ಹಾಕಬೇಕೆಂದು ಒತ್ತಾಯಿಸಿದ್ದಾರೆ.

Tags:

error: Content is protected !!