Vijaypura

ಬೈಕ್ ಮತ್ತು ಕಾರ್ ನಡುವೆ ಮುಖಾಮುಖಿ ಡಿಕ್ಕಿ: ನಿವೃತ್ತ ಶಿಕ್ಷಕನ ದುರ್ಮರಣ

Share

ಬೈಕ್ ಮತ್ತು ಕಾರ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ ದುರ್ಘಟನೆ ಬಿಜ್ಜಳ ಹೆದ್ದಾರಿಯಲ್ಲಿ ನಡೆದಿದೆ.

.ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ವಡವಡಗಿ ಕ್ರಾಸ್ ಹತ್ತಿರ ನಿನ್ನೆ ಮಂಗಳವಾರ ತಡರಾತ್ರಿ ಬೈಕ್ ಮತ್ತು ಕಾರ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ 60 ವರ್ಷದ ನಿವೃತ್ತ ಶಿಕ್ಷಕ ಅಮೀರಪ್ಪ ಯಮನಪ್ಪ ನಾಯ್ಕೋಡಿ ಎಂಬ ಬೈಕ್ ಸವಾರ ಗಂಭೀರ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಾತ್ರಿ ತೋಟದಿಂದ ಮನೆಗೆ ಹಿಂತಿರುಗುವಾಗ ಈ ದುರ್ಘಟನೆ ಸಂಭವಿಸಿದೆ. ಈ ಘಟನೆಯು ಬಸವನ ಬಾಗೇವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Tags:

error: Content is protected !!