ಭಕ್ತ ಕನಕದಾಸರ ಆದರ್ಶಗಳು ನಮಗೆ ಮಾರ್ಗದರ್ಶನವಾಗಿವೆ ಎಂದು ಹುಕ್ಕೇರಿ ತಾಲೂಕಾ ಹಾಲಮತ ಸಮಾಜದ ಅದ್ಯಕ್ಷ ಜಯಪ್ರಕಾಶ ಕರಜಗಿ ಹೇಳಿದರು.

ಭಕ್ತ ಕನಕದಾಸರ 539 ನೇ ಜಯಂತಿ ಅಂಗವಾಗಿ ಹುಕ್ಕೇರಿ ತಾಲೂಕಾ ಆಡಳಿತ ಮತ್ತು ಹಾಲಮತ ಸಮಾಜ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮ ವನ್ನು ಸಮಾಜದ ಹಿರಿಯರು ಮತ್ತು ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೆಶಕ ಶಂಕರರಾವ ಹೆಗಡೆ ಯವರ ಅದ್ಯಕ್ಷತೆಯಲ್ಲಿ ಅಡವಿ ಸಿದ್ದೇಶ್ವರ ಮಠದ ಆವರಣದಲ್ಲಿ ಭಕ್ತ ಕನಕದಾಸರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮೇರವಣೆಗೆ ಚಾಲನೆ ನೀಡಲಾಯಿತು.

ಕ್ಷೇತ್ರ ಶಿಕ್ಷಣ ಅಧಿಕಾರಿ ಶ್ರೀಮತಿ ರೇವತಿ ಮಠದ ಮಾತನಾಡಿ ದಾಸ ಶ್ರೇಷ್ಠ ರಲ್ಲಿ ಒಬ್ಬರಾದ ಕನಕದಾಸರ ತತ್ವ ಆದರ್ಶಗಳು ನಮಗೆ ನಿತ್ಯ ನೂತನ ವಾಗಿವೆ ಎಲ್ಲರಿಗೂ ಕನಕದಾಸರ ಜಯಂತಿಯ ಶುಭಾಶಯಗಳು ಹೇಳಿದರು
ಹಾಲುಮತ ಸಮಾಜದ ತಾಲೂಕಾ ಕಾರ್ಯದರ್ಶಿ ಭೀಮಸೇನ ಭಾಗಿ ಮಾತನಾಡಿ ರಾಜ್ಯ ಸರ್ಕಾರದ ವತಿಯಿಂದ ಕನಕದಾಸರ ಜಯಂತಿ ಆಚರಿಸುವ ರೀತಿಯಲ್ಲಿ ಜನೆವರಿ 26 ಮತ್ತು ಅಗಷ್ಟ 15 ರಂದು ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವಂತೆ ಸರ್ಕಾರ ಆದೇಶ ನೀಡಬೇಕು ಎಂದು ಆಗ್ರಹಿಸಿದರು

ಮೇರವಣೆಗೆ ಯಲ್ಲಿ ಡೋಳ್ಳು ಕುಣಿತ, ಮಕ್ಕಳಿಂದ ವೇಷ ಭೂಷಣ ಸೇರಿದಂತೆ ವಾದ್ಯ ಮೇಳಗಳ ಮೇರಗು ನೋಡುಗರ ಕಣ್ಮಣಸೆಳೆಯಿತು.
ಕುರುಬರ ಸಂಘದ ತಾಲೂಕಾ ಅದ್ಯಕ್ಷ ಜಯಪ್ರಕಾಶ ಕರಜಗಿ ಮಾತನಾಡಿ ಕನಕದಾಸರು ಕೆವಲ ಹಾಲಮತ ಸಮಾಜಕ್ಕೆ ಮಾತ್ರವಲ್ಲದೆ ಸರ್ವ ಧರ್ಮಕ್ಕೆ ಮಾದರಿಯಾಗಿದ್ದಾರೆ ಅವರ ತತ್ವ ಆದರ್ಶಗಳು ನಮಗೆ ಮಾರ್ಗದರ್ಶನವಾಗಿವೆ ಎಂದರು
ನಂತರ ನಡೆದ ಕಾರ್ಯಕ್ರಮ ದಲ್ಲಿ ಚಂದ್ರಶೇಖರ ಮಹಾಸ್ವಾಮಿಗಳು ಮತ್ತು ಮಂಜುನಾಥ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ವಿದ್ಯುತ್ ಸಹಕಾರಿ ಸಂಘದ ನಿರ್ದೆಶಕ ಗಜಾನನ ಕೋಳ್ವಿ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಭೀಮರಾವ ಗಂಟಿ, ಸಿದ್ದಪ್ಪಾ ಏಗನ್ನವರ, ಹಾಲಪ್ಪಾ ಕುಡಬಾಳಪ್ಪಗೋಳ, ಡಾ, ಶಿವಾಜಿ ಗೋಟೂರಿ, ಸಿದರಾವ ಢವಳೇಶ್ವರ, ಮಕ್ತಾರ ನದಾಫ ರಾಯಪ್ಪ ಹೇಗಡೆ, ಸುಭಾಷ ಕೇಸರಕರ, ಅಶೋಕ ಡುಮ್ಮನವರ, ಎಸ್ ನಂಜುಡಪ್ಪ, ಶಾನೂಲ ತಹಸಿಲ್ದಾರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.
