ಹುಕ್ಕೇರಿ ನಗರದಲ್ಲಿ ಉತ್ಸಾಹಿ ರಾಜ್ಯೋತ್ಸವ ಸಮಿತಿ ವತಿಯಿಂದ ಅದ್ದೂರಿಯಾಗಿ ರಾಜ್ಯೋತ್ಸವ ಮೇರವಣೆಗೆ ಜರುಗಿಸಲಾಯಿತು.
ಬೆಳಗಿನ ಜಾವ ಅಡವಿ ಸಿದ್ದೇಶ್ವರ ಮಠದ ಆವರಣದಲ್ಲಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಮಹಾಸ್ವಾಮ೮ಗಳ ಮತ್ತು ಮಂಜುನಾಥ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ನಾಡ ದೇವಿ ಭುವಮೇಶ್ವರಿ ಭಾವ ಚಿತ್ರಕ್ಕೆ ಉದ್ಯಮಿ ಪವನ ಕತ್ತಿ ಪೂಜೆ ಸಲ್ಲಿಸಿ ನಾಡು ನುಡಿ ಸಂಸ್ಕೃತಿ ಬಿಂಬಿಸುವ ರೂಪಕ ಮತ್ತು ವಾದ್ಯ ಗಳೊಂದಿಗೆ ಮೇರವಣೆಗೆಗೆ ಚಾಲನೆ ನೀಡಲಾಯಿತು.

ಮಾದ್ಯಮಗಳೊಂದಿಗೆ ಮಾತನಾಡಿದ ಪವನ ಕತ್ತಿ ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಆಚರಿಸುವ ರಾಜ್ಯೋತ್ಸವ ಸಾಂಸ್ಕೃತಿಕ ವಾದ್ಯಗಳ ಜೋತೆಗೆ ಯುವಕರಿಗಾಗಿ ಡಿ ಜೆ ಸಹ ಏರ್ಪಡಿಸಲಾಗಿದೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಶಾಂತ ರೀತಿಯಿಂದ ಭಾಗವಹಿಸಬೇಕು ಎಂದರು

ನಂತರ ಮೇರವಣೆಗೆ ಕೋರ್ಟ ಸರ್ಕಲ್ ಬಳಿ ಬಂದಾಗ ಶಾಸಕ ನಿಖಿಲ್ ಕತ್ತಿ ಮತ್ತು ವಿದ್ಯುತ್ ಸಹಕಾರಿ ಸಂಘದ ನಿರ್ದೆಶಕ ವಿನಯ ಪಾಟೀಲ ಡಿ ಜೆ ಸೌಂಡ ತಾಳಕ್ಕೆ ಹೆಜ್ಜೆ ಹಾಕಿ ಕುಣಿದರು ,ತಡ ರಾತ್ರಿ ವರಗೆ ನಡೆದ ಮೇರವಣೆಗೆ ಯಲ್ಲಿ ಯುವಕರು ಕುಣಿದು ಕುಪ್ಪಳಿಸಿದರು.

ವಿದ್ಯುತ್ ಸಹಕಾರಿ ಸಂಘದ ಅದ್ಯಕ್ಷ ಮಹಾವೀರ ನಿಲಜಗಿ ಮಾತನಾಡಿ ಕಳೆದ 6 ವರ್ಷಗಳಿಂದ ಹುಕ್ಕೇರಿ ಉತ್ಸಾಹಿ ರಾಜ್ಯೋತ್ಸವ ಸಮಿತಿ ವತಿಯಿಂದ ಜಾತಿ ಮತ ಭೇಧ ವಿಲ್ಲದೆ ಗುರು ಹಿರಿಯರು ಯುವಕರು ರಾಜ್ಯೋತ್ಸವದಲ್ಲಿ ಪಾಲ್ಗೊಂಡು ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎಂದರು
ಈ ಸಂದರ್ಭದಲ್ಲಿ ಹುಕ್ಕೇರಿ ತಾಲೂಕಿನ ಸಾವಿರಾರು ಜನ ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು.
ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.
