State

ಖರ್ಗೆ ಸಿಎಂ ಆಗೋದಾದ್ರೆ ನಾವೆಲ್ಲಾ ಸ್ವಾಗತ ಮಾಡ್ತೇವೆ: ಗೃಹ ಸಚಿವ ಪರಮೇಶ್ವರ್

Share

ರಾಜ್ಯ ರಾಜಕಾರಣದಲ್ಲಿ ದಲಿತ ಸಿಎಂ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿಯಾಗುವ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಜಿ. ಪರಮೇಶ್ವರ್, ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿರುವುದು ನಮ್ಮ ಸೌಭಾಗ್ಯ. ಒಂದು ವೇಳೆ ಅವರು ಸಿಎಂ ಆದರೇ ನಾವೆಲ್ಲ ಸ್ವಾಗತ ಮಾಡುತ್ತೇವೆ ಎಂದಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರು ಮನಸ್ಸು ಮಾಡಿದ್ದರೇ ದಲಿತ ಸಿಎಂ ಆಗಿರುತ್ತಿದ್ದರೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಜಿ. ಪರಮೇಶ್ವರ್ ಅವರು, ಸಿಎಂ ವಿಚಾರದಲ್ಲಿ ಬಹಳಷ್ಟು ಮಾಹಿತಿಗಳು ನಮಗಿಲ್ಲ. ಇದರ ಬಗ್ಗೆ ಹೆಚ್ಚು ಮಾತನಾಡುವುದು ಸಮಂಜಸವಲ್ಲ. ಹೈಕಮಾಂಡ್’ಗೆ ಪ್ರತಿಯೊಂದು ವಿಚಾರ ಗೊತ್ತಿರುತ್ತದೆ. ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿರುವುದು ನಮ್ಮ ಸೌಭಾಗ್ಯ. ಪ್ರತಿಯೊಂದು ರಾಜ್ಯದ ರಾಜಕಾರಣ ಅವರಿಗೆ ಗೊತ್ತು. ಅತ್ಯಂತ ಹೆಚ್ಚು ಅನುಭವ ಹೊಂದಿದವರು. ಒಂದು ವೇಳೆ ಅವರು ಸಿಎಂ ಆದರೇ ನಾವೆಲ್ಲ ಸ್ವಾಗತ ಮಾಡುತ್ತೇವೆ ಎಂದರು.

ಹುಬ್ಬಳ್ಳಿಯ ಅಹಿಂದ್ ಸಮಾವೇಶಕ್ಕೆ ಸಂಬಂಧಿಸಿದಂತೆ ಶಿಕ್ಷಣ, ಉದ್ಯೋಗ ಸೇರಿದಂತೆ ಎಲ್ಲದರಲ್ಲೂ ಹಿಂದುಳಿದಿದ್ದಾರೆ. ಸಂಪೂರ್ಣ ಕಾರ್ಯಗತವಾಗಬೇಕಾದರೇ, ಸಮಾವೇಶಗಳಾಗಬೇಕು. ದಲಿತ ಸಮುದಾಯ ಕೂಡ ಅಹಿಂದ್’ನಲ್ಲೇ ಸೇರಿದೆ ಎಂದರು.
ಇನ್ನು ಒಳಮೀಸಲಾತಿ ಅಧಿಸೂಚನೆ ಜಾರಿಯಾಗುತ್ತಲೇ ನೇಮಕಾತಿ ಆರಂಭಗೊಳ್ಳಲಿವೆ ಎಂದರು. ಅಲ್ಲದೇ ವಿನಯ್ ಕುಲಕರ್ಣಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಇದು ಸಭಾಪತಿಗಳಿಗೆ ಬಿಟ್ಟದ್ದು. ಪ್ರೋಸಿಜರ್’ನಲ್ಲಿ ಕ್ರಮಕೈಗೊಳ್ಳುತ್ತಾರೆ. ಯಾರೂ ಕೂಡ ಉಲ್ಲಂಘಟನೆ ಮಾಡಲು ಸಾಧ್ಯವಿಲ್ಲ ಎಂದರು.

Tags:

error: Content is protected !!