Chikkodi

ಉತ್ತಮ ಆರೋಗ್ಯಕ್ಕಾಗಿ ಸೈಕ್ಲೋಥಾನ್,ಸೈಕ್ಲೋಥಾನಗೆ ಕೆಎಂಎಫ್ ನಿರ್ದೇಶಕ ವಿವೇಕರಾವ ಪಾಟೀಲ ಚಾಲನೆ

Share

ಚಿಕ್ಕೋಡಿ:ರಾಯಬಾಗ ತಾಲೂಕಿನ ಬೆಕ್ಕೇರಿ ಗ್ರಾಮದಲ್ಲಿ ಲಕ್ಕವ್ವದೇವಿ ಜಾತ್ರಾಮಹೋತ್ಸವ ಅಂಗವಾಗಿ ಸೈಕ್ಲೋಥಾನ ಜರುಗಿತು.ಸೈಕ್ಲೋಥಾನಗೆ ಬೆಳಗಾವಿಯ ಕೆಎಂಎಫ್ ನಿರ್ದೇಶಕ,ಮಾಜಿ ವಿಧಾನಪರಿಷತ ಸದಸ್ಯ ವಿವೇಕರಾವ ಪಾಟೀಲಯವರು ಸೈಕಲ ಚಲಾಯಿಸುವ ಮೂಲಕ ಚಾಲನೆಯನ್ನು ನೀಡಿದರು.

ಲಕ್ಕವ್ವದೇವಿ ಜಾತ್ರಾಕಮೀಟಿ,ರಾಯಬಾಗ ಸೈಕ್ಲಿಂಗ್ ‌ಕ್ಲಬ್ ಹಾಗೂ ಬಾಗಿ ಸೋಷಿಯಲ್ ಕ್ಲಬ್ ನ ಸಂಯುಕ್ತ ಆಶ್ರಯದಲ್ಲಿ ಸೈಕ್ಲೋಥಾನ ಆಯೋಜಿಸಲಾಗಿತ್ತು.
ಈ ಸೈಕ್ಲೋಥಾನನಲ್ಲಿ 50 ಕ್ಕೂ ಹೆಚ್ಚು ಸೈಕಲ್ ಪಟುಗಳು ಭಾಗವಹಿಸಿದ್ದರು.ಈ ಸೈಕ್ಲೋಥಾನವು ಲಕ್ಕವ್ವದೇವಿ ದೇವಸ್ಥಾನದ ಮೂಲಕ ಪ್ರಾರಂಭವಾಗಿ ರಾಯಬಾಗ ಪಟ್ಟಣದಾದ್ಯಂತ ಸಂಚರಿಸಿ ಮತ್ತೆ ಬೆಕ್ಕೇರಿ ಗ್ರಾಮದ ಲಕ್ಕವ್ವದೇವಿಯ ದೇವಸ್ಥಾನದಕ್ಕೆ ಬಂದು ತಲುಪಿತು.
ಈ ಸೈಕ್ಲೋಥಾನದಲ್ಲಿ ಸಣ್ಣಮಕ್ಕಳು,ಯುವಕರು,ಮಹಿಳೆಯರು, ವೃಧ್ದರು ಅತ್ಯಂತ ಉತ್ಸಾಹದಿಂದ ಭಾಗಿಯಾಗಿದ್ದರು.ಸೈಕ್ಲೋಥಾನಲ್ಲಿ ಭಾಗವಹಿಸಿದವರಿಗೆ ಮೆಡಲ್ಸ್ ಹಾಗೂ ಪ್ರಮಾಣ ಪತ್ರವನ್ನು ‌ನೀಡಿ ಗೌರವಿಸಲಾಯಿತು. ಇದೇ ಸಮಯದಲ್ಲಿ ಸೈಕ್ಲೋಥಾನನಲ್ಲಿ ಭಾಗವಹಿಸಿದ ಸೈಕಲ್ ಪಟುಗಳು ಮಾಧ್ಯಮಗಳ ಜೊತೆಗೆ ‌ಮಾತನಾಡಿ ಸೈಕಲ್ ಸವಾರಿಯಿಂದ ಉತ್ತಮ ಆರೋಗ್ಯ ಪಡೆದುಕೊಳ್ಳಲು ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಾಧ್ಯವಾಗುತ್ತದೆ.ಪ್ರತಿನಿತ್ಯದ ಕಾರ್ಯಚಟುವಟಿಕೆಯಲ್ಲಿ ಸೈಕಲ್ ಬಳಕೆ ಮಾಡುವುದ ಉತ್ತಮ.ಇವತ್ತು ಸುಮಾರು 12 ಕಿ.ಮೀ ನವರೆಗೆ ಸೈಕ್ಲೋಥಾನ ನಡೆದಿದೆ.ಪ್ರತಿಯೊಬ್ಬರು ಸೈಕಲ್ ಬಳಕೆ ಮಾಡಿ ಎಂದು ಮನವಿಯನ್ನು ಮಾಡಿಕೊಂಡರು.

ಈ ಸಂದರ್ಭದಲ್ಲಿ ಬಾಗಿ ಸೋಷಿಯಲ್ ಕ್ಲಬನ ಅಧ್ಯಕ್ಷರಾದ ರಾಜು ಅಳಾಜ ,ವಿಶ್ವನಾಥ ಅಳಾಜ,ಹನುಮಂತ ಟಕ್ಕನವರ,ಜಿತೇಂದ್ರ ಶೆಟ್ಟಿ,ಬಸಪ್ಪ ನಾಗೌಡರ,ಬಸು ನನದಿ,ಮನೋಹರ ನಾನಾಪಗೋಳ,ಭೀಮು ನಾನಾಪಗೋಳ,ರಮೇಶ ಕುಲಕರ್ಣಿ ಜಿಲ್ಲೆಯ ಸೈಕಲ್ ಪಟುಗಳು ಭಾಗಿಯಾಗಿದ್ದರು.

Tags:

error: Content is protected !!